ಕಾಣಿಯೂರು: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ; ಆರೋಪಿ ಬಂಧನ
Team Udayavani, Mar 4, 2022, 7:15 AM IST
ಕಾಣಿಯೂರು: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಾಣಿಯೂರು ಸಮೀಪ ನಡೆದಿದ್ದು, ಆರೋಪಿ ಬಂಡಾಜೆ ನಿವಾಸಿ ಚಂದ್ರಶೇಖರ (57)ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಸಹೋದರ ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸದ ಬಗ್ಗೆ ತಂದೆ, ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭ, ಬುದ್ಧಿಮಾಂದ್ಯಳಾದ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದರು. ಚಾರ್ವಾಕದಿಂದ ವಾಪಸು ಮನೆಗೆ ಬಂದಾಗ ಮನೆಯಲ್ಲಿದ್ದ ಅಕ್ಕ ಕಾಣದೇ ಇದ್ದಾಗ ಹುಡುಕುತ್ತಿರುವ ವೇಳೆ ಮನೆಯ ಎದುರಿನ ಗುಡ್ಡದಿಂದ ಬರುತ್ತಿದ್ದಳು. ವಿಚಾರಿಸಿದಾಗ ಆರೋಪಿ ಚಂದ್ರಶೇಖರ “ನೀನು ನನ್ನ ಜತೆ ಗುಡ್ಡಕ್ಕೆ ಬರಬೇಕು. ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ’ ಎಂದು ಬೆದರಿಸಿ ಕರೆದೊಯ್ದಿದ್ದಾನೆ ಎಂದು ಆಕೆ ಹೇಳಿದ್ದಾಳೆ ಎಂದು ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಆರೋಪಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು