Tomato ಸಾಗಾಟದ ಟೆಂಪೋ ಪಲ್ಟಿ; ಅಪಾಯದಿಂದ ಪಾರು
Team Udayavani, Nov 21, 2023, 9:06 PM IST
ಬೆಳ್ತಂಗಡಿ: ಚಿಕ್ಕಮಗಳೂರು ಕಡೆಯಿಂದ ಉಜಿರೆಯತ್ತ ಸಾಗುತ್ತಿದ್ದ ಟೊಮೇಟೊ ಲೋಡ್ ಇದ್ದ ಟೆಂಪೋ ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪದ ವಲಸರಿ ಎಂಬಲ್ಲಿ ಉರುಳಿ ಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಯ ಚರಂಡಿ ಇಳಿದು ಪಲ್ಟಿಯಾಯಿತು. ವಾಹನದಲ್ಲಿ ಇದ್ದ ಮಂದಿ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರ ಸಹಕಾರದಲ್ಲಿ ಉರುಳಿ ಬಿದ್ದ ವಾಹನ ತೆರವುಗೊಳಿಸಲಾಯಿತು.