ತಂಡದಿಂದ ಹಲ್ಲೆ: ಆರೋಪ ಮಹಿಳೆ, ಮಗು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು
Team Udayavani, Jul 12, 2023, 5:02 AM IST
ಕಡಬ: ಮಗುವಿಗೆ ಔಷಧ ತರಲೆಂದು ಆಟೋದಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾದಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಪರಿಣಾಮ ಮಹಿಳೆ, ಪುಟಾಣಿ ಮಗು ಸಹಿತ ನಾಲ್ವರು ಕಡಬ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಕಲ್ಲುಗುಡ್ಡೆಯಲ್ಲಿ ನಡೆದಿದೆ.
ಆರ್ಲ ನಿವಾಸಿ, ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ, ಪುತ್ರ ಐಮಾನ್, ಫೌಝಿಯಾ ಅವರ ತಂದೆ ಅಬ್ಟಾಸ್ ಮತ್ತು ಮಗು ಆಸ್ಪತ್ರೆಗೆ ದಾಖಲಾದವರು.
ಸೋಮವಾರ ರಾತ್ರಿ ವೇಳೆ ಆದಂ ಅವರ ಅಟೋದಲ್ಲಿ ಇವರು ಔಷಧಕ್ಕೆಂದು ತೆರಳುತ್ತಿದ್ದಾಗ ಕಾರಿನಲ್ಲಿ ಆಗಮಿಸಿ ನೆರೆಮನೆಯವರಾದ ಮಜಿದ್, ಅಶ್ರಫ್, ಅಬ್ಟಾಸ್ ರಿಕ್ಷಾದಿಂದ ಅವರನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾಗದ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಅವರ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಸಂಜೆಯ ವೇಳೆ ಪೌಝಿಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ