ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿ
ಇನ್ನೂ ಮೂರು ದಿನ ಮಳೆ; ಮುಂಜಾಗ್ರತಾ ಕ್ರಮವಾಗಿ ಕಂಟ್ರೋಲ್ ರೂಮ್ ಸ್ಥಾಪನೆ
Team Udayavani, May 18, 2022, 12:51 PM IST
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಳಗ್ಗೆ ದಕ್ಷಿಣ ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ , ಬೆಂಗಳೂರಿನಲ್ಲಿ 90 ಮಿಲಿ ಮೀಟರ್ ಮಳೆ ಬಿದ್ದರೇ ತಗ್ಗು ಪ್ರದೇಶಗಳು ಜಲಾವೃತವಾಗುತ್ತದೆ. ನೀರಿಕ್ಷೆ ಮೀರಿ 100,102, 103 ಮಿಲಿ ಮೀಟರ್ ಮಳೆ ಆಗಿದೆ. ನಾನು ಈಗಾಗಲೇ ಬಿಬಿಎಂಪಿ ಆಯುಕ್ತರು, ಇಂಜಿನಿಯರ್ ಗಳೊಂದಿಗೆ ಮಾತನಾಡಿದ್ದೇನೆ , ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಅದನ್ನು ಪಂಪ್ ಗಳ ಮೂಲಕ ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ಹೋಂ ಗಾರ್ಡ್ ಗಳು, ಬಿಬಿಎಂಪಿ ಸಿಬ್ಬಂದಿಗಳು, ಎಸ್ ಡಿಆರ್ ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.
ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಂಟ್ರೋಲ್ ರೂಮ್ ಕೂಡ ಸ್ಥಾಪನೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಮಳೆ ಬಂದು ತಗ್ಗು ಪ್ರದೇಶಗಳು ಜಲಾವೃತವಾಗುವುದು ಭೌಗೋಳಿಕವಾಗಿರುವ ಸಮಸ್ಯೆ, ಹಿಂದೆಯೂ ಆಗುತಿತ್ತು. ಬೆಂಗಳೂರಿನ ಕೆಲವು ಕಡೆ ಕಾವೇರಿ ಪೈಪ್ ಲೈನ್, ಗ್ಯಾಸ್ ಲೈನ್, ಕೇಬಲ್ ಲೈನ್ ಗಳ ಕಾಮಗಾರಿ ನಿರಂತರವಾಗಿ ನಡೆಯುತ್ತಿವುದರಿಂದ ಕೆಲವು ಕಡೆ ತೊಂದರೆ ಆಗಿದೆ ಎಂದರು.
ಇದನ್ನೂ ಓದಿ : ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ
ಸಿಎಂ ಅವರೊಂದಿಗೆ ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಇತರ ಅಧಿಕಾರಿಗಳು ಇದ್ದರು. ಸಿಎಂ ಚಿಕ್ಕಮಗಳೂರಿಗೆ ತೆರಳುವ ವೇಳೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀರಿನ ಪೈಪ್ಲೈನ್ಗೆ ಹಾನಿ: ರಸ್ತೆ ಬಿರುಕು
ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ
ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?
ಗಡಿಯಾಚೆ ಅಡಗುವ ಅಪರಾಧಿಗಳ ಹೆಡೆಮುರಿ ಕಟ್ಟಲು ಕರ್ನಾಟಕ-ಕೇರಳ ಪೊಲೀಸ್ ಜಂಟಿ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
ನೀರಿನ ಪೈಪ್ಲೈನ್ಗೆ ಹಾನಿ: ರಸ್ತೆ ಬಿರುಕು
ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ
ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?
ಗಡಿಯಾಚೆ ಅಡಗುವ ಅಪರಾಧಿಗಳ ಹೆಡೆಮುರಿ ಕಟ್ಟಲು ಕರ್ನಾಟಕ-ಕೇರಳ ಪೊಲೀಸ್ ಜಂಟಿ ಕಾರ್ಯಾಚರಣೆ