Manipal ನಿಯಮಾವಳಿ ಉಲ್ಲಂಘಿಸಿ ಪಾರ್ಟಿ: ಪ್ರಕರಣ ದಾಖಲು
Team Udayavani, Apr 9, 2024, 12:54 AM IST
ಮಣಿಪಾಲ: ನಿಯಮ ಉಲ್ಲಂಘಿಸಿ ರೆಸ್ಟೋರೆಂಟ್ನಲ್ಲಿ ಮ್ಯೂಸಿಕ್ ಹಾಕಿ ಪಾರ್ಟಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ರೆಸ್ಟೋರೆಂಟ್ನ ವ್ಯವಸ್ಥಾಪಕ ಹಾಗೂ ಮಾಲಕರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸ್ ನಿರೀಕ್ಷಕರು ಎ. 7ರ ತಡರಾತ್ರಿ ರೌಂಡ್ಸ್ನಲ್ಲಿದ್ದಾಗ ಪೆರಂಪಳ್ಳಿ ರಸ್ತೆಯ ಬಳಿ ಇರುವ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಮ್ಯೂಸಿಕ್ ಹಾಕಿ ಪಾರ್ಟಿ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ವ್ಯವಸ್ಥಾಪಕ ಮಿಥುನ್ ಕುಮಾರ್ ಅವರಲ್ಲಿ ವಿಚಾರಿಸಿದಾಗ ಬಾರ್ನ ಮಾಲಕ ದಿನೇಶ್ ಬಿ. ಅವರಲ್ಲಿ ಅನುಮತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದರು.
ಆದರೆ ಅವರಿಬ್ಬರೂ ಅಬಕಾರಿ ಇಲಾಖೆಯ ಪರವಾನಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಯಾವುದೇ ಅನುಮತಿ ಇಲ್ಲದೇ ಮ್ಯೂಸಿಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ