Wimbledon: ಮೂರಕ್ಕೇರಿದ ಅಲ್ಕರಾಜ್
Team Udayavani, Jul 8, 2023, 5:13 AM IST
ಲಂಡನ್: ನೆಚ್ಚಿನ ಆಟಗಾರ ಕಾರ್ಲೋಸ್ ಅಲ್ಕರಾಜ್, ಅಲೆಕ್ಸಾಂಡರ್ ಜ್ವೆರೇವ್, ಮ್ಯಾಟಿಯೊ ಬೆರೆಟಿನಿ ವಿಂಬಲ್ಡನ್ ಪಂದ್ಯಾವಳಿಯ ತೃತೀಯ ಸುತ್ತಿಗೆ ಮುನ್ನಡೆದಿದ್ದಾರೆ.
ಅಲ್ಕರಾಜ್ 6-4, 7-6 (7-2), 6-3ರಿಂದ ಅಲೆಕ್ಸಾಂಡರ್ ಮುಲ್ಲರ್ ಅವರನ್ನು ಮಣಿಸಿದರು. ಜ್ವೆರೇವ್ ಜಪಾನ್ನ ಯೊಸುಕೆ ವಟನುಕ ಅವರನ್ನು 6-4, 5-7, 6-2, 6-2 ಅಂತರದಿಂದ ಪರಾಭವಗೊಳಿಸಿದರು.
ವನಿತಾ ವಿಭಾಗ
ವನಿತಾ ವಿಭಾಗದಲ್ಲಿ ವಿಕ್ಟೋರಿಯಾ ಅಜರೆಂಕಾ 3ನೇ ಸುತ್ತು ದಾಟಿ ಮುನ್ನಡೆದಿದ್ದಾರೆ. ಅವರು ದರಿಯಾ ಕಸತ್ಕಿನಾಗೆ 6-2, 6-4 ಅಂತರದ ಸೋಲುಣಿಸಿದರು.
“ಆಲ್ ರಷ್ಯನ್” ಕಾಳಗ
“ಆಲ್ ರಷ್ಯನ್’ ಕಾಳಗವೊಂದರಲ್ಲಿ ಆ್ಯಂಡ್ರೆ ರುಬ್ಲೇವ್ 6-7 (4-7), 6-3, 6-4, 7-5ರಿಂದ ಅಸ್ಲಾನ್ ಕರತ್ಸೇವ್ ಅವರಿಗೆ ಸೋಲುಣಿಸಿದರು. ಬೆಲ್ಜಿಯಂನ ಡೇವಿಡ್ ಗೊಫಿನ್ ಇವರ 3ನೇ ಸುತ್ತಿನ ಎದುರಾಳಿ.
ಕ್ಯಾಸ್ಪರ್ ರೂಡ್ಗೆ ಆಘಾತ
ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದ ಬ್ರಿಟನ್ನ ಲಿಯಮ್ ಬ್ರಾಡಿ ತಮ್ಮ ಟೆನಿಸ್ ಬದುಕಿನ ಅಸಾಮಾನ್ಯ ಜಯವೊಂದನ್ನು ಒಲಿಸಿಕೊಂಡರು. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಫ್ರೆಂಚ್ ಓಪನ್ ಫೈನಲಿಸ್ಟ್, ನಾರ್ವೆಯ 4ನೇ ಶ್ರೇಯಾಂಕದ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು 5 ಸೆಟ್ಗಳ ಹೋರಾಟದಲ್ಲಿ ಮಣಿಸಿದರು. ಅಂತರ 6-4, 3-6, 4-6, 6-3, 6-0.
ವಿಶ್ವ ರ್ಯಾಂಕಿಂಗ್ನಲ್ಲಿ 142ರಷ್ಟು ಕೆಳ ರ್ಯಾಂಕಿಂಗ್ ಹೊಂದಿರುವ ಲಿಯಮ್ ಬ್ರಾಡಿ ಕಳೆದ 5 ಗ್ರ್ಯಾನ್ಸ್ಲಾಮ್ಗಳಲ್ಲಿ 3 ಸಲ ಪ್ರಧಾನ ಸುತ್ತಿನಲ್ಲಿ ಆಡಿದ್ದರೂ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ವಿಂಬಲ್ಡನ್ನಲ್ಲಿ ಮೂರೂ ಸಲ ಫಸ್ಟ್ ರೌಂಡ್ನಲ್ಲೇ ಮುಗ್ಗರಿಸಿದ್ದರು. ಈ ಸಲ 3ನೇ ಸುತ್ತು ಪ್ರವೇಶಿಸುವ ಮೂಲಕ ಭಾರೀ ಸಂಚಲನ ಮೂಡಿಸಿದರು. ನಿರ್ಣಾಯಕ ಸೆಟ್ನಲ್ಲಂತೂ ರೂಡ್ಗೆ ಒಂದೂ ಅಂಕ ಬಿಟ್ಟುಕೊಡಲಿಲ್ಲ. ಮೊದಲ ಸುತ್ತಿನಲ್ಲಿ ಅವರು 6-1, 6-3, 7-5ರಿಂದ ಫ್ರಾನ್ಸ್ನ ಕಾನ್ಸ್ಟಂಟ್ ಲೆಸ್ಟೀನ್ಗೆ ಸೋಲುಣಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ