ಪೈನ್ ಆ್ಯಂಡ್ ಪಾಲಿಯೇಟಿವ್ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ
Team Udayavani, Sep 19, 2020, 4:48 PM IST
ಕಾಸರಗೋಡು: ಕಾಂಞಂಗಾಡ್ ಸರಕಾರಿ ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಪೈನ್ ಆ್ಯಂಡ್ ಪಾಲಿಯೇಟಿವ್ ಕೇರ್ ಯೂನಿಟ್ ವಾಹನಕ್ಕೆ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಈ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಸಿಬಂದಿ ಸೇವೆ ಶ್ಲಾಘನೀಯ. ರೋಗಿಗಳನ್ನು ಅವರ ಕುಟುಂಬದ ಮಂದಿ ಶುಶ್ರೂಷೆ ಮಾಡುವಲ್ಲಿ ಹಿಂದೇಟು ಹಾಕಿದ ಕೆಲವು ಪ್ರಕರಣಗಳಲ್ಲೂ ಈ ವಿಭಾಗದ ಸಿಬಂದಿಗಳ ಸೇವೆ ನಾಡಿಗೆ ಮಾದರಿ. ಇದು ಮಾನವ ಸೇವೆಯ ಪ್ರತೀಕ. ಇಂಥಾ ವಲಯಕ್ಕೆ ನಿಧಿ ಮೀಸಲಿರಿಸಲು ರಾಜ್ಯ ಸರಕಾರ ಆದ್ಯತೆ ನೀಡುತ್ತಾ ಬಂದಿದೆ ಎಂದರು.
ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೋಮಿಯೋ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ| ಕೆ. ರಾಮಸುಬ್ರಹ್ಮಣ್ಯಂ ಸ್ವಾಗತಿಸಿದರು. ಚೇತನಾ ಪೈನ್ ಆ್ಯಂಡ್ ಪಾಲಿಯೇಟಿವ್ ಕೇಂದ್ರ ಸಂಚಾಲಕಿ ಡಾ| ಅಶ್ವತಿ ವಂದಿಸಿದರು.
ಕಾಂಞಂಗಾಡ್ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರ 2019-20ನೇ ಸ್ಥಳೀಯ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿ ವಾಹನ ಮಂಜೂರಾಗಿದೆ. ಪಾಲಿಯೇಟಿವ್ ಒ.ಪಿ.ಗೆ ದಿನವೊಂದಕ್ಕೆ ಸುಮಾರು 25 ಮಂದಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿನ ಚೇತನ ಪೈನ್ ಆ್ಯಂಡ್ ಪಾಲಿಯೇಟಿವ್ ಕೇರ್ ಕೇಂದ್ರ ಈ ವರೆಗೆ ಖಾಸಗಿ ವಾಹನ ಬಳಸಿ ಅನಿವಾರ್ಯ ಹಂತಗಳಲ್ಲಿ ಸೇವೆಗಾಗಿ ತೆರಳುತ್ತಿದ್ದರು. ಸರಕಾರಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದ ಕಾರಣ ವಾಹನಗಳು ಕ್ರಮೇಣ ಲಭಿಸದೇ ಹೋದ ಪರಿಸ್ಥಿತಿಯಲ್ಲಿ ಸೇವೆಗೆ ತೀವ್ರ ತೊಡಕಾಗುತ್ತಿತ್ತು. ಸ್ವಂತ ವಾಹನ ಲಭಿಸಿದ ಹಿನ್ನೆಲೆಯಲ್ಲಿ ಈಗ ಈ ಸಮಸ್ಯೆ ಬಗೆಹರಿದಿದೆ ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ| ಕೆ.ರಾಮಸುಬ್ರಹ್ಮಣ್ಯಂ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ