50 ನಾಟೌಟ್‌: ಕೈಯಲ್ಲಿ ಬರೆದಿದ್ದ ರಿಂಕು ಸಿಂಗ್‌


Team Udayavani, May 4, 2022, 5:45 AM IST

50 ನಾಟೌಟ್‌: ಕೈಯಲ್ಲಿ ಬರೆದಿದ್ದ ರಿಂಕು ಸಿಂಗ್‌

ಪುಣೆ: ಸತತ 5 ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್‌ರೈಡರ್ ಗೆಲುವಿನ ಟ್ರ್ಯಾಕ್‌ ಹತ್ತಿದೆ. ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ನಿತೀಶ್‌ ರಾಣಾ ಮತ್ತು ರಿಂಕು ಸಿಂಗ್‌ ಮುರಿಯದ 4ನೇ ವಿಕೆಟಿಗೆ 66 ರನ್‌ ಬಾರಿಸಿ ಕೋಲ್ಕತಾಕ್ಕೆ ಸುಲಭ ಜಯ ತಂದಿತ್ತರು.

ಅಜೇಯ 42 ರನ್‌ (23 ಎಸೆತ, 6 ಬೌಂಡರಿ, 1 ಸಿಕ್ಸರ್‌) ಜತೆಗೆ ಫೀಲ್ಡಿಂಗ್‌ನಲ್ಲೂ ಅಮೋಘ ನಿರ್ವಹಣೆ ತೋರಿ 2 ಕ್ಯಾಚ್‌ ಪಡೆದ ರಿಂಕು ಸಿಂಗ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ವಾರಸ್ಯವೆಂದರೆ, ಈ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡುವ ಬಗ್ಗೆ ರಿಂಕು ಸಿಂಗ್‌ ಅವರಿಗೆ ಮೊದಲೇ ತಿಳಿದಿತ್ತು ಎಂಬುದು. ಅವರು ತಮ್ಮ ಕೈ ಮೇಲೆ “50 ನಾಟೌಟ್‌’ ಎಂದು ಪಂದ್ಯಕ್ಕೂ ಮೊದಲೇ ಬರೆದುಕೊಂಡಿದ್ದೇ ಇದಕ್ಕೆ ಕಾರಣ!

ಪಂದ್ಯದ ಬಳಿಕ ಅವರು ಇದನ್ನು ಜತೆಗಾರ ನಿತೀಶ್‌ ರಾಣಾಗೆ ತೋರಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ರಿಂಕು ಸಿಂಗ್‌ ಅವರಿಗೆ ಅರ್ಧ ಶತಕ ಬಾರಿಸುವ ಅವಕಾಶ ಸಿಗಲಿಲ್ಲವಾದರೂ ನಾಟೌಟ್‌ ಆಗಿ ಉಳಿಯುವಲ್ಲಿ ಯಶಸ್ವಿಯಾದರು.

ಹೀಗೆ ಬರೆದುಕೊಂಡ ಬಗ್ಗೆ ರಿಂಕು ಸಿಂಗ್‌ ಕಾರಣವನ್ನೂ ನೀಡಿದ್ದಾರೆ. “ಈ ಪಂದ್ಯದಲ್ಲಿ ನನಗೆ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿತ್ತು. ಕಳೆದ 5 ವರ್ಷಗಳಿಂದಲೂ ನಾನು ಇಂಥದೊಂದು ಅವಕಾಶಕ್ಕಾಗಿ ಕಾಯುತ್ತಲೇ ಇದ್ದೆ. ಇಂದು ಸಿಕ್ಕಿತು. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡೆ’ ಎಂದರು.

ಉತ್ತರಪ್ರದೇಶದವರಾದ 24 ವರ್ಷದ ರಿಂಕು ಸಿಂಗ್‌ 2018ರಲ್ಲಿ ಆರ್‌ಸಿಬಿ ವಿರುದ್ಧ ಐಪಿಎಲ್‌ ಪದಾರ್ಪಣೆ ಮಾಡಿದ್ದರು. ಈವರೆಗೆ 13 ಪಂದ್ಯಗಳನ್ನಾಡಿದ್ದು, 177 ರನ್‌ ಗಳಿಸಿದ್ದಾರೆ. ರಾಜಸ್ಥಾನ್‌ ವಿರುದ್ಧ ಅಜೇಯ 42 ರನ್‌ ಹೊಡೆದದ್ದೇ ಇವರ ಅತ್ಯುತ್ತಮ ಪ್ರದರ್ಶನವಾಗಿದೆ.

ಟಾಪ್ ನ್ಯೂಸ್

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

1-sds-adad

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ

1-adsdad

ಸಕಲೇಶಪುರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದ ಉರಗ ತಜ್ಞ ಸ್ನೇಕ್ ಫರ್ಹಾನ್‌

web exclusive ram

ಬೀಟ್‍ರೂಟ್ ಹಲ್ವಾ ಮಾಡೋದು ಎಷ್ಟು ಸುಲಭ…. ಕೆಲವೇ ನಿಮಿಷಗಳಲ್ಲಿ ಮಾಡುವ ರೆಸಿಪಿ

10-karge

ಆರ್ ಎಸ್ ಎಸ್ ಪಕ್ಕಾ ದೇಶದ್ರೋಹಿ ಸಂಘಟನೆ : ಪ್ರಿಯಾಂಕ್ ಖರ್ಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adadasd

ಬಾಂಗ್ಲಾದೇಶದ ಟಿ 20 ತಂಡಕ್ಕೆ ಕೋಚ್ ಆಗಿ ಭಾರತದ ಶ್ರೀಧರನ್ ಶ್ರೀರಾಮ್

1-ffffsff

ಪಂಜಾಬ್ ಕಿಂಗ್ಸ್ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಬದಲಾವಣೆ ಸಾಧ್ಯತೆ

thumb 1 cricket

ರಬಾಡ ದಾಳಿಗೆ ಕುಸಿದ ಇಂಗ್ಲೆಂಡ್‌

tdy-20

ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

1-sds-adad

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ

ಜೆಡಿಎಸ್‌ ಪಕ್ಷಕ್ಕೆ ಮುಸ್ಲಿಮರ ಬೆಂಬಲ; ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ

ಜೆಡಿಎಸ್‌ ಪಕ್ಷಕ್ಕೆ ಮುಸ್ಲಿಮರ ಬೆಂಬಲ; ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.