ಮೇಲಾಧಿಕಾರಿಗಳ ಕಿರುಕುಳ; ಶಿಕ್ಷಕ ಆತ್ಮಹತ್ಯೆ: ಬಿಇಒ ಸೇರಿ ನಾಲ್ವರ ಅಮಾನತು

Team Udayavani, Feb 13, 2023, 5:14 PM IST

1-dwasaS

ವಿಜಯಪುರ : ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿ ಆವರಣದಲ್ಲಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿತಾಗಿದೆ. ಘಟನೆಗೆ ಮೆಲಾಧಿಕಾರಿಗಳ ಕಿರುಕುಳ ಕಾರಣವೆಂದು ಸಾಯುವ ಮುನ್ನ ಶಿಕ್ಷಕ ಬರೆದಿರುವ ಪತ್ರದ ಆಧಾರದ ಮೇಲೆ ಸಿಂದಗಿ ಬಿಇಒ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.

ಸಿಂದಗಿ ತಾಲೂಕಿನ ಸಾಸಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಸವರಾಜ ನಾಯಕಲ್ ಎಂಬವರು ಡೆತ್ ನೋಟ್ ಬರೆದಿಟ್ಟು ಸಿಂದಗಿ ತಹಶಿಲ್ದಾರ ಕಛೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲಿಸ್ ತನಿಖೆಯ ವೇಳೆ ಮರಣ ಪೂರ್ವ ಶಿಕ್ಷಕ ಬರೆದ ಪತ್ರ ಪತ್ತೆಯಾಗಿದೆ. ತನ್ನ ಆತ್ಮಹತ್ಯೆಗೆ ಸಾಸಬಾಳ ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಎಸ್.ಎಲ್. ಭಜಂತ್ರಿ, ಸಿಂದಗಿ ಬಿಇಓ ಎಂ.ಎಚ್.ಹರನಾಳ, ಗೋಲಗೇರಿ ಸಿಆರ್‌ಪಿ ಜಿ.ಎನ್.ಪಾಟೀಲ ಹಾಗೂ ಸದರಿ ಶಾಲೆಯ ಶಿಕ್ಷಕ ಬಿ.ಎನ್‌.ತಳವಾರ ಇವರು ನೀಡುತ್ತಿರುವ ಕಿರುಕುಳ ತಾಳದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಸದರಿ ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಎಸ್. ಎಲ್. ಭಜಂತ್ರಿ, ಮುಖ್ಯೋಪಾಧ್ಯಾಯ ಹುದ್ದೆಗೆ ಸಂಬಂಧಿಸಿದಂತೆ ನನಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಸ್ತಾಂತರ ಮಾಡದೇ, ಬಸವರಾಜ ಎಂಬವರಿಗೆ ಬಿಟ್ಟು ಕೊಟ್ಟಿದ್ದರು.

ಅಧಿಕಾರ ಬಿಟ್ಟುಕೊಟ್ಟ ಬಳಿಕ ಭಜಂತ್ರಿ ಸತಾಯಿಸಿದ್ದಾರೆ. ಈ ಬಗ್ಗೆ ಸಿಂದಗಿ ಬಿಇಒ ಅವರ ಗಮನಕ್ಕೆ ತಂದಿದ್ದರೂ ಕ್ರಮಕೈಗೊಂಡಿಲ್ಲ. ಬದಲಾಗಿ ಸಿಂದಗಿ ಬಿಇಓ ಎಚ್.ಎಂ. ಹರಿನಾಳ ತನಗೇ ನೋಟಿಸ್ ಕೊಡುವ ಮೂಲಕ ಕಿರುಕುಳ ನೀಡುತ್ತಿದ್ದರು. ಗ್ರಾಮದ ಸಂಗಮೇಶ ಚಿಂಚೋಳಿ ಎಂಬವರಿಂದ ನನ್ನ ವಿರುದ್ಧ ಆರೋಪ ಮಾಡಿಸಿ ಸಿಆರ್ ಪಿ ಹಾಗೂ ಸಂಗಮೇಶ ಇವರು ನನ್ನಿಂದ ಹಣ ಪಡೆದಿದ್ದರು ಎಂದು ಮರಣ ಪೂರ್ವ ಪತ್ರದಲ್ಲಿ ಬರೆದಿದ್ದಾರೆ.

ಬಿಸಿಯೂಟ ಯೋಜನೆ ಅಡಿಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದರು. ನನಗಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಆಗಿದೆ ಎಂದು ಪತ್ರದಲ್ಲಿ ತಮ್ಮ ಸಾವಿಗೆ ಕಾರಣವಾದ ಮೇಲಾಧಿಕಾರಿಗಳು, ಅವರು ನೀಡುತ್ತಿದ್ದ ಕಿರುಕುಳದ ಕುರಿತು ವಿವರಿಸಿದ್ದಾರೆ.

ನನ್ನ ಸಾವಿನ ಬಳಿಕ ನನ್ನ ಹೆಂಡತಿ, ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂದಗಿ ಬಿಇಒ ಸೇರಿ ನಾಲ್ವರ ಸಸ್ಪೆಂಡ್

ಸಾಸಬಾಳ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿ ಬಿಇಒ ಎಚ್.ಎಂ. ಹರವಾಳ, ಮೂವರು ಶಿಕ್ಷಕರಾದ ಜಿ.ಎನ್. ಪಾಟೀಲ, ಎಸ್‌.ಎಲ್. ಭಜಂತ್ರಿ, ಬಿ.ಎಂ. ತಳವಾರ ಇವರನ್ನು ಸೇವೆಯಿಂದ ಅಮಾನತು ಮಾಡಿ ವಿಜಯಪುರ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅದೇಶಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಬಸವರಾಜ ನಾಯಕಲ ಮರಣ ಪೂರ್ವ ಪತ್ರದಲ್ಲಿ ನಿಮ್ಮ ಹೆಸರು ಉಲ್ಲೇಖವಿದೆ ಹಾಗೂ ಸಿಂದಗಿ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರಿದ್ಧ ದಾಖಲಾಗಿರುವ ಪ್ರಕರಣದ ಹಿನ್ನಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

ಟಾಪ್ ನ್ಯೂಸ್

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

June. 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

June 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

kejriwal

AAP ಆರೋಪ; ಸಿಎಂ ಕೇಜ್ರಿಗೆ ಜೈಲಿನಲ್ಲಿ ಕೂಲರ್‌ ನೀಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡವರು ಶಾಮೀಲು: ವಿಜಯೇಂದ್ರ ಆರೋಪ

ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡವರು ಶಾಮೀಲು: ವಿಜಯೇಂದ್ರ ಆರೋಪ

ಮಹಿಳೆಯರಿಂದ ವಿಚಾರಣೆಗೆ ಪ್ರಜ್ವಲ್‌ ಆಕ್ಷೇಪ

ಮಹಿಳೆಯರಿಂದ ವಿಚಾರಣೆಗೆ ಪ್ರಜ್ವಲ್‌ ಆಕ್ಷೇಪ

CM Siddaramaiah ನಾಗೇಂದ್ರ ರಾಜೀನಾಮೆ ಬಗ್ಗೆ ವರದಿ ಬಳಿಕ ನಿರ್ಧಾರ

CM Siddaramaiah ನಾಗೇಂದ್ರ ರಾಜೀನಾಮೆ ಬಗ್ಗೆ ವರದಿ ಬಳಿಕ ನಿರ್ಧಾರ

ಡಿಕೆಶಿ ಕಡೆ ನೋಡದ ಎಚ್‌ಡಿಕೆ; ಸಿದ್ದರಾಮಯ್ಯಗೆ ನಮಸ್ಕರಿಸಿ ತೆರಳಿದ ಎಚ್‌ಡಿಕೆ

ಡಿಕೆಶಿ ಕಡೆ ನೋಡದ ಎಚ್‌ಡಿಕೆ; ಸಿದ್ದರಾಮಯ್ಯಗೆ ನಮಸ್ಕರಿಸಿ ತೆರಳಿದ ಎಚ್‌ಡಿಕೆ

ನಿರೀಕ್ಷಣ ಜಾಮೀನು ಕೋರಿ ಭವಾನಿ ಹೈಕೋರ್ಟ್‌ಗೆ ಅರ್ಜಿ

ನಿರೀಕ್ಷಣ ಜಾಮೀನು ಕೋರಿ ಭವಾನಿ ಹೈಕೋರ್ಟ್‌ಗೆ ಅರ್ಜಿ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

Amit Shah

FIR ನಿಂದ ಅಮಿತ್‌ ಶಾ ಹೆಸರು ಕೈಬಿಟ್ಟ ಪೊಲೀಸರು

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

NIA (2)

ISIS ಜತೆ ನಂಟು: 17 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.