ಪ್ಲಾಸ್ಟಿಕ್‌ ಸೌಧವಿದ್ದರೂ ಬಳಸಲು ಸಾರ್ವಜನಿಕರ ನಿರಾಸಕ್ತಿ!


Team Udayavani, May 28, 2019, 6:00 AM IST

w-16

ನರಿಮೊಗರು: ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳ ಪೈಕಿ ಮುಂಡೂರು ಗ್ರಾಮವೂ ಸೇರಿಕೊಂಡಿದೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಪ್ಲಾಸ್ಟಿಕ್‌ ಅನ್ನು ಭೂಮಿಯ ಮೇಲೆ ಹಾಕಬೇಡಿ. ಪರಿಸರವನ್ನು ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭದಿಂದಲೇ ಮಾಡಿಕೊಂಡು ಬರಲಾಗುತ್ತಿದೆ.

ಮುಂಡೂರು ಗ್ರಾ.ಪಂ. ಅಥವಾ ಪೇಟೆಯ ಸುತ್ತಮುತ್ತಲ ಅಂಗಡಿಗಳು, ಮನೆಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ದಾಸ್ತಾನಿರಿಸಲು ಗ್ರಾ.ಪಂ. ವತಿಯಿಂದ ಗ್ರಾ.ಪಂ. ಕಚೇರಿ ಎದುರು ಪ್ಲಾಸ್ಟಿಕ್‌ ಸೌಧವನ್ನು ನಿರ್ಮಿಸಿದೆ. ಆದರೆ ಈ ಸೌಧಕ್ಕೆ ಪ್ಲಾಸ್ಟಿಕ್‌ ತಂದು ಹಾಕುವುದೇ ಇಲ್ಲ! ಗ್ರಾಮಸ್ಥರ ನಿರಾಸಕ್ತಿಯಿಂದ ಪ್ಲಾಸ್ಟಿಕ್‌ ಸೌಧ ನನೆಗುದಿಗೆ ಬಿದ್ದಿದೆ.

ಅಚ್ಚುಕಟ್ಟಾದ ವ್ಯವಸ್ಥೆ
ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್‌ ಸೌಧ ಒಂದು ಅಚ್ಚುಕಟ್ಟಾದ ವ್ಯವಸ್ಥೆಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಸೌಧದೊಳಗೆ ತಂದು ಹಾಕಿ ಅದನ್ನು ನಾವು ಬೇರೆ ಕಡೆ ಸಾಗಾಟ ಮಾಡುತ್ತೇವೆ ಎಂದು ಗ್ರಾ.ಪಂ. ಮನವಿಯನ್ನು ಮಾಡುವ ಮೂಲಕ ಹೊಸ ವ್ಯವಸ್ಥೆಯನ್ನು ಪ್ರಾರಂಭ ಮಾಡಿತ್ತು. ಐದು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಸೇವೆಯನ್ನು ಮೊದಮೊದಲು ಜನ ಉಪಯೋಗಿಸುತ್ತಿದ್ದರು. ಆ ಬಳಿಕ ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಈಗ ಸೌಧದೊಳಗೆ ಕಸ ಹಾಕುವುದೇ ಇಲ್ಲ. ಇದರಿಂದ ಗ್ರಾ.ಪಂ. ಸ್ವತ್ಛತೆಯ ಕುರಿತು ಇದ್ದ ಕನಸು ನನಸಾಗಿಲ್ಲ.

ರಸ್ತೆ ಬದಿಯಲ್ಲೇ ಎಸೆಯುತ್ತಾರೆ
ಮುಂಡೂರು ಗ್ರಾ.ಪಂ. ಎದುರಿನ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್‌ ಸೌಧ ಇದ್ದರೂ ಅದಕ್ಕೆ ಕಸ ಹಾಕುವುದು ಕಡಿಮೆ. ಕಸ ರಸ್ತೆಯ ಬದಿಯಲ್ಲೇ ಇದೆ. ಕೂಡುರಸ್ತೆ -ಮುಂಡೂರು ರಸ್ತೆಯ ಬದಿಯಲ್ಲೂ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಎಸೆದ ಕಸ ಕಾಣಸಿಗುತ್ತದೆ. ಪರಿಸರವನ್ನು ಹಾಳುಮಾಡುವ ಷಡ್ಯಂತ್ರ ಇದರಲ್ಲಿದೆ ಎನ್ನುತ್ತಾರೆ ಗ್ರಾಮಸ್ಥರು. ಕಸ ಹಾಕಲು ವ್ಯವಸ್ಥೆ ಇದ್ದರೂ ಕಸ ಹಾಕುತ್ತಿಲ್ಲ. ರಾತ್ರಿ ವೇಳೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕಸವನ್ನು ರಸ್ತೆ ಬದಿ ಎಸೆಯುತ್ತಾರೆ. ಕಸವನ್ನು ಯಾರು ಎಸೆಯುತ್ತಾರೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ.

ಜಾಗೃತಿ ಮುಖ್ಯ
ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗ್ರಾಮಸ್ಥರು ಮನೆಯಲ್ಲೇ ಬಳಕೆ ಮಾಡುತ್ತಾರೆ. ಆದರೆ ಪ್ಲಾಸ್ಟಿಕ್‌ ವಸ್ತುಗಳನ್ನು ಏನು ಮಾಡಬೇಕು? ಏನು ಮಾಡಬಹುದು? ಎನ್ನುವ ಪರಿಜ್ಞಾನ ಕೆಲವರಿಗೆ ಇರುವುದಿಲ್ಲ. ಪ್ಲಾಸ್ಟಿಕ್‌ ಚೀಲಗಳನ್ನು ಮರು ಬಳಕೆ ಮಾಡುತ್ತಾರೆ ಎನ್ನುವ ವಿಚಾರವೂ ಗ್ರಾಮೀಣ ಜನರಿಗೆ ಮಾಹಿತಿ ಇರುವುದಿಲ್ಲ.

ಪ್ಲಾಸ್ಟಿಕ್‌ ವಸ್ತುಗಳನ್ನು ಸ್ವತ್ಛವಾಗಿಟ್ಟು ಒಣಗಿಸಿ ಅದನ್ನು ಸ್ಥಳೀಯ ಅಂಗನವಾಡಿಗೆ ನೀಡಿದರೆ ಅಲ್ಲಿಂದ ಬೇರೆ ಕಡೆ ರವಾನೆಯಾಗುತ್ತದೆ. ಪ್ಲಾಸ್ಟಿಕ್‌ ಚೀಲಗಳನ್ನು ಕ್ರೋಡೀಕರಿಸಿ ಎಂದು ಸರಕಾರವೇ ಮನೆ ಮನೆಗೆ ಮಾಹಿತಿ ನೀಡಿದೆ ಆದರೆ ಪ್ರಯೋಜನ ಮಾತ್ರ ಶೂನ್ಯ. ಯಾವ ಅಂಗನವಾಡಿಗೂ ಪ್ಲಾಸ್ಟಿಕ್‌ ಬರಲೇ ಇಲ್ಲ. ಪ್ಲಾಸ್ಟಿಕ್‌ ವಸ್ತುಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಜಾಗೃತಿ ಮೂಡಿಸುವುದೊಂದೇ ಇದಕ್ಕೆ ಪರಿಹಾರ ಎನ್ನುವಂತಿದೆ.

ಸ್ವತ್ಛ ಗ್ರಾಮವಾಗಬೇಕು. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಕಡಿಮೆ ಮಾಡಿ ಜನ ಬಟ್ಟೆ ಚೀಲಗಳನ್ನೇ ಬಳಕೆ ಮಾಡಬೇಕು ಎನ್ನುವ ಉದ್ದೇಶದಿಂದ ನಾವು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ ಸರ್ವೆ ಷಣ್ಮುಖ ಯುವಕ ಮಂಡಲವು ರಾಜ್ಯದಲ್ಲಿ 2ನೇ ಸ್ಥಾನ, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಸತ್ತ ಕೋಳಿ ವಿಲೇ
ಇತ್ತೀಚೆಗೆ ಸ್ಥಳೀಯರೊಬ್ಬರು 500ರಷ್ಟು ಸತ್ತ ಕೋಳಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದನ್ನು ಪತ್ತೆಹಚ್ಚಿ ಗ್ರಾ.ಪಂ.ಗೆ ದೂರು ನೀಡಿದ್ದರು. ಬಳಿಕ ಗ್ರಾ.ಪಂ.ನಿಂದ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸಹಕಾರ ಮುಖ್ಯ
ಸಾರ್ವಜನಿಕರ ಸಹಕಾರ ಇದ್ದಲ್ಲಿ ಮಾತ್ರ ಯಾವುದೇ ಸಾರ್ವಜನಿಕ ಕೆಲಸ ಯಶಸ್ವಿ ಕಾಣಲು ಸಾಧ್ಯವಾಗುತ್ತದೆ. ಸ್ವತ್ಛತೆಯನ್ನು ಅವಗಣಿಸಿ ಸಮಸ್ಯೆ ಉಂಟುಮಾಡುವವರ ವಿರುದ್ಧ ಗ್ರಾ.ಪಂ. ಕಾನೂನು ಕ್ರಮ ಕೈಗೊಳ್ಳಲಿದೆ. ಸ್ವತ್ಛ ಗ್ರಾಮವಾಗಿಡಲು ಎಲ್ಲರೂ ಸಹಕರಿಸಬೇಕು.
ಎಸ್‌.ಡಿ. ವಸಂತ, ಅಧ್ಯಕ್ಷರು ಮುಂಡೂರು ಗ್ರಾ.ಪಂ.

ಪ್ರವೀಣ ಚೆನ್ನಾವರ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.