PM Rishi sunak; ಜನಾಂಗೀಯ ದ್ವೇಷ ಅನುಭವಿಸಿದ್ದೆ…
Team Udayavani, Jul 3, 2023, 7:27 AM IST
ಲಂಡನ್: ತಾವು ಕೂಡ ಜನಾಂಗೀಯ ದ್ವೇಷ ಅನುಭವಿಸಿದ್ದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಿಳಿಸಿದ್ದಾರೆ.
ಬ್ರಿಟನ್ ರಾಜಧಾನಿ ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವರ್ಸಸ್ ಆಸ್ಟ್ರೇಲಿಯಾ ಆ್ಯಷಸ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಅವರು ವಿಶೇಷ ಭೇಟಿ ನೀಡಿದ್ದರು. ಈ ವೇಳೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದರು.
ಎಲ್ಲಾ ಹಂತದ ಕ್ರಿಕೆಟ್ನಲ್ಲಿ ಜನಾಂಗೀಯ ದ್ವೇಷ, ಲಿಂಗ ಭೇದ, ಪ್ರತ್ಯೇಕತಾವಾದ, ವರ್ಗಾಧಾರಿತ ಪಕ್ಷಪಾತ ಆಳವಾಗಿ ಬೇರೂರಿದೆ ಎಂಬ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕ್ರಿಕೆಟ್ನಲ್ಲಿ ನನಗೆ ಈ ಅನುಭವ ಆಗಿಲ್ಲ. ಆದರೆ ಜೀವನದ ಆರಂಭಿಕ ದಿನಗಳಲ್ಲಿ ನನಗೆ ಜನಾಂಗೀಯ ದ್ವೇಷದ ಅನುಭವ ಆಗಿದೆ,” ಎಂದು ಹೇಳಿದ್ದಾರೆ.
“ನನ್ನ ಕೆಲಸದಲ್ಲಿ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷವೂ ಟೀಕೆಗಳನ್ನು ಎದುರಿಸುತ್ತೇನೆ. ಆದರೆ ಜನಾಂಗೀಯ ದ್ವೇಷವು ನಿಮ್ಮನ್ನು ಕುಟುತ್ತದೆ, ನೋಯಿಸುತ್ತದೆ,” ಎಂದಿದ್ದಾರೆ.
ರಾಹುಲ್ ಡ್ರಾವಿಡ್ ಅಚ್ಚು ಮೆಚ್ಚು:
“ಕ್ರಿಕೆಟ್ ಆಟಗಾರರಲ್ಲಿ ನನಗೆ ರಾಹುಲ್ ಡ್ರಾವಿಡ್ ಅಚ್ಚು ಮೆಚ್ಚು. ಅವರ ತಂತ್ರಗಾರಿಕೆ, ವರ್ತನೆ, ವ್ಯಕ್ತಿತ್ವ ನನಗೆ ಇಷ್ಟ,” ಎಂದು ರಿಷಿ ಸುನಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!
UAE Rains: ಭಾರೀ ಗಾಳಿ-ಮಳೆಗೆ ನಲುಗಿದ ಯುಎಇ; ಹಲವು ವಿಮಾನ ಸಂಚಾರ ರದ್ದು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು