ರಬ್ಬರ್‌ ಬೆಳೆಗೆ ನಿರುತ್ತೇಜನದ ಕೊಡಲಿ ಏಟು! ಕೇರಳ ಮಾದರಿ ಪರಿಹಾರಕ್ಕೆ ಆಗ್ರಹ

ಬಜೆಟ್‌ನತ್ತ ಬೆಳೆಗಾರರ ಚಿತ್ತ

Team Udayavani, Feb 15, 2023, 6:42 AM IST

ರಬ್ಬರ್‌ ಬೆಳೆಗೆ ನಿರುತ್ತೇಜನದ ಕೊಡಲಿ ಏಟು! ಕೇರಳ ಮಾದರಿ ಪರಿಹಾರಕ್ಕೆ ಆಗ್ರಹ

ಬೆಳ್ತಂಗಡಿ: ವರ್ಷದ ಎಲ್ಲ ದಿನಗಳಲ್ಲೂ ಆದಾಯ ತರುವಂತಹ ಬೆಳೆ ರಬ್ಬರ್‌. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆಯ ಜತೆಗೆ ಮುಖ್ಯ ವಾಣಿಜ್ಯ ಬೆಳೆಯಾಗಿ ರಬ್ಬರನ್ನು ಅವಲಂಬಿ ಸಿದ್ದರೂ ಐದು ವರ್ಷಗಳಿಂದ ಉತ್ತಮ ಧಾರಣೆ ಕಾಣದಿರುವ ಹಿನ್ನೆಲೆಯಲ್ಲಿ ಮಕ್ಕಳಂತೆ ಸಲಹಿದ ರಬ್ಬರ್‌ ಮರಗಳ ಬುಡಕ್ಕೆ ಕೊಡಲಿ ಏಟು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ.

ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್‌ಗೂ ಮೇಲ್ಪಟ್ಟು ಪ್ರದೇಶದಲ್ಲಿ ರಬ್ಬರ್‌ ಬೆಳೆಯಲಾಗುತ್ತಿದೆ. ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ 5 ಲಕ್ಷಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. 12 ವರ್ಷಗಳ ಹಿಂದೆ ಕೆಜಿಗೆ 250 ರೂ. ಆಸುಪಾಸಿನಲ್ಲಿದ್ದ ಧಾರಣೆ ಇಂದು 130-150 ರೂ. ಆಸುಪಾಸಿನಲ್ಲಿದೆ.

ಕೇರಳದಲ್ಲಿ 2015-16ರ ಬಜೆಟ್‌ ನಲ್ಲಿ ಬೆಳೆಗಾರರ ರಕ್ಷಣೆಗಾಗಿ ರಬ್ಬರು ಉತ್ಪಾ ದನ ಪ್ರೋತ್ಸಾಹಧನ ಯೋಜನೆ ಯಡಿ ಪ್ರತೀ ಕೆಜಿಗೆ 170 ರೂ. ಕನಿಷ್ಠ ಧಾರಣೆ ನಿಗದಿ ಪಡಿಸಿ, ಮಾರುಕಟ್ಟೆ ಧಾರಣೆ ಮತ್ತು ಬೆಂಬಲ ಬೆಲೆಯ ವ್ಯತ್ಯಾಸದ ಮೊತ್ತ ವನ್ನು ನೇರವಾಗಿ ರೈತರ ಖಾತೆ ಗಳಿಗೆ ಜಮೆ ಮಾಡುವ ಯೋಜನೆ ಜಾರಿ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಸರಕಾರದ ಪ್ರೋತ್ಸಾಹ ಸರಿಯಾಗಿ ಸಿಗದ ಕಾರಣ ಬೆಳೆಗಾರರು ಅತಂತ್ರರಾಗಿದ್ದಾರೆ.

ಸಂಘಟನೆಯ ಕೊರತೆ
ರಾಜ್ಯದಲ್ಲಿ ರಬ್ಬರ್‌ ಬೆಳೆಗೆ ಪೂರಕವಾದ ಗೊಬ್ಬರ, ಮೈಲುತುತ್ತು, ಆ್ಯಸಿಡ್‌, ಪ್ಲಾಸ್ಟಿಕ್‌ ಇತ್ಯಾದಿಗಳ ಬೆಲೆ ಗಗನಕ್ಕೇರಿದ್ದು, ಗಿಡವೊಂದರ ಟ್ಯಾಪಿಂಗ್‌ಗೆ 1ರಿಂದ 2.50 ರೂ. ತಗಲುತ್ತದೆ. ಇದರಿಂದ ನಿರ್ವಹಣೆ ಸವಾಲಾಗಿದೆ. ಅತ್ತ ಬೆಳೆದು ನಿಂತಿರುವ ಮರ, ಇತ್ತ ಉಪಬೆಳೆ ಬೆಳೆಯಲೂ ಆಗದ ಸ್ಥಿತಿ ಬೆಳೆಗಾರನದು. ಮತ್ತೂಂದೆಡೆ ವಿದೇಶಗಳಿಂದ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಅಡಿಕೆ ಇತ್ಯಾದಿ ಬೆಳೆಗಳಿಗೆ ಕ್ಯಾಂಪ್ಕೋ ಮುಂತಾದ ಸಂಸ್ಥೆಗಳು ಧ್ವನಿಯಾಗಿವೆ. ಆದರೆ ರಬ್ಬರ್‌ ಬೆಳೆಗಾರರು ಅಸಂಘಟಿತರು, ಹೋರಾಟಕ್ಕೆ ಬಲದ ಕೊರತೆ ಕಾಡುತ್ತಿದೆ. ಸರಕಾರದ ಪ್ರೋತ್ಸಾಹವೂ ಕಡಿಮೆ.

ಹಲವು ತೋಟಗಳು ಟ್ಯಾಪಿಂಗ್‌ ಮಾಡಲು ಕಾರ್ಮಿಕರಿಲ್ಲದೆ ಪಾಳು ಬಿದ್ದಿವೆ. ವಾತಾವರಣದ ಏರುಪೇರಿನಿಂದ ಮಳೆಗಾಲದ ಆರಂಭದಲ್ಲೇ ಎಲೆ ಉದು ರುವ ಸ್ಥಿತಿಯಿದೆ. ಚಳಿ ಕೊರತೆಯಾಗಿ ಇಳುವರಿ ಕೂಡ ಕಡಿಮೆಯಾಗಿದೆ. ಪರಿ ಣಾಮ ಗಿಡದ ಆಯುಸ್ಸು ಕುಸಿಯುತ್ತಿದೆ.

ರಬ್ಬರ್‌ ಬೆಳೆಗಾರರಿಗೆ ನಿರೀಕ್ಷಿಸಿದ ಆದಾಯ ಕೈಸೇರುತ್ತಿಲ್ಲ. ಬೆಂಬಲ ಬೆಲೆ ಘೋಷಿಸಬೇಕೆಂದು ಮನವಿಗಳು ಬಂದಿವೆ. ಈ ಕುರಿತು ಪ್ರತ್ಯೇಕ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ. ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.
– ಮುನಿರತ್ನ, ತೋಟಗಾರಿಕೆ ಸಚಿವ

ಬೆಳ್ತಂಗಡಿಯಿಂದ ಕರ್ನಾಟಕ ಸೀರೋ ಮಲಬಾರ್‌ ಕೆಥೋಲಿಕ್‌ ಅಸೋಸಿಯೇಶನ್‌ (ಕೆಎಸ್‌ಎಂಸಿಎ) ಮತ್ತು ಉಜಿರೆ ರಬ್ಬರ್‌ ಸೊಸೈಟಿ ನೇತೃತ್ವದಲ್ಲಿ ಶಾಸಕ ಹರೀಶ್‌ ಪೂಂಜ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ ರಬ್ಬರ್‌ ಕೃಷಿಕರ ಸಮಸ್ಯೆ ಕುರಿತು ಮನವರಿಕೆ ಮಾಡಲಾಗಿದೆ. ಕೇರಳ ಮಾದರಿಯಲ್ಲಿ ಮುಂದಿನ ಬಜೆಟ್‌ನಲ್ಲಿ ರಾಜ್ಯದಲ್ಲೂ ಬೆಂಬಲ ಬೆಲೆ ಘೋಷಿಸಬೇಕಾಗಿದೆ.
– ಫಾ| ಶಾಜಿ ಮಾಥ್ಯು, ಕೆಎಸ್‌ಎಂಸಿಎ ನಿರ್ದೇಶಕರು

ಕರಾವಳಿ, ಮಲೆನಾಡು ಶಾಸಕರು ಧ್ವನಿಯಾಗಲಿ
ಆನೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಯಿಂದ ರಬ್ಬರ್‌ ಟ್ಯಾಪಿಂಗ್‌ ತ್ರಾಸದಾಯಕ. ಈ ವಿಚಾರವನ್ನು ತೋಟಗಾರಿಕೆ ಸಚಿವರ ಗಮನಕ್ಕೂ ಬೆಳೆಗಾರರು ತಂದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲ ಶಾಸಕರು ತಮ್ಮ ಪರವಾಗಿ ಧ್ವನಿ ಎತ್ತಬೇಕು ಎಂಬುದು ಬೆಳೆಗಾರರ ಆಗ್ರಹ.

ಪ್ರಮುಖ ಬೇಡಿಕೆಗಳು
– ಬೆಂಬಲ ಬೆಲೆ 200 ರೂ. ಆಸುಪಾಸಿನಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕು.
– ಔಷಧ, ಗೊಬ್ಬರ, ಪರಿಕರಗಳನ್ನು ಸಬ್ಸಿಡಿಯಲ್ಲಿ ಒದಗಿಸಬೇಕು.
– ರಬ್ಬರ್‌ ಕಾರ್ಮಿಕರಿಗೆ ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿವೇತನ ಅಗತ್ಯ.

ಪ್ರಮುಖ ಅಂಶಗಳು
∙ ರಬ್ಬರ್‌ನಿಂದ 40 ಸಾವಿರಕ್ಕೂ ಅಧಿಕ ಉತ್ಪನ್ನಗಳು ತಯಾರಾಗುತ್ತಿವೆ.
∙ರಾಜ್ಯದಲ್ಲಿದೆ 60 ಸಾವಿರ ಹೆಕ್ಟೇರ್‌ ಮೇಲ್ಪಟ್ಟು ರಬ್ಬರ್‌ ಬೆಳೆ
∙ರಾಜ್ಯದ ಪ್ರಸಕ್ತ ರಬ್ಬರ್‌ ಉತ್ಪಾದನೆ 40 ಸಾವಿರ ಟನ್‌
∙ರಾಜ್ಯದ ಕೃಷಿ ವಿಸ್ತೀರ್ಣ ಪರಿಗಣಿಸಿದರೆ 1 ಲಕ್ಷ ಟನ್‌ ಬೆಳೆಯಲು ಅವಕಾಶವಿದೆ
∙ಪ್ರಸಕ್ತ ಉತ್ಪಾದನೆಯಲ್ಲಿ 700 ಕೋ.ರೂ. ಆದಾಯದಿಂದ ಸರಕಾರಕ್ಕೆ 35 ಕೋ.ರೂ. ತೆರಿಗೆ ಲಾಭ
∙1 ಲಕ್ಷ ಟನ್‌ ಉತ್ಪಾದನೆಯಾದರೆ ಸರಕಾರಕ್ಕೆ 65 ಕೋ.ರೂ. ತೆರಿಗೆ ಸಂಗ್ರಹದ ಲಾಭ

– ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.