ರವೀನಾ ಆದ ರವೀಂದ್ರ : ಶಿಕ್ಷಣದಲ್ಲಿ ಗರಿಮೆಯ ಸಾಧನೆ


Team Udayavani, Feb 5, 2019, 12:30 AM IST

02ksde13.jpg

ಕಾಸರಗೋಡು: ತತ್ಸಮಾನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ತೇರ್ಗಡೆಯಾದ ಮಂಗಳಮುಖೀ ರವೀನಾ ಗರಿಮೆ ತಂದಿದ್ದಾರೆ. ಸಾಕ್ಷರತಾ ಮಿಷನ್‌ ಹೊಸದುರ್ಗ ಕೇಂದ್ರದಲ್ಲಿ ಕಳೆದ ವರ್ಷ ಹತ್ತನೇ ತರಗತಿ ತತ್ಸಮಾನ ಪರೀಕ್ಷೆ ಬರೆದ 44 ಮಂದಿಯಲ್ಲಿ ಒಬ್ಬರಾದ ನೀಲೇಶ್ವರ ನಿವಾಸಿ ರವೀನಾ ಅವರು ತಮ್ಮ ವಿಶೇಷತೆಗಳೊಂದಿಗೆ ನಮ್ಮಗಮನ ಸೆಳೆಯುತ್ತಾರೆ. ತತ್ಸಮಾನ ಪರೀಕ್ಷೆ ಬರೆದವರಲ್ಲಿ ಏಕೈಕ ಮಂಗಳಮುಖೀ ಇವರಾಗಿದ್ದಾರೆ. ಇವರು ಬರೆದಿರುವ ಎಲ್ಲ ವಿಷಯಗಳಲ್ಲೂ ಅತ್ಯುತ್ತಮ ಅಂಕಗಳಿಸಿ ಪ್ಲಸ್‌-ವನ್‌ಗಿರುವ ಅರ್ಹತೆ ಪಡೆದಿದ್ದಾರೆ. ಹ್ಯೂಮಾನಿಟಿಸ್‌ ಇವರ ಆಯ್ಕೆಯ ವಿಷಯವಾಗಿದೆ.

40 ವರ್ಷಗಳಿಗೆ ಹಿಂದೆ ಹತ್ತನೇ ತರಗತಿಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ರವೀನಾ ಅವರು ಮಂಗಳಮುಖೀಯಾಗಿರಲಿಲ್ಲ. ಸಹಪಾಠಿಗಳಿಗೆ ಇವರು ರವೀಂದ್ರ ಆಗಿದ್ದರು. ಉಳಿದವರ ಮುಂದೆ ನಿಜಾಂಶ ಪ್ರಕಟಿಸಲಾಗದೆ ಏಕಾಂಗಿತನವನ್ನು ಅನುಭವಿಸುತ್ತಿದ್ದರು. ಇದರ ಫಲ ಪರೀಕ್ಷೆಯ ಮೇಲೂ ಅಂದು ಪ್ರಭಾವ ಬೀರಿತ್ತು. ಪರೀಕ್ಷೆಯಲ್ಲಿ ಸೋಲು ಅನುಭವಿಸಬೇಕಾಗಿ ಬಂದಿತ್ತು. ಈಗ ಎಲ್ಲ ಪರಿಸ್ಥಿಯೂ ಬದಲಾಗಿದ್ದು, ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳಿಸಿದ್ದಾರೆ.

ರವಿವಾರಗಳಲ್ಲಿ ಹೊಸದುರ್ಗ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ತತ್ಸಮಾನ ತರಗತಿ ನಡೆಯುತ್ತಿತ್ತು. ಅನೇಕ ಬಾರಿ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಮಾಜ ನೀತಿ ಇಲಾಖೆ ಕಚೇರಿಗೆ ತೆರಳಬೇಕಾಗಿ ಬಂದಿದ್ದ ಅವ ಧಿಯಲ್ಲಿ  ಸಾಕ್ಷರತಾ ಮಂಡಳಿ ರವೀನಾ ಅವರ ಗಮನಕ್ಕೆ ಬಂದಿತ್ತು. 

ಈ ಬಗ್ಗೆ ವಿಚಾರಿಸತೊಡಗಿದಾಗ ಅರ್ಧದಲ್ಲೇ ಮೊಟಕುಗೊಂಡ ಶಿಕ್ಷಣ ಪೂರ್ತಿಗೊಳಿಸುವ ಕುರಿತು ನಿರೀಕ್ಷೆ ಮೂಡಿತ್ತು. ಆದರೆ ಕಾರಣಾಂತರದಿಂದ ಕಳೆದ ವರ್ಷ ಕಲಿಕೆ ಪುನರಾರಂಭ ಸಾಧ್ಯವಾಗಿರಲಿಲ್ಲ.

ನೀಲೇಶ್ವರ ರಾಜಾಸ್‌ ಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ಇವರು ಕಲಿಕೆ ನಡೆಸಿದ್ದರು. ಮೊದಲ ಯತ್ನದಲ್ಲಿ ಅನುತ್ತೀರ್ಣರಾದಾಗ ಮತ್ತೆ ಪರೀಕ್ಷೆ ಬರೆಯುವ ಮನಮಾಡಿದ್ದರೂ, ಮನೆಯಲ್ಲಿ ಪೂರಕ ವಾತಾವರಣ ಇರಲಿಲ್ಲ, ಮುಂದೆ ಅವಕಾಶಗಳು ಲಭಿಸಿದರೆ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ಇದೆ ಎಂದು ಅವರು ಬಯಕೆ ಮಂಡಿಸುತ್ತಾರೆ.

ಹಿಂದಿ ತಮ್ಮ ಇಷ್ಟ ವಿಷಯವಾಗಿದ್ದರೂ, ನಿರೀಕ್ಷಿಸಿದ ರೀತಿ ಅಂಕಗಳಿಕೆ ಸಾಧ್ಯವಾಗಿರಲಿಲ್ಲ. ಗಣಿತವೂ ಕಬ್ಬಿಣದ ಕಡಲೆಯಾಗಿರುವ ಕಾರಣ ಹ್ಯುಮಾನಿಟಿಸ್‌ ಆಯ್ಕೆ ಮಾಡಿರುವುದಾಗಿ ಅವರು ಹೇಳಿದರು. ಅನೇಕ ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಇನ್ನಿತರ ದುಡಿಮೆ ನಡೆಸಿ ಬದುಕಿದರು. ಕೊಂಚ ಕಾಲ ಅಸ್ಸಾಂನಲ್ಲೂ ನೌಕರಿ ನಡೆಸಿದರು. ಈ ಮೂಲಕ ಹಿಂದಿ ಸುಲಲಿತವಾಯಿತು. ನಂತರ ಏಡ್ಸ್‌ ನಿಯಂತ್ರಣ ಸೊಸೈಟಿಯ ಹೆಲ್ತ್‌ ಲೈನ್‌ ಪ್ರಾಜೆಕ್ಟ್ ನಲ್ಲಿ ಮೂರು ವರ್ಷ ಕರಾರು ಮೇರೆಗೆ ನೌಕರಿ ನಡೆಸಿದರು. ಇದು ಬದುಕಿನಲ್ಲಿ ಅನೇಕ ತಿರುವುಗಳಿಗೆ ಕಾರಣವಾಯಿತು ಎಂದವರು ತಿಳಿಸುತ್ತಾರೆ.

ಉತ್ತಮ ಚಿತ್ರರಚನಾ ಕಲಾವಿದರೂ ಆಗಿರುವ ರವೀನಾ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಜೊತೆಗೆ ಅತ್ಯುತ್ತಮ ಮೇಕಪ್‌ ಕಲಾವಿದರೂ ಹೌದು.

65 ವರ್ಷ ಪ್ರಾಯದಲ್ಲೂ ಯುವಕರಂತೆ ಚಟುವಟಿಕೆ ನಡೆಸುತ್ತಿರುವ ರವೀನಾ ತತ್ಸಮಾನ ತರಗತಿಗಳಿಗೆ ಬರುತ್ತಿದ್ದಾಗ ಪುರುಷ ವೇಷದಲ್ಲೇ ಬರುತ್ತಿದ್ದರು. ಶಿಕ್ಷಣ ಪಡೆಯುವ ಮೂಲಕ ಹಿಂದೆ ಕಾಡುತ್ತಿದ್ದ ಏಕಾಕಿತನ ದೂರವಾಗಿದೆ ಎನ್ನುತ್ತಾರೆ ಅವರು.

ತನ್ನಂಥವರನ್ನು ಸಮಾಜದ ಪ್ರಧಾನವಾಹಿನಿಗೆ ಕರೆತರುವಲ್ಲಿ ರಾಜ್ಯ ಸರಕಾರದ ಇಂಥಾ ಯೋಜನೆಗಳು ಪೂರಕವಾಗಿದೆ ಎಂದು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.