Kumbla: ಗ್ರಾ.ಪಂ.ಗೆ 10 ಸಾವಿರ ರೂ. ದಂಡ
Team Udayavani, Feb 2, 2024, 12:18 AM IST
ಕುಂಬಳೆ: ಪಂಚಾಯತ್ನ ತ್ಯಾಜ್ಯ ಸಂಗ್ರಹ ಕೇಂದ್ರವಾದ ಎಂಸಿಎಫ್ನ ಹೊರಗೆ ನಿರ್ಲಕ್ಷ್ಯವಾಗಿ ತ್ಯಾಜ್ಯವನ್ನು ರಾಶಿ ಹಾಕಿರುವುದಕ್ಕೆ ಸಂಬಂಧಿಸಿ ಕುಂಬಳೆ ಪಂಚಾಯತ್ಗೆ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ 10 ಸಾವಿರ ರೂ. ದಂಡ ವಿಧಿಸಿದೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಿದ ಬಗ್ಗೆ ಕುಂಬಳೆಯ ಮುಹಮ್ಮದ್ ರಿಫಾಯಿ ಅವರ ಮಾಲಕತ್ವದ ಕಟ್ಟಡಕ್ಕೂ, ಬಿ.ಎಸ್. ಅಬ್ದುಲ್ ರಜಾಕ್ ಅವರ ಬಾಡಿಗೆ ಕ್ವಾರ್ಟರ್ಸ್ಗೂ, ಆಯಿಷಾ ಬಿ. ಅವರ ಬಾಡಿಗೆ ಕಟ್ಟಡಕ್ಕೂ, ಪರಿಸರ ಶುಚೀಕರಿಸದ ಹಿನ್ನೆಲೆಯಲ್ಲಿ ಎಂ. ಪ್ರಶಾಂತ್ ಅವರಿಗೂ ಎನ್ಫೋರ್ಸ್ ಮೆಂಟ್ ಸ್ಕ್ವಾಡ್ ದಂಡ ಹೇರಿದೆ.