ನಾಟೆಕಲ್: ರಸ್ತೆ ಬದಿ ಅಂಗಡಿಗಳ ತೆರವು
Team Udayavani, Apr 6, 2019, 9:15 AM IST
ದೇರಳಕಟ್ಟೆ: ರಸ್ತೆ ಅಗಲಗೊಳಿಸುವ ಹಿನ್ನೆಲೆಯಲ್ಲಿ ನಾಟೆಕಲ್ ಬಳಿ ರಸ್ತೆ ಬದಿಯಲ್ಲಿದ್ದ ಅನಧಿಕೃತ ಗೂಡಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.
ಕಳೆದ ಕೆಲವು ದಿನಗಳ ಹಿಂದೆ ದೇರಳಕಟ್ಟೆ ಸಮೀಪ ರಸ್ತೆ ಬದಿಯಲ್ಲಿದ್ದ ಅನಧಿಕೃತ ಗೂಡಂಗಡಿ, ವ್ಯಾಪಾರ ಮಳಿಗೆಗಳನ್ನು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಧಿಕಾರಿಗಳು ತೆರವುಗೊಳಿಸಿದ್ದರು. ಶುಕ್ರವಾರದಂದು ಮತ್ತೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಅನಧಿಕೃತ ವ್ಯಾಪಾರ ಮಳಿಗೆ ಹಾಗೂ ಗೂಡಂಗಡಿಗಳನ್ನು ತೆರವು ಗೊಳಿಸಿದರು. ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ವ್ಯಾಪಾರ ಮಳಿಗೆಗಳ ಜಾಹೀರಾತು ಫಲಕಗಳನ್ನು ಕೂಡ ಜೆಸಿಬಿ ಮೂಲಕ ತೆಗೆದುಹಾಕಲಾಯಿತು.
ಕಳೆದ 22 ವರ್ಷಗಳಿಂದ ನಾಟೆಕಲ್ ರಸ್ತೆ ಬದಿಯಲ್ಲಿ ಗೂಡಂಗಡಿಯೊಂದಿಗೆ ಹೂವಿನ ವ್ಯಾಪಾರ ಮಾಡುತ್ತಾ ವ್ಯಾಪಾರಿಯೊಬ್ಬರು ಬದುಕನ್ನು ಕಟ್ಟಿಕೊಂಡಿದ್ದರು.
ಆದರೆ ಶುಕ್ರವಾರ ಜೆಸಿಬಿ ಯಂತ್ರದೊಂದಿಗೆ ಅಧಿಕಾರಿ ಗಳು ಬಂದಾಗ ಅನಿವಾರ್ಯವಾಗಿ ತನ್ನ ಕುಟುಂಬದ ಸದಸ್ಯರೊಂದಿಗೆ ಅಂಗಡಿಯನ್ನು ಖಾಲಿ ಮಾಡಿದರು.