ನಿರುಪಯುಕ್ತ ವಸ್ತುಗಳಿಂದ ಮಣ್ಣೆತ್ತುವ ಯಂತ್ರಾನ್ವೇಷಣೆ

ಕಟ್ಟಡ, ಕೃಷಿ ಕಾರ್ಮಿಕ ಸಿದ್ಧಪಡಿಸಿದ ವೆಲ್‌ ಲಿಫ್ಟರ್‌ ;  ಕಾರ್ಮಿಕರ ಕೊರತೆ ನೀಗಿಸಿಕೊಳ್ಳಲು ಹೊಸ ಯಂತ್ರ ತಯಾರಿ

Team Udayavani, Feb 7, 2022, 5:18 PM IST

ನಿರುಪಯುಕ್ತ ವಸ್ತುಗಳಿಂದ ಮಣ್ಣೆತ್ತುವ ಯಂತ್ರಾನ್ವೇಷಣೆ

ಹೆಮ್ಮಾಡಿ: ಹಕ್ಲಾಡಿ ಗ್ರಾಮದ ಹಕ್ಲಾಡಿ ಗುಡ್ಡೆಯ ಕಟ್ಟಡ, ಕೃಷಿ ಕಾರ್ಮಿಕರೊಬ್ಬರು ಗುಜರಿ ಅಂಗಡಿಯಿಂದ ತಂದ ನಿರುಪಯುಕ್ತ ವಸ್ತುಗಳಿಂದಲೇ ಹೊಸ ಯಂತ್ರವೊಂದನ್ನು ಅನ್ವೇಷಣೆ ಮಾಡಿದ್ದಾರೆ. ಅದು ಸಹ ಒಂದೇ ತಿಂಗಳಲ್ಲಿ ಇವರು ಬಾವಿಯ ಮಣ್ಣೆತ್ತುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ.

ಹಕ್ಲಾಡಿ ಗ್ರಾಮದ ಹಕ್ಲಾಡಿಗುಡ್ಡೆಯ ಚಂದ್ರಶೇಖರ ಮೊಗವೀರ ಅವರು ಕಸದಲ್ಲಿ ಬಾವಿ ಮಣ್ಣೆತ್ತುವ ಯಂತ್ರ ಸಿದ್ಧಪಡಿಸಿದ ಸಾಹಸಿ. ಕೇವಲ ಒಂದೇ ತಿಂಗಳಲ್ಲಿ ಬಾವಿ ಮಣ್ಣೆತ್ತುವ ಯಂತ್ರ (ವೆಲ್‌ ಲಿಫ್ಟರ್‌) ಸಿದ್ಧಪಡಿಸಿದ್ದಲ್ಲದೆ, ಅದರ ಸಹಾಯದಿಂದಲೇ 24 ಅಡಿ ಬಾವಿ ತೋಡಿ, ನೀರು ಪಡೆದ ಪರಿಶ್ರಮಿ.

ಚಂದ್ರಶೇಖರ ಅವರು ಮನೆ ಬಳಿ ಇರುವ ಸ್ವಲ್ಪ ಜಾಗದಲ್ಲಿಯೇ ಕೃಷಿ ಮಾಡುತ್ತಿದ್ದು, ಕೃಷಿ, ಕಟ್ಟಡ, ಕಲ್ಲು ಕಟ್ಟುವುದು, ಗಾರೆ, ಗುಡಿ ನಿರ್ಮಾಣ, ಎಲೆಕ್ಟ್ರೀಶಿಯನ್‌ ಕೆಲಸ ಜತೆ ಚಾಲಕರಾಗಿಯೂ ಕೆಲಸ ಮಾಡುತ್ತಾರೆ. ತಮ್ಮ ಜಾಗದಲ್ಲಿ ತೋಟ ಮಾಡುವ ಉದ್ದೇಶದಿಂದ ಮಳೆಗಾಲದಲ್ಲಿ 100 ತೆಂಗಿನ ಸಸಿ ನಾಟಿ ಮಾಡಿದ್ದರು. ಮಳೆ ಕಡಿಮೆಯಾದ ಅನಂತರ ತೋಟಕ್ಕೆ ನೀರುಣಿಸಲು ಬಾವಿ ತೋಡಲು ಮುಂದಾಗಿದ್ದು, ಕೆಲಸಕ್ಕೆ ಜನ ಸಿಗದಿದ್ದರಿಂದ ಯಂತ್ರ ಸಿದ್ಧಪಡಿಸುವ ಸಾಹಸಕ್ಕೆ ಕೈ ಹಾಕಿದ್ದರು. ಈ ಹಿಂದೆಯೂ ಇದೇ ರೀತಿ ನಿರುಪಯುಕ್ತ ವಸ್ತುಗಳಿಂದಲೇ ಮರಳು ಸೋಸುವ ಯಂತ್ರ ತಯಾರಿಸಿದ್ದರು.

ಯಂತ್ರ ತಯಾರಿಸಿದ್ದು ಹೇಗೆ?
ಗುಜರಿ ಅಂಗಡಿಯಿಂದ ಯಂತ್ರಕ್ಕೆ ಬೇಕಾದ ಕಬ್ಬಿಣಿದ ಪಟ್ಟಿ, ರಾಡ್‌, ಮೋಟಾರ್‌ ಆಟೋರಿûಾದ ಹಳೇ ಚಕ್ರತಂದು ಮಣ್ಣೆತ್ತುವ ಯಂತ್ರಕ್ಕೆ ನಿರ್ಮಾಣಕ್ಕೆ ಮುಂದಾದರು. 3 ಅಡಿ ಉದ್ದದ ಕಬ್ಬಿಣದ ಪಟ್ಟಿಗೆ ಸಾಗಾಟಕ್ಕೆ ಅನುಕೂಲ ಆಗುವಂತೆ ಚಕ್ರ ಅಳವಡಿಸಿದರು. ಹಿಂದೆ ಡೀಸೆಲ್‌ ನೀರೆತ್ತುವ ಯಂತ್ರ ಕೂರಿಸಿ, ನೀರೆತ್ತುವ ವ್ಯವಸ್ಥೆ ಮಾಡಿಕೊಂಡರು. ಹೀಗೆ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಬಾವಿ ಮಣ್ಣೆತ್ತುವ ಯಂತ್ರವನ್ನು ತಯಾರಿಸಿದರು. ಈ ವೆಲ್‌ಲಿಫ್ಟರ್‌ನಿಂದ ಬಾವಿ ಒಳಗಡೆ ಮಣ್ಣುತುಂಬಲು ಒಬ್ಬರಿದ್ದರೆ, ಯಂತ್ರದ ಆಪರೇಟ್‌ ಮಾಡಲು ಒಬ್ಬರು ಇದ್ದರೆ ಸಾಕು. ಇಬ್ಬರೇ ಎಷ್ಟು ಆಳದ ಬಾವಿ ತೋಡಲು ಸಾಧ್ಯ. ನಿಮಿಷಕ್ಕೆ 3 ರಿಂದ 4 ಬುಟ್ಟಿ ಮಣ್ಣೆತ್ತೆಲು ಸಾಧ್ಯವಿದ್ದು, 250 ಕೆ.ಜಿ. ಸಾಮರ್ಥ್ಯ ಹೊಂದಿದೆ. ವೆಲ್‌ ಲಿಫ್ಟರ್‌ ಸಿದ್ಧಪಡಿಸಲು ಚಂದ್ರಶೇಖರ ಅವರು ಖರ್ಚು ಮಾಡಿದ ಮೊತ್ತ 70 ಸಾವಿರ ರೂ.

ಗುಜರಿ ವಸ್ತುವಿನಿಂದಲೇ ತಯಾರಿ
ಬಾವಿ ತೋಡಲು ಈಗ ಜನ ಸಿಗದ ಕಾರಣಕ್ಕೆ ಈ ಯಂತ್ರ ತಯಾರಿಗೆ ಮುಂದಾದೆ. ಮಣ್ಣೆತ್ತುವ ಜತೆ ಬಾವಿ ತೋಡುವಾಗ ನೀರು ಬಂದರೆ ನೀರು ಖಾಲಿ ಮಾಡಲು ಮೋಟಾರ್‌ ಕೂಡ ಫಿಕ್ಸ್‌ ಮಾಡಲಾಗಿದೆ. ವೆಲ್‌ಲಿಫ್ಟ್‌ ಸಿದ್ದಪಡಿಸಲು ಕೇಬಲ್‌ ತಂತಿ ಒಂದು ಬಿಟ್ಟು ಮತ್ತೆಲ್ಲ ವಸ್ತುಗಳು ಗುಜರಿಯಿಂದಲೇ ತಂದಿದ್ದು. ಈಗಿನ ಯಂತ್ರ ಇನ್ನಷ್ಟು ನವೀಕರಿಸುವ ಯೋಚನೆಯಿದೆ.
– ಚಂದ್ರಶೇಖರ ಮೊಗವೀರ ಹಕ್ಲಾಡಿಗುಡ್ಡೆ , ಯಂತ್ರ ಅನ್ವೇಷಕ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.