ಭರ್ತಿಯಾದ ಸುವರ್ಣಾವತಿ ಜಲಾಶಯ : ನದಿ ಹಾಗೂ ನಾಲೆಗೆ ನೀರು ಬಿಡುಗಡೆ


Team Udayavani, Nov 14, 2021, 9:48 PM IST

ಭರ್ತಿಯಾದ ಸುವರ್ಣಾವತಿ ಜಲಾಶಯ : ನದಿ ಹಾಗೂ ನಾಲೆಗೆ ನೀರು ಬಿಡುಗಡೆ

ಚಾಮರಾಜನಗರ : ತಮಿಳುನಾಡಿನ ದಿಂಬಂ, ಸತ್ಯಮಂಗಲ, ರಾಜ್ಯದ ಬಿಆರ್ ಟಿ ಅರಣ್ಯ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿರುವ ಕಾರಣ, ತಾಲೂಕಿನ ಸುವರ್ಣಾವತಿ ಜಲಾಶಯ ಭರ್ತಿಯಾಗಿದ್ದು, 600 ಕ್ಯುಸೆಕ್ ನೀರನ್ನು ನದಿ ಹಾಗೂ ನಾಲೆಗೆ ಬಿಡಲಾಗುತ್ತಿದೆ.

ಸುವರ್ಣಾವತಿ ಜಲಾಶಯ ಭರ್ತಿಯಾಗಲು ಕೇವಲ 5 ಇಂಚು ಬಾಕಿಯಿದ್ದ ಕಾರಣ, ಭಾನುವಾರ ಬೆಳಗಿನ ಜಾವ ನೀರು ಹೊರ ಬಿಡಲಾಯಿತು. ಮೂರು ಕ್ರೆಸ್‌ಟ್ ಗೇಟ್ ಗಳ ಪೈಕಿ 2 ಕ್ರೆಸ್‌ಟ್ ಗೇಟ್‌ಗಳ ಮೂಲಕ 450 ಕ್ಯುಸೆಕ್ ನೀರನ್ನು ನದಿಗೆ, 150 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ. ನಾಲೆಗೆ ಬಿಡಲಾಗಿರುವ ನೀರು ಸುವರ್ಣಾವತಿ ವ್ಯಾಪ್ತಿಗೊಳಪಟ್ಟ 13 ಕೆರೆಗಳಿಗೆ ಹರಿಯುತ್ತಿದೆ.

ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ 2,455 ಅಡಿಯಿದ್ದು, ಶನಿವಾರ ರಾತ್ರಿ 2,454.5 ಅಡಿಗೆ ತಲುಪಿದ ಕಾರಣ ಭಾನುವಾರ ಬೆಳಗಿನ ಜಾವ ಗೇಟ್ ತೆರೆದು ನೀರು ಹರಿಸಲಾಯಿತು. ತಮಿಳುನಾಡಿನ ದಿಂಬಂ, ಬೇಡಗುಳಿ ಸೇರಿದಂತೆ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಈ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಯಿತು.

ನೆರೆಯ ತಮಿಳುನಾಡು, ಬಿ ಆರ್ ಟಿ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಸುವರ್ಣಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ನದಿ ಹಾಗೂ ನಾಲೆಗೆ ಸುವರ್ಣಾವತಿಯಿಂದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಭಾನುವಾರ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ, ಆ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು. ಸುಮಾರು 6 ವರ್ಷಗಳ ಬಳಿಕ ಜಲಾಶಯ ಭರ್ತಿಯಾಗಿದೆ.

ಸುವರ್ಣಾವತಿ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ1.26 ಟಿಎಂಸಿ ಇದ್ದು, ಭಾನುವಾರ 1.2 ಟಿಎಂಸಿ ನೀರಿತ್ತು.

ಇದನ್ನೂ ಓದಿ : ನೇಪಾಳದಲ್ಲಿ ಸರೋವರಕ್ಕೆ ಬಿದ್ದ ಕಾರು : ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವು

ಚಿಕ್ಕಹೊಳೆ ಭರ್ತಿಗೆ 5 ಅಡಿ ಬಾಕಿ :
ಸುವರ್ಣಾವತಿ ಜಲಾಶಯದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಚಿಕ್ಕಹೊಳೆಯ ಗರಿಷ್ಠ ಮಟ್ಟ 2,474 ಅಡಿ. ಈಗ 2,469 ಅಡಿಗಳಷ್ಟು ನೀರು ತುಂಬಿದೆ. ಇನ್ನೂ 5 ಅಡಿ ನೀರು ಹರಿದು ಬಂದರೆ ಚಿಕ್ಕಹೊಳೆ ಜಲಾಶಯವೂ ತುಂಬುತ್ತದೆ. ತಮಿಳುನಾಡಿನ ತಲಮಲೈ, ತಾಳವಾಡಿ, ಕೊಂಗಳ್ಳಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಈ ಜಲಾಶಯದ ಜಲಾನಯನ ಪ್ರದೇಶಗಳಾಗಿವೆ. ಈ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಚಿಕ್ಕಹೊಳೆಗೆ ನೀರು ಹರಿದುಬರುತ್ತಿದೆ. ಭಾನುವಾರ 100 ಕ್ಯುಸೆಕ್ ಒಳ ಹರಿವು ಇತ್ತು. ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳನ್ನು ಅವಳಿ ಜಲಾಶಯಗಳು ಎಂದೇ ಕರೆಯಲಾಗುತ್ತದೆ.

ಚಿಕ್ಕಹೊಳೆ ಜಲಾಶಯದ ಗರಿಷ್ಠ ಸಾಮರ್ಥ್ಯ 0.37 ಟಿಎಂಸಿ (372 ದಶಲಕ್ಷ ಘನ ಅಡಿ) ಇದ್ದು, ಭಾನುವಾರ 0.29 ಟಿಎಂಸಿ ಇತ್ತು .

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.