ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ: ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
Team Udayavani, Apr 22, 2023, 7:55 AM IST
ಮಂಗಳೂರು: ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿ ಗೂಡ್ಸ್ ಅನ್ ಲೋಡಿಂಗ್ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವೊಂದು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ.
ಎ. 29ರಂದು ನಂ. 22609 ಮಂಗಳೂರು ಸೆಂಟ್ರಲ್ ಕೊಯ ಮತ್ತೂರು ಇಂಟರ್ಸಿಟಿ ಎಕ್ಸ್ಪ್ರೆಸ್ ಪೂರ್ಣ ರದ್ದು. ನಂ.22610 ಕೊಯಮತ್ತೂರು ಮಂಗಳೂರು ಸೆಂಟ್ರಲ್ ಇಂಟರ್ಸಿಟಿ ಎಕ್ಸ್ಪ್ರೆಸ್ ಎ. 30ರಂದು ಪೂರ್ಣ ರದ್ದಾಗಲಿದೆ.
ಎ. 29ರ ನಂ.16324 ಮಂಗಳೂರು ಸೆಂಟ್ರಲ್ ಕೊಯ ಮತ್ತೂರು ರೈಲು ಮಂಗಳೂರು ಸೆಂಟ್ರಲ್-ಕಾಸರಗೋಡು ಮಧ್ಯೆ ರದ್ದಾಗಲಿದೆ, ಕಾಸರಗೋಡಿನಿಂದಲೇ ರೈಲು ಹೊರಡಲಿದೆ.
ಮೇ. 4ರಂದು ನಂ.22610 ಕೊಯಮತ್ತೂರು ಮಂಗಳೂರು ಸೆಂಟ್ರಲ್ ರೈಲು ಕಾಸರಗೋಡಿ ನಲ್ಲೇ ನಿಲ್ಲುವುದು.
ಎ. 30ರಂದು ನಂ.12602 ಮಂಗಳೂರು ಸೆಂಟ್ರಲ್ -ಡಾ| ಎಂ.ಜಿಆರ್ ಚೆನ್ನೈ ಸೆಂಟ್ರಲ್ ಮೈಲ್ ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 1.55ಕ್ಕೆ ಹೊರಡುವ ಬದಲು 30 ನಿಮಿಷ ತಡವಾಗಿ 2.25ಕ್ಕೆ ಹೊರಡಲಿದೆ. ಇದೇ ರೈಲು ಮೇ 1ರಂದು ಮಂಗಳೂರು ಸೆಂಟ್ರಲ್ನಿಂದ 2 ಗಂಟೆ ತಡವಾಗಿ 3.55ಕ್ಕೆ ಹೊರಡಲಿದೆ.
ಮೇ 1ರಂದು ನಂ.16348 ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ರೈಲು ಮಂಗಳೂರಿನಿಂದ 2.25ರ ಬದಲು ಸಂಜೆ 4.15ಕ್ಕೆ ಹೊರಡಲಿದೆ.
ನಂ. 22638 ಮಂಗಳೂರು ಸೆಂಟ್ರಲ್- ಚೆನ್ನೈ ವೆಸ್ಟ್ಕೋಸ್ಟ್ ಎಕ್ಸ್ ಪ್ರಸ್ ರೈಲು ಮಂಗಳೂರು ಸೆಂಟ್ರಲ್ ನಿಂದ ಮೇ 1ರಂದು ರಾತ್ರಿ 11.45ಕ್ಕೆ ಹೊರಡುವ ಬದಲು ಮೇ 2ರ ಮುಂಜಾನೆ 2.25ಕ್ಕೆ 2.40 ಗಂಟೆ ತಡವಾಗಿ ಹೊರಡಲಿದೆ.