ಶತಕದ ಗಡಿ ದಾಟಿತು ಕೋವಿಡ್‌ 19

Team Udayavani, May 18, 2020, 9:21 AM IST

shataka-corona

ಕಲಬುರಗಿ: ದೇಶದಲ್ಲೇ ಕೋವಿಡ್‌ 19 ಸೋಂಕಿಗೆ ಮೊದಲು ಬಲಿಯಾದ ಬಿಸಿಲೂರಿನಲ್ಲಿ ಮಹಾಮಾರಿ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ. ರವಿವಾರ ಒಂದೇ ದಿನ ಹತ್ತು ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ  ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಈಗಾಗಲೇ ಕೋವಿಡ್‌ ಹೆಮ್ಮಾರಿಯಿಂದ ತತ್ತರಿಸಿರುವ ಸೂರ್ಯನಗರಿಗೆ ಮಹಾರಾಷ್ಟ್ರದ ಮುಂಬೈನಿಂದ ಬಂದ ವಲಸಿಗರಿಂದಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರವಿವಾರ ಸೋಂಕು ಪತ್ತೆಯಾದ  10 ಜನರಲ್ಲಿ ಆರು ಜನರು ಮುಂಬೈಯಿಂದ ಬಂದವರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತ್ಯ ಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲು ಒಂದು ದಿನಕ್ಕೆ  ಅತಿ ಹೆಚ್ಚು ಎಂದರೆ  ಎಂಟು ಜನರಿಗೆ ಸೋಂಕು ಪತ್ತೆಯಾಗಿದ್ದವು.

ಮಹಾ ಕಂಟಕ: ಸೌದಿ ಅರೇಬಿಯಾದಿಂದ ಮರಳಿದ 76 ವರ್ಷದ ವೃದ್ಧನ ಮೂಲಕ ಜಿಲ್ಲೆಗೆ ಕೋವಿಡ್‌ 19 ಮಹಾಮಾರಿ ಕಾಲಿಟ್ಟಿತ್ತು. ಮಾ.10ರಂದು ಈ ವೃದ್ಧ ಮೃತಪಟ್ಟ ವಿಷಯ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಯಾಕೆಂದರೆ,  ಇದು ದೇಶದಲ್ಲೇ ಮೊದಲು ಕೋವಿಡ್‌ 19ಗೆ ಬಲಿಯಾದ ಪ್ರಕರಣವಾಗಿತ್ತು. ವೃದ್ಧನ ಸಾವಿನ ನಂತರ ದೆಹಲಿ ಮಸೀದಿಯಿಂದ ಬಂದವರಿಂದ ಹೆಮ್ಮಾರಿ ಸೋಂಕು ತೀವ್ರವಾಗಿ ಹರಡಿ ಜನರನ್ನು ತತ್ತರಿಸುವಂತೆ ಮಾಡಿತ್ತು. ಇದೀಗ ಮಹಾರಾಷ್ಟ್ರದಿಂದ ಮರಳಿದ ವಲಸಿಗರಿಂದ ಕಂಟಕ ಎದುರಾಗಿದೆ. ಮುಂಬೈಯಿಂದ ಮರಳಿದ ಆರು ಜನ ಸೋಂಕಿತರ ಪೈಕಿ ಮೂವರು ಮಕ್ಕಳು ಸೇರಿದ್ದು, ಆತಂಕ ಹೆಚ್ಚಿಸುವಂತೆ ಮಾಡಿದೆ.

ಆಳಂದ ತಾಲೂಕಿನ ಧಂಗಾಪುರ ಗ್ರಾಮದ  13 ವರ್ಷದ ಬಾಲಕ (ಪಿ-1135), 40 ವರ್ಷದ ವರ್ಷದ (ಪಿ-1137) ಮತ್ತು 55 ವರ್ಷದ ಪುರುಷ (ಪಿ-1138)ನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಅದೇ ರೀತಿ ಕಾಳಗಿ ತಾಲೂಕಿನ ಅರಣಕಲ್‌ ತಾಂಡಾ ಗ್ರಾಮದ 36 ವರ್ಷದ ಪುರುಷ (ಪಿ-1133), 7 ವರ್ಷದ ಬಾಲಕ (ಪಿ-1136)ನಿಗೆ ಸೋಂಕು ಕಾಣಿಸಿಕೊಂಡಿದೆ. ಮುಂಬೈ ವಲಸಿಗರಿಂದ ಚಿಂಚೋಳಿ ತಾಲೂಕಿಗೂ ಕೋವಿಡ್‌ 19 ಕಾಲಿಟ್ಟಿದ್ದು, ಕುಂಚಾವರಂನ ಸಂಗಾಪುರ ತಾಂಡಾದ 10 ವರ್ಷದ ಬಾಲಕ (ಪಿ-1131)ನಿಗೆ  ಮಹಾಮಾರಿ ವಕ್ಕರಿಸಿದೆ. ಇವರೆಲ್ಲರನ್ನು ಆಯಾ ತಾಲೂಕಿನ ಕ್ವಾರಂಟೈನ್‌ ಕೇಂದ್ರದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ವೃದ್ಧನಿಂದ ಮತ್ತಿಬ್ಬರಿಗೆ: ಕಂಟೇನ್ಮೆಂಟ್‌ ಝೋನ್‌ ಸಂಪರ್ಕದಿಂದ ಮೇ 11ರಂದು ಮೃತಪಟ್ಟ 60 ವರ್ಷದ ವೃದ್ಧ (ಪಿ-927)ನ ಸಂಪರ್ಕದಿಂದಲೂ ಮತ್ತೆ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಮೋಮಿನಪುರದ ಸದರ ಮೊಹಲ್ಲಾ ನಿವಾಸಿಗಳಾದ 55 ವರ್ಷದ ಪುರುಷ (ಪಿ-1132) ಹಾಗೂ 50 ವರ್ಷದ ಮಹಿಳೆ (ಪಿ-1134) ಗೆ ಸೋಂಕು ಹರಡಿದೆ. ಮೇ 11ರಂದು ಮೃತಪಟ್ಟ ಈ ವೃದ್ಧನ ಸಂಪರ್ಕದಲ್ಲಿದ್ದ 50 ವರ್ಷದ ಮಹಿಳೆ (ಪಿ-1085)ಗೆ ಶನಿವಾರ ಸೋಂಕು  ದೃಢಪಟ್ಟಿತ್ತು.

ಇನ್ನೊಂದು ಪ್ರಕರಣದಲ್ಲಿ ಕಂಟೈನ್ಮೆಂಟ್‌ ಝೋನ್‌ ಸಂಪರ್ಕಕ್ಕೆ ಬಂದ ವಿಶಾಲ ನಗರದ 4ನೇ ಕ್ರಾಸ್‌ ನಿವಾಸಿ, 55 ವರ್ಷದ ಪುರುಷ (ಪಿ-1130)ನಿಗೆ ಕೋವಿಡ್‌ 19 ಕಾಣಿಸಿಕೊಂಡಿದೆ. ಮತ್ತೂಂದು ಪ್ರಕರಣದಲ್ಲಿ ರೋಜಾ  (ಬಿ) ಬಡಾವಣೆಯ 35 ವರ್ಷದ ಪುರುಷ (ಪಿ-1129)ನಿಗೆ ಸೋಂಕು ಪತ್ತೆಯಾಗಿದ್ದು, ಈತನಿಗೆ ಹೇಗೆ ಸೋಂಕು ಹರಡಿತ್ತು ಎಂಬುದನ್ನು ಅ ಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಒಟ್ಟು 104 ಕೋವಿಡ್‌ 19 ಸೋಂಕಿತರಲ್ಲಿ 51 ಜನರು  ಗುಣಮುಖರಾಗಿದ್ದಾರೆ. ಏಳು ಸೋಂಕಿತರು ಮಹಾಮಾರಿಗೆ ತುತ್ತಾಗಿದ್ದಾರೆ. ಉಳಿದಂತೆ 46 ಜನ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರು ಗುಣಮುಖ: ಕೋವಿಡ್‌ 19 ಸೋಂಕಿಗೆ ತುತ್ತಾದ ನಾಲ್ವರು ರವಿವಾರ ಗುಣಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 51 ಜನರು ಕೋವಿಡ್‌ 19ದಿಂದ ಮುಕ್ತರಾದಂತೆ ಆಗಿದೆ.  ಮೇ  1ರಂದು ಕೋವಿಡ್‌ 19 ದೃಢಪಟ್ಟ ಮೋಮಿನಪುರ ಪ್ರದೇಶದ 20 ವರ್ಷದ ಯುವತಿ (ಪಿ-588), ಮೇ 3ರಂದು ಸೋಂಕು ಕಾಣಿಸಿಕೊಂಡ 13 ವರ್ಷದ ಬಾಲಕಿ (ಪಿ-602), 54 ವರ್ಷದ ಪುರುಷ (ಪಿ-603) ಹಾಗೂ ಸಂತ್ರಾಸವಾಡಿ ಪ್ರದೇಶದ 22 ವರ್ಷದ  ಯುವಕ (ಪಿ-611) ಆಸ್ಪತ್ರೆಯಿಂದ  ಬಿಡುಗಡೆಗೊಂಡಿದ್ದಾರೆ.

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.