Udayavni Special

ಉರುಂಬಿ ಪ್ರದೇಶಕ್ಕೆ ಇನ್ನು ಜೈವಿಕ ಸೂಕ್ಷ್ಮಪ್ರದೇಶ ಪಟ್ಟ ?

ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಶಿಫಾರಸು

Team Udayavani, Nov 10, 2020, 4:32 AM IST

Kadaba

ಕುಂತೂರು:ಕುಮಾರಧಾರ ನದಿ ಹರಿಯುತ್ತಿರುವ ಉರುಂಬಿಯ ಸುಂದರ ಪ್ರದೇಶ.

ಕಡಬ: ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕುಮಾರ ಧಾರಾ ನದಿ ತೀರದ ಉರುಂಬಿ ಎಂಬ ಪೌರಾಣಿಕ ಹಿನ್ನೆಲೆಯುಳ್ಳ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶಕ್ಕೆ ಜೈವಿಕ ಸೂಕ್ಷ್ಮಪ್ರದೇಶ ಎನ್ನುವ ಪಟ್ಟ ನೀಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ನಿರ್ಧರಿಸಿದೆ. ತನ್ಮೂಲಕ ಕಳೆದ 10 ವರ್ಷಗಳಿಂದ ಕುಮಾರಧಾರಾ ಉಳಿಸಿ ಎನ್ನುವ ಹೆಸರಿನಲ್ಲಿ ಪರಿಸರ ಪರ ಹೋರಾಟ ನಡೆಸುತ್ತಿರುವ ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಂತಾಗಿದೆ.

ಜೈವಿಕ ಸೂಕ್ಷ್ಮ ಪ್ರದೇಶವೆಂದರೆ ಭೂಮಿ ಯಲ್ಲಿ ಜೈವಿಕವಾಗಿ ಶ್ರೀಮಂತ ಮತ್ತು ಹೆಚ್ಚು ಅಳಿವಿನಂಚಿನಲ್ಲಿರುವ ಪರಿಸರ ಪ್ರದೇಶಗಳು ಎಂದು ಪರಿಸರ ತಜ್ಞರು ವಿಶ್ಲೇಷಿಸುತ್ತಾರೆ. ಅಂತಹ ಪ್ರದೇಶಗಳಲ್ಲಿ ನಡೆಯುವ ಪರಿಸರ ವಿರೋಧಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ.

ಸುದೀರ್ಘ‌ ಹೋರಾಟ
ಉರುಂಬಿ ಪ್ರದೇಶದಲ್ಲಿ ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಜಲವಿದ್ಯುತ್‌ ಸ್ಥಾವರ ಪ್ರಾರಂಭಿಸಲಾಗುವುದು ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಕುಮಾರಧಾರಾ ಉಳಿಸಿ ಎನ್ನುವ ಹೆಸರಿನಲ್ಲಿ ಕಳೆದ ಸುಮಾರು 10 ವರ್ಷಗಳ ಹಿಂದೆ ಹುಟ್ಟಿಕೊಂಡ ಹೋರಾಟವು ಉರುಂಬಿ ಪ್ರದೇಶವನ್ನು ಜೈವಿಕ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡುತ್ತಲೇ ಬಂದಿತ್ತು. ಹಲವಾರು ಮಂದಿ ಪರಿಸರ ಅಧ್ಯಯನಕಾರರು ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯದ ಕುರಿತು ಅಧ್ಯಯನ ನಡೆಸಿ ಉರುಂಬಿ ಜೈವಿಕ ಸೂಕ್ಷ್ಮಪ್ರದೇಶವೆನ್ನುವ ವಿಚಾರಕ್ಕೆ ಪೂರಕವಾಗಿ ವರದಿಗಳನ್ನು ಮಂಡಿಸಿದ್ದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿರುವ ಅನಂತ ಹೆಗಡೆ ಅಶೀಸರ ಅವರು ಕಳೆದ ತಿಂಗಳು ಉರುಂಬಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಅವರು ಪಶ್ಚಿಮಘಟ್ಟ ಕಾರ್ಯ ಪಡೆಯ ಅಧ್ಯಕ್ಷರಾಗಿದ್ದ ಸಂದರ್ಭ ದಲ್ಲಿಯೂ ಉರುಂಬಿಗೆ ಭೇಟಿ ನೀಡಿ ಅಲ್ಲಿನ ಜೈವಿಕ ಸಂಪತ್ತು ನಶಿಸುತ್ತಿರುವ ಬಗ್ಗೆ ತಯಾರಿಸಲಾಗಿದ್ದ ವರದಿಗಳ ಅಧ್ಯಯನ ನಡೆಸಿದ್ದರು.

ಅತಿಸೂಕ್ಷ್ಮ ಪ್ರದೇಶ
ಅಳಿವಿನಂಚಿನಲ್ಲಿರುವ ಜಲಚರಗಳು, ಪಕ್ಷಿ ಸಂಕುಲ ,ವನ್ಯ ಸಂಪತ್ತು ಇಲ್ಲಿವೆ. ಈ ಪ್ರದೇಶ ಅತಿಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್‌ ವರದಿಯಲ್ಲಿ ಉಲ್ಲೇಖವಿದೆ. ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಿ ಉರುಂಬಿ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಿದೆ.
-ಎನ್‌.ಕರುಣಾಕರ ಗೋಗಟೆ,  ಅಧ್ಯಕ್ಷರು, ಕುಮಾರಧಾರಾ  ಪರಿಸರ ಸಂರಕ್ಷಣ ಸಮಿತಿ

ಪರಿಸರ ಸಂರಕ್ಷಣೆ
ಕಡಬ ತಾ|ನ ಉರುಂಬಿಯನ್ನು ಜೈವಿಕ ಸೂಕ್ಷ್ಮಪ್ರದೇಶ ಎಂದು ಗುರುತಿಸಲಾಗಿದೆ. ¤ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಣೆ ಮಾಡುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
-ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಕರ್ನಾಟಕ ಜೀವ  ವೈವಿಧ್ಯ ಮಂಡಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kaavan-4′

ಪಾಕ್ To ಕಾಂಬೋಡಿಯ: ಏರ್ ಲಿಫ್ಟ್ ಮೂಲಕ ‘ಕಾವನ್’ ಸ್ಥಳಾಂತರ: ಯಾರಿವನು ?

ಹುಬ್ಬಳ್ಳಿ : ಕೊಲೆ ನಡೆದ 24 ತಾಸಿನೊಳಗೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ಹುಬ್ಬಳ್ಳಿ : ಕೊಲೆ ನಡೆದ 24 ತಾಸಿನೊಳಗೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

Preservation-of-the-palm-tree-manuscript-of-Kumarasa

ಕುಮಾರವ್ಯಾಸನ ತಾಳೆಗರಿ ಹಸ್ತಪ್ರತಿ ಸಂರಕ್ಷಣೆ

‌26/11 ದಾಳಿ ನಾಳೆಗೆ 12 ವರ್ಷ ಪೂರ್ಣ : ರಾಜ್ಯಪಾಲರು, ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಣೆ

‌26/11 ದಾಳಿ ನಾಳೆಗೆ 12 ವರ್ಷ ಪೂರ್ಣ: ಗಣ್ಯರಿಂದ ಹುತಾತ್ಮರಿಗೆ ಗೌರವ ಸಮರ್ಪಣೆ

ತನ್ನ ಸಹೋದರನ ಸಾವಿಗೆ ಪತಿ ಮಾಡಿದ ಮಾಟವೇ ಕಾರಣ ಎಂದು ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಪತ್ನಿ

ತನ್ನ ಸಹೋದರನ ಸಾವಿಗೆ ಪತಿ ಮಾಡಿದ ಮಾಟವೇ ಕಾರಣ ಎಂದು ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಪತ್ನಿ

ಜ.1ರ ಬಳಿಕ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಡಯಲ್‌ ಮಾಡಲು ‘0’ ಒತ್ತಿ

ಜ.1ರ ಬಳಿಕ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಡಯಲ್‌ ಮಾಡಲು ‘0’ ಒತ್ತಿ

2021ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಸಿನೆಮಾ ಅಧೀಕೃತ ಪ್ರವೇಶ

2021ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಸಿನೆಮಾ ಅಧಿಕೃತ ಪ್ರವೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ಮರದ ದಿಮ್ಮಿ ಸಾಗಾಟ: 5ಲಕ್ಷ ಮೌಲ್ಯದ ಸೊತ್ತು ವಶಪಡಿಸಿದ ಬಂಟ್ವಾಳ ಅರಣ್ಯ ಅಧಿಕಾರಿಗಳು

ಅಕ್ರಮ ಮರದ ದಿಮ್ಮಿ ಸಾಗಾಟ : 5ಲಕ್ಷ ಮೌಲ್ಯದ ಸೊತ್ತು ವಶಪಡಿಸಿದ ಬಂಟ್ವಾಳ ಅರಣ್ಯ ಅಧಿಕಾರಿಗಳು

ವಾತ್ಸಲ್ಯ ಸಹಾಯಹಸ್ತ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ವಾತ್ಸಲ್ಯ ಸಹಾಯಹಸ್ತ ವಿತರಣಾ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ

ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ

ಬೆಳ್ತಂಗಡಿ : 2 ತಲೆ, 7 ಕಾಲು ಹೊಂದಿದ ವಿಸ್ಮಯಕಾರಿ ಕರುವಿನ ಜನನ !

ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !

ಕಲ್ಲಡ್ಕ: ಆಮ್ನಿ- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಮೃತ್ಯು

ಕಲ್ಲಡ್ಕ: ಆಮ್ನಿ- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಮೃತ್ಯು

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

kaavan-4′

ಪಾಕ್ To ಕಾಂಬೋಡಿಯ: ಏರ್ ಲಿಫ್ಟ್ ಮೂಲಕ ‘ಕಾವನ್’ ಸ್ಥಳಾಂತರ: ಯಾರಿವನು ?

MPM

ಎಂಪಿಎಂ ಕಾರ್ಖಾನೆಗೆ ಅರಣ್ಯಲೀಸ್‌ ಬೇಡ

ಅಕ್ರಮ ಮರದ ದಿಮ್ಮಿ ಸಾಗಾಟ: 5ಲಕ್ಷ ಮೌಲ್ಯದ ಸೊತ್ತು ವಶಪಡಿಸಿದ ಬಂಟ್ವಾಳ ಅರಣ್ಯ ಅಧಿಕಾರಿಗಳು

ಅಕ್ರಮ ಮರದ ದಿಮ್ಮಿ ಸಾಗಾಟ : 5ಲಕ್ಷ ಮೌಲ್ಯದ ಸೊತ್ತು ವಶಪಡಿಸಿದ ಬಂಟ್ವಾಳ ಅರಣ್ಯ ಅಧಿಕಾರಿಗಳು

ಹುಬ್ಬಳ್ಳಿ : ಕೊಲೆ ನಡೆದ 24 ತಾಸಿನೊಳಗೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ಹುಬ್ಬಳ್ಳಿ : ಕೊಲೆ ನಡೆದ 24 ತಾಸಿನೊಳಗೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

Preservation-of-the-palm-tree-manuscript-of-Kumarasa

ಕುಮಾರವ್ಯಾಸನ ತಾಳೆಗರಿ ಹಸ್ತಪ್ರತಿ ಸಂರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.