4 ವರ್ಷಗಳಿಂದ ಜಾಗೃತಿ: ಮಂಗಳೂರು ಧರ್ಮಪ್ರಾಂತದಿಂದ ಜಲಬಂಧನ್‌!

Team Udayavani, May 23, 2024, 5:50 PM IST

4 ವರ್ಷಗಳಿಂದ ಜಾಗೃತಿ: ಮಂಗಳೂರು ಧರ್ಮಪ್ರಾಂತದಿಂದ ಜಲಬಂಧನ್‌!

ಮಹಾನಗರ: ಮಳೆಗಾಗಿ ದೇವರನ್ನು ಪ್ರಾರ್ಥಿ ಸಿದರೆ ಸಾಲದು. ದೇವರು ಕೊಟ್ಟ ನೀರನ್ನು ರಕ್ಷಿಸಿ ಸದುಪಯೋಗಪಡಿಸಿಕೊಳ್ಳುವ ಚಿಂತನೆ ಯೊಂದಿಗೆ ಮಂಗಳೂರು ಧರ್ಮ ಪ್ರಾಂತ ಆರಂಭಿಸಿದ “ಜಲಬಂಧನ್‌’ ಎಂಬ ವಿಶೇಷ ಜಲ ಜಾಗೃತಿ ಅಭಿಯಾನ ಮೂರನೇ ಅವತರಣಿಕೆಗೆ ಕಾಲಿಟ್ಟಿದೆ.

ಬೇಸಗೆಯಲ್ಲಿ ಎದುರಾಗುವ ನೀರಿನ ಕೊರತೆ ನೀಗಿಸಲು ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮಾರ್ಗದರ್ಶನದಲ್ಲಿ ಧರ್ಮಪ್ರಾಂತದ ಪರಿಸರ ಆಯೋಗ 2020ರಿಂದ ಈ ಅಭಿಯಾನ ನಡೆಸುತ್ತಿದೆ. ಈ ವರ್ಷವೂ ಮುಂಗಾರು ಪೂರ್ವದಲ್ಲೇ “ಜಲ ಬಂಧನ್‌ 2024′ ಕಾರ್ಯಕ್ರಮ ಆರಂಭಿಸಿದೆ.

ಈಗಾಗಲೇ ಮಿಲಾಗ್ರಿಸ್‌ ಚರ್ಚ್‌, ಬೆಂದೂರ್‌, ಬೊಂದೇಲ್‌, ವೆಲೆನ್ಸಿಯ, ಸೈಂಟ್‌ ಜೋಸೆಫ್‌ ಚರ್ಚ್‌ ಸೆಮಿನರಿ, ಸಿಎಸ್‌ಐ ಚರ್ಚ್‌, ಸಿಒಡಿಪಿ ಸಹಿತ ವಿವಿಧ ಕಡೆಗಳಲ್ಲಿ ಮಳೆ ನೀರಿಂಗಿಸಲು ಯೋಜನೆ ರೂಪಿಸಿದ್ದು, ಈ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ.

ಧರ್ಮಪ್ರಾಂತ ವ್ಯಾಪ್ತಿಯ ಎಲ್ಲ ಚರ್ಚ್‌ ಹಾಗೂ ವಿವಿಧ ಸಂಸ್ಥೆಗಳಿಗೆ 35 ಸಾವಿರ ಜಲಬಂಧನ್‌ ಕೈಪಿಡಿ ಹಂಚಲಾಗಿದೆ. ಈ ಬಾರಿ
ವೈಯುಕ್ತಿಕ ನೆಲೆಯಲ್ಲಿ ಪ್ರತೀ ಮನೆಗಳಲ್ಲೂ ಈ ಯೋಜನೆ ಆರಂಭಗೊಳ್ಳಬೇಕೆನ್ನುವ ಗುರಿ ಹೊಂದಲಾಗಿದೆ.

ಬಹುಮಾನ ಯೋಜನೆ
ಪರಿಸರ ಆಯೋಗ ನೀಡಿರುವ ಕೈಪಿಡಿಯನ್ನು 3 ವರ್ಷಗಳ ಕಾಲ ಜೋಪಾನವಾಗಿ ಇರಿಸಿದ್ದಲ್ಲಿ ಕೈಪಿಡಿಯಲ್ಲಿರುವ ನಂಬರ್‌ ಆಧರಿಸಿ ಲಕ್ಕಿಡ್ರಾ ಮೂಲಕ ಮೂವರಿಗೆ ತಲಾ 10 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.

ಏನಿದು “ಜಲಬಂಧನ್‌’?
*ಮಂಗಳೂರು ಧರ್ಮಪ್ರಾಂತದ ವಿವಿಧ ಆಯೋಗಗಳಲ್ಲಿ ಪರಿಸರ ಆಯೋಗವೂ ಒಂದಾಗಿದ್ದು, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿದೆ.
*2020ರಲ್ಲಿ ಮೊದಲ ಬಾರಿಗೆ ಜೀವಜಲ ಉಳಿಸುವ ನಿಟ್ಟಿನಲ್ಲಿ “ಜಲಬಂಧನ್‌’ ಎನ್ನುವ ಕೈಪಿಡಿ ತಯಾರಿಸಿ ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳಿಗೆ ವಿತರಿಸಿ ಜಾಗೃತಿ ಮೂಡಿಸಲಾಗಿತ್ತು.
*2022ರಲ್ಲಿ ನಡೆದ ಎರಡನೇ ಅಭಿಯಾನದಲ್ಲಿ ಕೆಲವು ಸಂಸ್ಥೆಗಳು ನೀರು ಇಂಗಿಸುವ ಯೋಜನೆ ನಡೆದಿತ್ತು.
*2024ರಲ್ಲಿ ಮುಂಗಾರು ಪೂರ್ವದಲ್ಲೇ ಹಮ್ಮಿಕೊಂಡ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಹೆಚ್ಚು ಮನೆಗಳಲ್ಲಿ ಮಳೆ ಕೊಯ್ಲಿಗೆ ಸಿದ್ಧತೆ ನಡೆದಿದೆ.

ಬೇಸಗೆಯ ಸಮಸ್ಯೆ ನಿವಾರಿಸಬಹುದು
ಕಡು ಬೇಸಗೆಯಲ್ಲಿ ನೀರಿನ ಮಹತ್ವ ಅರಿವಿಗೆ ಬರುತ್ತದೆ. ನೀರಿಗಾಗಿ ಮಳೆಗಾಗಿ ಪ್ರಾರ್ಥಿಸುತ್ತೇವೆ. ಮಳೆ ಬಂದರೆ ಸಾಕು ನೀರನ್ನು ಪೋಲು ಮಾಡಿ ಸಮುದ್ರಕ್ಕೆ ಸೇರಿಸುತ್ತೇವೆ. ಮಳೆಗಾಲದಲ್ಲಿ ಹರಿಯುವ ನೀರನ್ನು ತಡೆದು ಇಂಗಿಸುವುದರಿಂದ ಬೇಸಗೆಯ ನೀರಿನ ಸಮಸ್ಯೆ ನಿವಾರಿಸಬಹುದು. ಇದಕ್ಕಾಗಿ ಜಲಬಂಧನ್‌ ಅಭಿಯಾನ ನಡೆಸುತ್ತಿದ್ದೇವೆ.
*ಲುವಿಸ್‌ ಜೆ. ಪಿಂಟೊ,
ಮಂಗಳೂರು ಧರ್ಮ ಪ್ರಾಂತದ
ಪರಿಸರ ಆಯೋಗದ ಕಾರ್ಯದರ್ಶಿ

ಈಗಾಗಲೇ ಯಶಸ್ವಿ ಅಳವಡಿಕೆ
ಮಿಲಾಗ್ರಿಸ್‌ ಚರ್ಚ್‌, ಮಿಲಾಗ್ರಿಸ್‌ ಕಾಲೇಜು, ಬೊಂದೇಲ್‌ ಚರ್ಚ್‌, ಬೆಂದೂರು ಚರ್ಚ್‌, ವಲೆನ್ಶಿಯಾ ಚರ್ಚ್‌, ಫಜೀರು ಚರ್ಚ್‌,
ಅಲೋಶಿಯಸ್‌ ಕಾಲೇಜು, ಸಂತ ಜೋಸೆಫ್‌ ಸೆಮಿನರಿ, ಗ್ಲಾಂಡ್‌ ಸನ್‌ ಹೋಮ್‌ ಮೈನರ್‌ ಸೆಮಿನರಿ, ಬೆಥನಿ ಸಂಸ್ಥೆ, ಸಿಒಡಿಪಿ ಮಂಗಳೂರು, ಕಲಾಂಗನ ಸಂಸ್ಥೆ, ಸಿಎಸ್‌ಐ ಚರ್ಚ್‌ ಕಾಪಿಕಾಡ್‌ ಹಾಗೂ ಆಕಾಶಭವನ, ಫಜೀರು ಮುಖ್ಯ ರಸ್ತೆ ಸಹಿತ ಹಲವು ಮನೆಗಳಲ್ಲೂ ಈ ಯೋಜನೆಯನ್ನು ಅಳವಡಿಸಲಾಗಿದೆ.

*ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

Mangaluru ಸಿಟಿಬಸ್‌ಗಳಲ್ಲಿ ಶೀಘ್ರ ಯುಪಿಐ ಮುಖಾಂತರವೂ ಟಿಕೆಟ್‌

Mangaluru ಸಿಟಿಬಸ್‌ಗಳಲ್ಲಿ ಶೀಘ್ರ ಯುಪಿಐ ಮುಖಾಂತರವೂ ಟಿಕೆಟ್‌

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

ಕಡಲಿಗಿಳಿಯುವ ನಾಡದೋಣಿಗಳಿಗೆ ಎನ್‌ಎಂಪಿಎ “ಆಶ್ರಯ’!

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

National Highway 73: ಸಮಸ್ಯೆಗಳ ನಿವಾರಣೆNational Highway 73: ಸಮಸ್ಯೆಗಳ ನಿವಾರಣೆ

National Highway 73: ಸಮಸ್ಯೆಗಳ ನಿವಾರಣೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.