ಟಿ20 ಬ್ಯಾಟಿಂಗ್ ರ್ಯಾಂಕಿಂಗ್: ಸೂರ್ಯನೇ ನಂ.1
Team Udayavani, Apr 13, 2023, 7:59 AM IST
ದುಬಾೖ: ತೀವ್ರ ರನ್ ಬರಗಾಲದಲ್ಲಿದ್ದರೂ ಸೂರ್ಯ ಕುಮಾರ್ ಯಾದವ್ ನೂತನ ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 906 ರೇಟಿಂಗ್ ಅಂಕ ಹೊಂದಿದ್ದಾರೆ.
ಮೊಹಮ್ಮದ್ ರಿಜ್ವಾನ್ (811), ಬಾಬರ್ ಆಜಂ (755), ಐಡನ್ ಮಾರ್ಕ್ರಮ್ (748), ಡೇವನ್ ಕಾನ್ವೇ (745) ಅನಂತರದ ಸ್ಥಾನ ದಲ್ಲಿದ್ದಾರೆ.