ಶಿಕ್ಷಕರ ಸಮಸ್ಯೆ ಸಚಿವರ ಗಮನಕ್ಕೆ: ಶಾಸಕರ ಭರವಸೆ

ಬಂಟ್ವಾಳ: ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ

Team Udayavani, Nov 19, 2019, 4:26 AM IST

cc-17

ಬಂಟ್ವಾಳ: ಪ್ರೌಢಶಾಲಾ ಶಿಕ್ಷಕರಿಗೆ ಸರಕಾರವು ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿ ಕೊಳ್ಳುತ್ತಿರುವುದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಿಕ್ಷಕರಿಂದಲೇ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಅದನ್ನು ರಾಜ್ಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಸೋಮವಾರ ಬಿ.ಸಿ.ರೋಡಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸೆಸೆಲ್ಸಿಯಲ್ಲಿ ಈ ಬಾರಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

ಹಲವು ಸವಾಲು
ಸಂವಾದದ ವೇಳೆ ಅಳಿಕೆ ಶಾಲಾ ಮುಖ್ಯಶಿಕ್ಷಕ ರಘುನಾಥ್‌ ಅವರು ಸರಕಾರಿ ಶಾಲೆಗಳ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಸರಕಾರವು ಸಂಖ್ಯೆಗಳ ಆಧಾರದಲ್ಲಿ ಶಿಕ್ಷಕರನ್ನು ನೀಡು ತ್ತಿದ್ದು, ಆದರೆ ಬಹುತೇಕ ಕಡೆ ತರಗತಿಗಿಂತಲೂ ಕಡಿಮೆ ಶಿಕ್ಷಕರು ದುಡಿಯುತ್ತಾರೆ.ಇದರ ಒತ್ತಡದ ನಡುವೆ ಬೇರೆ ಬೇರೆ ತರಬೇತಿಗಳು, ಮುಖ್ಯಶಿಕ್ಷಕರಿಗೆ ಕಚೇರಿ ಕೆಲಸ, ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವುದು ಇಂತಹ ಹಲವು ಸವಾಲುಗಳು ಸರಕಾರಿ ಶಿಕ್ಷಕರ ಮೇಲಿದ್ದು, ಇದನ್ನು ನಿಭಾಯಿಸಿ ಪಾಠ ಮಾಡಬೇಕಾಗುತ್ತದೆ. ಸರಕಾರದ ಸುತ್ತೋಲೆಗಳ ಪ್ರಕಾರವೇ ನಾವು ಕೆಲಸ ಮಾಡುತ್ತಿದ್ದು, ಇದರಿಂದ ನಿರಂ ತರತೆಯಲ್ಲೂ ಕೊರತೆ ಬಂದು ವಿದ್ಯಾರ್ಥಿಗಳನ್ನು ನಿಯಂತ್ರಣದ ಲ್ಲಿಟ್ಟುಕೊಳ್ಳುವುದು ಕೂಡ ಕಷ್ಟವಾಗಿದೆ ಎಂದರು.

ಶಿಕ್ಷಕರ ಇಂತಹ ಸಮಸ್ಯೆಯನ್ನು ಆಲಿಸಿದ ಶಾಸಕರು, ಇಂತಹ ವಿಚಾರಗಳಲ್ಲಿ ಈಗಿನ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೆಚ್ಚು ಗಂಭೀರರಾಗಿದ್ದು, ಇದನ್ನು ಅವರ ಗಮನಕ್ಕೆ ತಂದು ಪರಿಹರಿ ಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ತರಬೇತಿಗಳನ್ನು ಶಾಲೆ ಪ್ರಾರಂಭದ ದಿನಗಳಲ್ಲೇ ಮುಗಿಸುವ ಕುರಿತು ಸಲಹೆ ನೀಡುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳ ಕೌನ್ಸೆಲಿಂಗ್‌
ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕೌನ್ಸೆಲಿಂಗ್‌ ಮಾಡುವ ಜತೆಗೆ ಪೋಷಕರಿಗೂ ಬುದ್ಧಿವಾದ ಹೇಳುವ ಕುರಿತು ಶಾಸಕರು ಸಲಹೆ ನೀಡಿದರು. ಶಾಲೆಗಳಲ್ಲಿ ಪೋಷಕರ ಸಭೆಗಳನ್ನಿಟ್ಟಾಗ ಬೆರಳೆಣಿಕೆಯ ಪೋಷಕರು ಮಾತ್ರ ಬರುತ್ತಾರೆ ಎಂದು ಶಿಕ್ಷಕರು ಆರೋಪಿಸಿದರು. ಇಂತಹ ತೊಂದರೆಗಳಿದ್ದರೆ ಎಸ್‌ಡಿಎಂಸಿ ಸಮಿತಿಯನ್ನು ಸಭೆ ಕರೆದು ಚರ್ಚಿಸೋಣ ಎಂದರು.

ಗಮನಕ್ಕೆ ತನ್ನಿ
“ಶಾಲೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುವ ಯಾವುದೇ ಕೆಲಸವನ್ನು ತಾನು ಸಹಿಸುವುದಿಲ್ಲ. ಆದರೆ ಫಲಿತಾಂಶ ಮಾತ್ರ ಹೆಚ್ಚಳವಾಗಲೇಬೇಕು’ ಎಂದು ಶಿಕ್ಷಕರಿಗೆ ಸೂಚಿಸಿದರು. ಸಿದ್ಧಕಟ್ಟೆ ಶಾಲಾ ಮುಖ್ಯಶಿಕ್ಷಕ ರಮಾನಾಂದ ಅವರು ಫಲಿತಾಂಶ ಹೆಚ್ಚಳದ ಕುರಿತು ಎಲ್ಲ ಶಿಕ್ಷಕರ ಪರವಾಗಿ ಭರವಸೆ ನೀಡಿದರು.

ಪಟ್ಟಿ ನೀಡುವಂತೆ ಸೂಚನೆ
ಶಾಲೆಗಳ ಮೂಲಸೌಕರ್ಯಗಳ ಕೊರತೆ, ಪ್ರಾಕೃತಿಕ ವಿಕೋಪಗಳ ಹಾನಿ ಮೊದಲಾದ ವಿಚಾರಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ ಅವರು ಶಾಸಕರ ಗಮನಕ್ಕೆ ತಂದರು. ಶಾಲೆಗಳ ಕಂಪ್ಯೂಟರ್‌ ಕೊರತೆಯ ಕುರಿತು ಪಟ್ಟಿ ನೀಡು ವಂತೆ ಶಾಸಕರು ತಿಳಿಸಿದರು.

ಅತಿಥಿ ಶಿಕ್ಷಕರಿಗೆ ಗೌರವಧನವಿಲ್ಲ!
ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರವು ಪ್ರತಿ ಶಾಲೆಗಳಿಗೆ ಗೌರವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದೆ. ಅವರ ಕಡಿಮೆ ವೇತನದಲ್ಲೂ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೌರವಧನಕ್ಕೆ ಅನುದಾನವೇ ಬಂದಿಲ್ಲ ಎಂದು ಶಿಕ್ಷಕರೊಬ್ಬರು ಶಾಸಕರಿಗೆ ತಿಳಿಸಿದರು. ಈ ಕುರಿತು ಸಂಬಂಧಪಟ್ಟವರ ಜತೆ ಚರ್ಚೆಸುವುದಾಗಿ ಶಾಸಕರು ಭರವಸೆ ನೀಡಿದರು.

ಟಾಪ್ ನ್ಯೂಸ್

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.