ಮೇವಿನ ಬರ ನೀಗಿಸಲು ಗೋಮಾಳದಲ್ಲಿ ಹುಲ್ಲು ನಾಟಿ 

Team Udayavani, Dec 31, 2021, 4:06 AM IST

ಮೇವಿನ ಬರ ನೀಗಿಸಲು ಗೋಮಾಳದಲ್ಲಿ ಹುಲ್ಲು ನಾಟಿ 

ಪುತ್ತೂರು: ಪಶುಗಳಿಗೆ ಮೇವು ಬರ ತಪ್ಪಿಸುವ ಸಲುವಾಗಿ ಗೋಮಾಳದಲ್ಲಿ ಹುಲ್ಲು ನಾಟಿಯ ಚಿಂತನೆಯೊಂದು ಪುತ್ತೂರಿನಲ್ಲಿ ಮೊಳಕೆಯೊಡೆದಿದೆ.

ಬಂಜರು ಭೂಮಿಯಂತಿರುವ ಪುತ್ತೂರಿನ ನೂರಾರು ಎಕ್ರೆ ಗೋಮಾಳದಲ್ಲಿ ಗೋವುಗಳಿಗಾಗಿ ಹುಲ್ಲು ನಾಟಿ ಮಾಡುವ ಮಹತ್ತರ ಯೋಜನೆಗೆ ಶಾಸಕ ಸಂಜೀವ ಮಠಂದೂರು ಅವರಿಂದ ಯೋಜನಾ ಪ್ರಸ್ತಾವನೆ ಸಿದ್ಧಗೊಂಡಿದೆ.

734 ಎಕ್ರೆ ಗೋಮಾಳ ಜಮೀನು :

ಕಂದಾಯ ಇಲಾಖೆ ನೀಡಿದ ಸರಕಾರಿ ದಾಖಲೆ ಪ್ರಕಾರ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 734 ಎಕ್ರೆ ಗೋಮಾಳ ಜಮೀನು ಇದೆ. ಇವುಗಳ ಪೈಕಿ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಬಳಕೆಗೆ ನೀಡಲಾಗಿದೆ. ಉಳಿದ ಗೋಮಾಳ ಭೂಮಿಯಲ್ಲಿ ಗೋವುಗಳಿಗೆ ಮೇವು ಪೂರೈಕೆಗೆ ಹುಲ್ಲು ಬೆಳೆಯಲು ಯೋಜನಾ ವರದಿ ಸಿದ್ಧಪಡಿಸಲಾಗಿದೆ.

ಕಂದಾಯ ಇಲಾಖೆ ನೀಡಿದ ಸರಕಾರಿ ದಾಖಲೆ ಪ್ರಕಾರ ಲಭ್ಯವಿರುವ ಒಟ್ಟು 34 ಎಕ್ರೆ ಗೋಮಾಳ ಸರ್ವೇವೆಗೆ ಸಿದ್ಧತೆ ನಡೆಸ ಲಾಗಿದೆ. ಅತಿಕ್ರಮಣಗೊಂಡ ಗೋಮಾಳ ಭೂಮಿ ಯಾರು, ಯಾವ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆಯೂ ವರದಿ ನೀಡುವಂತೆ ತಾ.ಪಂ. ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ.

ಗೋಶಾಲೆ ನಿರ್ಮಾಣ :

ಇದರ ಪೂರ್ವಭಾವಿಯಾಗಿ ಮುಂಡೂರು ಗ್ರಾಮದ ಗೋಮಾಳದಲ್ಲಿ 8.63 ಎಕ್ರೆ ಭೂಮಿಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಮುಂಡೂರು ಗ್ರಾಮದ ಸರ್ವೆ ನಂ.151/2ರ ಗೋಮಾಳದಲ್ಲಿ 8.63 ಎಕ್ರೆಯನ್ನು ಗುರುತಿಸಿ ಜಿಲ್ಲೆಯಲ್ಲೇ ಸುಸಜ್ಜಿತ ಹಾಗೂ ವಿಶಾಲ ಗೋಶಾಲೆ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚಿಸ ಲಾಗಿದ್ದು, ತಹಶೀಲ್ದಾರ್‌ ರಮೇಶ್‌ ಬಾಬು ಹಾಗೂ ಕಂದಾಯ ಅಧಿಕಾರಿ ಮಹೇಶ್‌ ನೇತೃತ್ವದಲ್ಲಿ ಪರಿಶೀಲನೆಯ ಹಂತದಲ್ಲಿದೆ.

ಹಾಲು ಸೊಸೈಟಿಗೆ ಗೋಮಾಳ :

ಕೆಎಂಎಫ್ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೋಮಾಳ ಭೂಮಿಯನ್ನು ಹಸ್ತಾಂತರಿಸಿ ಅಲ್ಲಿ ಗೋವಿಗೆ ಬೇಕಾಗಿರುವ ಆಹಾರ/ಹುಲ್ಲು ಬೆಳೆಸಲು ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ. ಕೆಎಂಎಫ್ನ ಜತೆಗಿರುವ ಪ್ರತಿಯೊಂದು ಹಾಲು ಉತ್ಪಾದಕ ಸಹಕಾರಿ ಸಂಘದ ಮೂಲಕ ಪಶು ಆಹಾರ ಸಿದ್ಧಗೊಳಿಸಲು ಆರ್ಥಿಕ ಸಹಕಾರ ನೀಡಿದಲ್ಲಿ ಗೋಮಾಳದಲ್ಲಿ ಹುಲ್ಲು ಬೆಳೆಯುವ ಯೋಜನೆ ಯಶಸ್ವಿಯಾಗಬಹುದು.

ಗೋಮಾಳದಲ್ಲಿ ಹುಲ್ಲು ಬೆಳೆದರೆ ಪಶುಗಳಿಗೆ ಮೇವು ಒದಗಿಸಲು ಸಾಧ್ಯವಾಗಬಹುದು ಎನ್ನುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಜತೆಗೆ ಗೋಮಾಳ ಜಮೀನಿನಲ್ಲಿ ಗೋಶಾಲೆ ನಿರ್ಮಾಣದ ಚಿಂತನೆಯೂ ಇದೆ.  –ಸಂಜೀವ ಮಠಂದೂರು, ಪುತ್ತೂರು ಶಾಸಕರು 

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.