ಬೈಂದೂರು: ಟವರ್‌ ಸಿದ್ಧ- ನೆಟ್‌ವರ್ಕ್‌ಗೆ ಗುಡ್ಡ ಹತ್ತಬೇಕು!

Team Udayavani, May 22, 2024, 5:55 PM IST

ಬೈಂದೂರು: ಟವರ್‌ ಸಿದ್ಧ- ನೆಟ್‌ವರ್ಕ್‌ಗೆ ಗುಡ್ಡ ಹತ್ತಬೇಕು!

ಬೈಂದೂರು: ಬೈಂದೂರಿನ ಗ್ರಾಮೀಣ ಭಾಗದಲ್ಲಿ ಕಳೆದೊಂದು ವರ್ಷದಿಂದ ನಿರೀಕ್ಷೆಯಲ್ಲಿದ್ದ ಮೊಬೈಲ್‌ ಟವರ್‌ ಗಳ ಕಾಮಗಾರಿ ಏನೋ ಪೂರ್ಣಗೊಂಡಿದೆ. ಆದರೆ ಇಲ್ಲಿನ ಜನ ನೆಟ್‌ವರ್ಕ್‌ಗಾಗಿ ಗುಡ್ಡ ಬೆಟ್ಟ ಹತ್ತುವುದು ನಿಂತಿಲ್ಲ. ಹತ್ತಿರದಲ್ಲೇ
ಟವರ್‌ ಇದ್ದರೂ ಹಲೋ ಅನ್ನಲು ದೂರದ ಬೆಟ್ಟ ಹತ್ತುವ ಶಿಕ್ಷೆಯನ್ನು ಇಲ್ಲಿನವರು ಅನುಭವಿಸಬೇಕಾಗಿದೆ.

ಹಲವು ವರ್ಷದ ಸಮಸ್ಯೆ ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳು ಇಂದಿಗೂ ನೆಟ್‌ ವರ್ಕ್‌ ಗಾಗಿ ಪರದಾಡಬೇಕಾಗಿದೆ. ಬೈಂದೂರು ಭಾಗದ ಜನರ ಬಹು ವರ್ಷದ ಬೇಡಿಕೆಯನ್ನೇ ಗಂಭೀರವಾಗಿ ಪರಿಗಣಿಸಿದ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಟೆಲಿಕಾಂ ಸಚಿವರನ್ನು ಬೇಟಿಯಾಗಿ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಟವರ್‌ ಗಳನ್ನು ಬೈಂದೂರು ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಟವರ್‌ ಸಿದ್ಧಗೊಂಡು 4 ತಿಂಗಳು ಆರಂಭದಲ್ಲಿ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಸಾಕಷ್ಟು ವಿಳಂಬವಾದರೂ ಕಳೆದ ನಾಲ್ಕು ತಿಂಗಳ ಹಿಂದೆ ಟವರ್‌ ನಿರ್ಮಾಣದ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ನೆಟ್‌ವರ್ಕ್‌ ಸಂಪರ್ಕ ಮಾತ್ರ ಇದುವರೆಗೆ ದೊರೆತಿಲ್ಲ. ಹೀಗಾಗಿ ಗ್ರಾಮೀಣ ಭಾಗಗಳ ಜನರು ಶೀಘ್ರ ಮೊಬೈಲ್‌ ನೆಟ್‌ ವರ್ಕ್‌ ಸಂಪರ್ಕ ನೀಡಲು ಆಗ್ರಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ಮೊಬೈಲ್‌ ಟವರ್‌ ನಿರ್ಮಾಣ ಗೊಂಡರೂ ಸಹ ನೆಟ್‌ವರ್ಕ್‌ ಸಂಪರ್ಕ ಸಿಗದಿರುವುದು ಹಳ್ಳಿ ಭಾಗದ ಬೆಳವಣಿಗೆಯನ್ನು ಒಂದಿಷ್ಟು ಕುಂಠಿತಗೊಳಿಸಿದೆ.

ನೆಟ್‌ವರ್ಕ್‌ ವಿಳಂಬಕ್ಕೆ ಏನು ಕಾರಣ?
ಆರಂಭದಲ್ಲಿ ಸರಕಾರಿ ಜಾಗದ ಕೊರತೆಯಿಂದ ಖಾಸಗಿ ಜಾಗ ಹುಡುಕುವುದು ಜೊತೆಗೆ ಹಳ್ಳಿ ಭಾಗದಲ್ಲಿ ಭೂ ದಾಖಲೆ ಪರಿಪೂರ್ಣತೆ ಕೊರತೆ ಪಟ್ಟಣ ಪಂಚಾಯತ್‌ ಮತ್ತು ಗ್ರಾ.ಪಂ ಅನುಮತಿ ಜತೆಗೆ, ಮೆಸ್ಕಾಂ ಸಂಪರ್ಕ ಈ ಪ್ರಕ್ರಿಯೆಗಳನ್ನು ಖುದ್ದು ಸಂಸದರ ಕಚೇರಿ ಸಿದ್ಧಪಡಿಸಿಕೊಟ್ಟಿದೆ. ಟೆಲಿಕಾಂ ಇಲಾಖೆ ಅಧಿಕಾರಿಗಳ ವಿಳಂಬದ ಕಾರಣ ಟವರ್‌ ನಿರ್ಮಾಣ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಟವರ್‌ಗಳಿದ್ದು ಬೈಂದೂರಿನಲ್ಲಿ 10 ಟವರ್‌ಗಳು ನಿರ್ಮಾಣವಾಗುತ್ತಿದೆ. ಗುತ್ತಿಗೆಯಲ್ಲಿ ಹೈದ್ರಾಬಾದ್‌ ಪಡೆದಿದೆ. ನೆಟ್‌ವರ್ಕ್‌ ಸಂಪರ್ಕ ಸಾಧನಗಳು ದೆಹಲಿದಿಂದ ಬರಬೇಕಾಗಿದೆ. ಎಲ್ಲ ಕಡೆಗಳಲ್ಲಿ ಒಂದೇ ಬಾರಿ ಸಂಪರ್ಕ ಕಲ್ಪಿಸುವ ಕಾರಣ ಸಿದ್ಧಗೊಂಡಿರುವ ಟವರ್‌ಗಳು ಕೂಡ ಸಂಪರ್ಕಕ್ಕಾಗಿ
ಕಾಯಬೇಕಾಗಿದೆ. ಇದರ ಜತೆಗೆ ಕೇಬಲ್‌ಗ‌ಳು ಬಹುದೂರದಿಂದ ತರಬೇಕಾದ ಸಮಸ್ಯೆ ಕೂಡ ಇದೆ.

ಪ್ರಕ್ರಿಯೆ ಪೂರ್ಣ
ಈಗಾಗಲೇ ಬೈಂದೂರು ವ್ಯಾಪ್ತಿಯಲ್ಲಿ ಟವರ್‌ ಕಾಮಗಾರಿ ಪೂರ್ಣಗೊಂಡಿದ್ದು ನೆಟ್‌ವರ್ಕ್‌ ಸಂಪರ್ಕ ಸಾಧನಗಳು ಶೀಘ್ರ ಬರಲಿದೆ. ಕೇಬಲ್‌ ಸಂಪರ್ಕ ಅಥವಾ ಟವರ್‌ ನೆಟ್‌ವರ್ಕ್‌ ಕುರಿತು ಪರೀಕ್ಷೆ ನಡೆಸಿ ಸಂಪರ್ಕ ನೀಡಲಿದ್ದೇವೆ. ಇನ್ನುಳಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ.
*ವಿರಾಜ್‌ ನಾಯ್ಕ, ಅಧಿಕಾರಿ,
ದೂರವಾಣಿ ಇಲಾಖೆ ಬೈಂದೂರು

ಶೀಘ್ರ ಕಲ್ಪಿಸಿಕೊಡಿ
ಬೈಂದೂರು ವ್ಯಾಪ್ತಿಯಲ್ಲಿ ಗ್ರಾಮೀಣಭಾಗಗಳಲ್ಲಿ ಬಹುದಿನದಿಂದ ಮೊಬೈಲ್‌ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಟವರ್‌ ನಿರ್ಮಾಣವಾಗಿರುವುದು ಸಂತಸ ತಂದರೂ ಇದುವರೆಗೆ ನೆಟ್‌ವರ್ಕ್‌ ಬಂದಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಪ್ರಯತ್ನಿಸಬೇಕಿದೆ.
*ನಾಗಪ್ಪ ಮರಾಠಿ, ಹೊಸೂರು

*ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

ಸಾಲಿಗ್ರಾಮ-ಪಾರಂಪಳಿ ನಡುವಿನ ಸೇತುವೆಗೆ ಮುಕ್ತಿ ಯಾವಾಗ?

ಸಾಲಿಗ್ರಾಮ-ಪಾರಂಪಳಿ ನಡುವಿನ ಸೇತುವೆಗೆ ಮುಕ್ತಿ ಯಾವಾಗ?

ಕುಂದಾಪುರ: ಕೆರೆಯ ಕಲ್ಲನು ಕೆರೆಗೆ ಚೆಲ್ಲಿದ ಕುಂದಾಪುರ ಪುರಸಭೆ!

ಕುಂದಾಪುರ: ಕೆರೆಯ ಕಲ್ಲನು ಕೆರೆಗೆ ಚೆಲ್ಲಿದ ಕುಂದಾಪುರ ಪುರಸಭೆ!

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.