ಅನಾಥವಾಗಿರುವ ಕಯ್ನಾರು ಗ್ರಾಮ ಕಚೇರಿ ಹಳೆ ಕಟ್ಟಡ !


Team Udayavani, Dec 21, 2018, 11:31 AM IST

20-kbl-2.jpg

ಕುಂಬಳೆ: ಕಯ್ನಾರು ಗ್ರಾಮ ಕಚೇರಿಯು ಹಿಂದೆ ಜೋಡುಕಲ್ಲು, ಬಳಿಕ ಕಯ್ನಾರು ಚರ್ಚ್‌ನ ಬಳಿಯ ಬಾಡಿಗೆ ಕಟ್ಟಡಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿ‌ಸುತ್ತಿತ್ತು.ಆ ಬಳಿಕ 24-3-1983ರಲ್ಲಿ ಬಂದ್ಯೋಡು ಪೆರ್ಮುದೆ ರಸ್ತೆಯ ಕಯ್ನಾರು ಪರಂಬಳ ಎಂಬಲ್ಲಿ ರಸ್ತೆ ಬದಿಯ ಸರಕಾರದ ಸ್ವಂತ ಕಟ್ಟಡದಲ್ಲಿ ಕಚೇರಿ ಆರಂಭಗೊಂಡಿತು.ಈ ಕಟ್ಟಡದ ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಒಂದೆರಡು ವರ್ಷಗಳಲ್ಲೇ ಸೋರಲು ಆರಂಭವಾಗಿ ಬಳಿಕ ಈ ಕಟ್ಟಡದ ಪಕ್ಕದಲ್ಲಿ ನೂತನ ಕಟ್ಟಡವೊಂದನ್ನು ನಿರ್ಮಿಸಲಾಯಿತು.ಒಂದೆರಡು ವರ್ಷಗಳ ಬಳಿಕ ಹೊಸ ಕಟ್ಟಡದಲ್ಲಿ 8-6-2009ರಲ್ಲಿ ಕಚೇರಿ ಆರಂಭಗೊಂಡಿತು.

ಕಯ್ನಾರು ಗ್ರಾಮ ಕಚೇರಿಯು ಕುಡಾಲುಮೇರ್ಕಳ ಗ್ರಾಮದ 3,800.18 ಎಕ್ರೆ ಮತ್ತು ಕಯ್ನಾರು ಗ್ರಾಮದ 1,813.83 ಎಕ್ರೆ ವಿಸ್ತ್ರೀರ್ಣದ ಸ್ಥಳಗಳಿಗೆ ಕಂದಾಯ ಕಚೇರಿಯಾಗಿದ್ದು ಉಭಯ ಗ್ರಾಮದಲ್ಲಿ ಒಟ್ಟು 3,313 ಮಂದಿ ಭೂ ಮಾಲಕರನ್ನು ಹೊಂದಿದೆ. ಗ್ರಾಮಾಧಿಕಾರಿ, ಸಹಾಯಕ  ಗ್ರಾಮಾಧಿಕಾರಿ,ಇಬ್ಬರು ಸಹಾಯಕರು ಮತ್ತು ಓರ್ವ ದಿನವೇತನದ ನೌಕರೆ ಇಲ್ಲಿ ಕರ್ತವ್ಯದಲ್ಲಿರುವರು.ಓರ್ವ ಸಹಾಯಕ ಹುದ್ದೆ ತೆರವಾಗಿದೆ. ಅನೇಕ ವರ್ಷಗಳಿಂದ ಕೇರಳದ ತುತ್ತತುದಿಯಿಂದ ಆಗಮಿಸುವ ಮಲಯಾಳಿ ಗ್ರಾಮಾಧಿಕಾರಿಗಳು ಪದೆ ಪದೆ ವರ್ಗಾವಣೆಗೊಳ್ಳುತ್ತಿದ್ದ ಕಚೇರಿಯಲ್ಲಿ ಪ್ರಕೃತ ಕುಂಬಳೆಯ ಕನ್ನಡದ ಗ್ರಾಮಾಧಿಕಾರಿ ಕರ್ತವ್ಯದಲ್ಲಿರುವರು. ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಕಚೇರಿ ಕಾರ್ಯಾವೆಸಗುತ್ತಿದ್ದು ಕಚೇರಿ ಕಟ್ಟಡ ಸಣ್ಣದಾದ ಕೋಣೆಗಳನ್ನು ಹೊಂದಿದೆ.

ರೀ ಸರ್ವೇ ನಡೆದಿಲ್ಲ
ರಾಜ್ಯಾದ್ಯಂತ ಹೆಚ್ಚಿನ ಗ್ರಾ.ಕಚೇರಿ ವ್ಯಾಪ್ತಿಯಲ್ಲಿ  ಭೂ ಕಂದಾಯ ರೀ ಸರ್ವೇ ನಡೆದಿದೆ. ಆದರೆ ಮಂಜೇಶ್ವರ ತಾಲೂಕಿನ ಉಪ್ಪಳ, ಕೊಯಿಪ್ಪಾಡಿ ಮತ್ತು ಎಡನಾಡು ಗ್ರಾಮ ಕಚೇರಿ ವ್ಯಾಪ್ತಿಯ ಭೂಮಿಯನ್ನು ಮಾತ್ರ ರೀ ಸರ್ವೇ ಮಾಡಲಾಗಿದೆ. ಉಳಿದ ಕಡೆ ಇನ್ನೂ ರೀ ಸರ್ವೆ ನಡೆಯದೆ ಪರಸ್ಪರ ಭೂವಿವಾದಕ್ಕೆ ಆಸ್ಪದವಾಗಿದೆ. ಭೂಮಿ ರೀ ಸರ್ವೇ ನಡೆಸಿದಲ್ಲಿ ಎಲ್ಲರ ಸ್ಥಳವೂ ಪ್ರತೇÂಕವಾಗಿ ಕಚೇರಿಯಲ್ಲಿ ದಾಖಲೆಗೊಳ್ಳಲಿದೆ.ಅನೇಕ ವರ್ಷಗಳ ಗಡಿತಕರಾರಿಗೆ ಪರಿಹಾರವಾಗಲಿದೆ. ಆದರೆ ಸರಕಾರದ ವಿಳಂಬ ನೀತಿ ಇದಕ್ಕೆ ಅಡ್ಡಿಯಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಎಲ್ಲ ಭೂ ಮಾಲಕರ ಸ್ವಾಧೀನದ ಸ್ಥಳಗಳನ್ನು ಗ್ರಾಮ ಕಚೇರಿ ಮೂಲಕ ಸಲ್ಲಿಸಿ ತಾಲೂಕು ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ದಾಖಲಿಸಿದರೂ ಕೆಲವರ ಭೂ ದಾಖಲೆಗಳು ಬಿಟ್ಟುಹೋಗಿ ಪ್ರಮಾದವಾಗಿದೆ. ಇವರು ಮತ್ತೆ ಸ್ಥಳದ ಎಲ್ಲ ದಾಖಲೆಯೊಂದಿಗೆ ಅರ್ಜಿ ಬರೆದು ಭರ್ತಿಗೊಳಿಸಿ ನೀಡಬೇಕಾಗಿದೆ.ಈ ರೀತಿಯಲ್ಲಿ ದಾಖಲಿಸಿದ ಬಳಿಕ ಸ್ಥಳದ ತಂಡೆ ಪೇರ್‌ ದಾಖಲೆಯಾಗಲಿದೆ.ಇದರ ಆಧಾರದಲ್ಲಿ ಭೂಮಿಯ ಕರ  ಪಾವತಿಸಿ ಕಂಪ್ಯೂಟರ್‌ ರಶೀದಿ ನೀಡಲಾಗುವುದು.ಕಚೇರಿ ಆಧುನಿಕ ತಂತ್ರಜ್ಞಾನ ಅಳವಡಿಕೆಯ ಬಳಿಕ ಹತ್ತಿರದ ಅಕ್ಷಯ ಕೇಂದ್ರದ ಮೂಲಕ ತೆರಿಗೆ ಸಂಗ್ರಹಿ ತೆರಿಗೆದಾರರನ್ನು ಸತಾಯಿಸುತ್ತಿದ್ದ ಅವ್ಯಸ್ಥೆಗೆ ನೂತನ ಕನ್ನಡ ಗ್ರಾಮಾಧಿಕಾರಿಯವರುಧಿಕಾರಸ್ವೀಕರಿಸಿದ ಮರುದಿನದಿಂದಲೇ ಗ್ರಾಮ ಕಚೇರಿಯಲ್ಲಿ ತೆರಿಗೆ ಸ್ವೀಕರಿಸುವ ಕ್ರೆಮಕೈಗೊಂಡು ಜನರ ಪ್ರೀತಿಗೆ ಪಾತ್ರರಾಗಿರುವರು.

ಆದರೆ ವಿದ್ಯುತ್‌ ಮೊಟಕುಗೊಂಡಲ್ಲಿ ತೆರಿಗೆ ಪಾವತಿಸಲು ಕಾಯಬೇಕಾಗಿದೆ.ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ‌ಗೆ  ಬ್ಯಾಟರಿ ಅಳವಡಿಸಿದರೂ ಇದು ಕೇವಲ  ತಿಂಗಳ ಬಳಿಕ ಕೆಟ್ಟುಹೋಗಿದೆ. ಹಳೆ ಪ್ರಿಂಟರ್‌  ಒಂದಿದ್ದು ಇನ್ನೊಂದುಕಂಪ್ಯೂಟರ್‌ ಮತ್ತು ಪ್ರಿಂಟರ್‌ ಬೇಡಿಕೆ ಈಡೇರಿಲ್ಲವಂತೆ. ಎಲ್ಲವೂ ಇಲ್ಲ ಕೇವಲ 0.25 ಸೆಂಟ್ಸ್‌ ಸ್ಥಳದಲ್ಲಿ ಕಯ್ನಾರು ಗ್ರಾಮ ಕಚೇರಿ ಕಟ್ಟಡ ಹೊಂದಿ10 ವರ್ಷ ಸಂದರೂ ಇದಕ್ಕೆ ತೆರೆದ ಬಾವಿ ಅಥವಾ ಕೊಳವೆಬಾವಿ ಇಲ್ಲದೆ ನೀರಿಗಾಗಿ ದೂರದ ಮನೆಯೊಂದರ ಬಾವಿಯನ್ನು ಆಶ್ರಯಿಸಬೇಕಾಗಿದೆ. ಕಚೇರಿಗೆ ಆವರಣವಿಲ್ಲದೆ ರಾತ್ರಿಕಾಲದಲ್ಲಿ ಕೆಲವರಿಗೆ ಕಟ್ಟಡದ ಜಗಲಿ ಆಶ್ರಯ ತಾಣವಾಗಿದೆ. ಆವರಣ ಗೋಡೆ ನಿರ್ಮಿಸಲು ಮೇಲಾಧಿಕಾರಿಯವರಿಗೆ ಗ್ರಾಮಾಧಿಕಾರಿಯವರು ಬೇಡಿಕೆ ಸಲ್ಲಿಸಿರುವುದಕ್ಕೆ ನಿರ್ಮಿಸುವ ಭರವಸೆ ನೀಡಿರುವರಂತೆ.

ಅನಾಥವಾಗಿರುವ ಹಳೆ ಕಟ್ಟಡ
ರಸ್ತೆ ಪಕ್ಕದಲ್ಲಿ ಹಳೆ ಗ್ರಾಮಕಚೇರಿ ಕಟ್ಟಡ ಗೋಡೌನಿನಂತೆ ನಿರ್ಮಿಸಿದ್ದು  ಪ್ರಕೃತ ಅನಾಥವಾಗಿದೆ.ಇದರ ಸುತ್ತಲೂ ಗಿಡಗಂಟಿ ಬೆಳೆದಿದೆ.ಕೆಲವು ವರ್ಷಗಳಿಂದ ಶಿಥಿಲವಾಗಿ ಉಳಿದಿರುವ ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಇದನ್ನು ಎಂದೋ ಯಾವುದಾದರೂ ಸರಕಾರಿ ಉಪಯೋಗಕ್ಕೆ ಬಳಸಬಹುದಿತ್ತು.ಅಥವಾ ಸಾರ್ವಜನಿಕವಾಗಿ ಬಾಡಿಗೆಗೆ ನೀಡಬಹುದಿತ್ತು. ಇದ್ಯಾವುದಕ್ಕೂ ಇಲಾಖೆ ಮುಂದಾಗದೆ ರಾಷ್ಟ್ರೀಯ ನಷ್ಟಕ್ಕೆ ಮುಂದಾದಂತಿದೆ. ಇನ್ನಾದರೂ ಈ ಕಟ್ಟಡದತ್ತ ಕಂದಾಯ ಇಲಾಖೆ ಚಿತ್ತ ಹರಿಸಬೇಕಾಗಿದೆ. ಕಟ್ಟಡ ಕುಸಿಯುವ ಮುನ್ನ ಇದಕ್ಕೆ ಮೋಕ್ಷ  ಕಾಣಬೇಕಿದೆ.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಪೇಜಾವರ ಶ್ರೀಗಳ ಭೇಟಿ ಮಾಡಿದ ವಿಹಿಂಪ ಅಧ್ಯಕ್ಷ

ಪೇಜಾವರ ಶ್ರೀಗಳ ಭೇಟಿ ಮಾಡಿದ ವಿಹಿಂಪ ಅಧ್ಯಕ್ಷ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

veerendra heggade

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರ; ಡಾ| ಹೆಗ್ಗಡೆ ಪಟ್ಟಾಭಿಷೇಕ ವರ್ಧಂತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.