World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Team Udayavani, Mar 28, 2024, 8:33 PM IST
ಬ್ರೆಸಿಲಿಯಾ: ಇತ್ತೀಚೆಗಷ್ಟೇ ಪತ್ತೆಯಾಗಿ ಭಾರೀ ಸುದ್ದಿಯಾಗಿದ್ದ ಜಗತ್ತಿನ ಅತಿದೊಡ್ಡ ಅನಕೊಂಡ ಸಾವನ್ನಪ್ಪಿದೆ. ಅನಾ ಜೂಲಿಯಾ ಎಂದು ನಾಮಕರಣ ಮಾಡಲಾಗಿದ್ದ ಬೃಹತ್ ಗಾತ್ರದ ಹಾವು ಬೇಟೆಗಾರರ ಗುಂಡು ತಗುಲಿ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತ ಪಡಿಸಲಾಗಿದೆ.
ಬ್ರೆಜಿಲ್ನ ದಕ್ಷಿಣ ಭಾಗದ ಬೊನಿಟೊ ಅರಣ್ಯ ಪ್ರದೇಶ ಡಿಸ್ಕವರಿ ಚಾನೆಲ್ ಚಿತ್ರೀಕರಣದ ವೇಳೆ ಡಚ್ ಜೀವಶಾಸ್ತ್ರಜ್ಞ ಫ್ರೀಕ್ ವೋಂಕ್ ಅವರು ಇತ್ತೀಚೆಗಷ್ಟೇ ಬೃಹದಾಕಾರದ ಹಾವನ್ನು ಪತ್ತೆ ಹಚ್ಚಿದ್ದರು.
ಹಾವು 26 ಅಡಿ ಉದ್ದ, 440 ಪೌಂಡ್ ತೂಕವಿತ್ತು. ಅನಾ ಜೂಲಿಯಾ ಎಂದು ನಾಮಕರಣ ಮಾಡಲಾಗಿತ್ತು, ಫೋಟೋಗಳು ಮತ್ತು ಸುದ್ದಿ ವಿಶ್ವದಾದ್ಯಂತ ವೈರಲ್ ಆಗಿತ್ತು. ಹಾವು ಸತ್ತು ಬಿದ್ದಿದ್ದು, ಅದರ ಫೋಟೋಗಳನ್ನು ವೋಂಕ್ ಹಂಚಿಕೊಂಡು, ಬೇಸರ ವ್ಯಕ್ತ ಪಡಿಸಿದ್ದಾರೆ. ಸಾವಿಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಗುಂಡು ತಗುಲಿ ಗಾಯಗೊಂಡು ಮೃತಪಟ್ಟಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ