Badiyadka; ಇಲಿ ವಿಷ ಸೇವಿಸಿದ ವಿದ್ಯಾರ್ಥಿನಿಯ ಸಾವು
Team Udayavani, Jan 30, 2024, 12:12 AM IST
ಬದಿಯಡ್ಕ: ಯುವಕನಿಂದ ಉಂಟಾದ ನಿರಂತರ ಕಿರುಕುಳ ಹಾಗು ಬೆದರಿಕೆಯನ್ನು ಸಹಿಸಲಾಗದೆ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಂಬ್ಡಾಜೆ ನಿವಾಸಿಯಾದ ಹದಿನಾರರ ಹರೆಯದ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ.
ಈಕೆಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮೊಗ್ರಾಲ್ಪುತ್ತೂರು ಕೋಟೆಕುನ್ನಿನ ಅನ್ವರ್(24)ನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.