ಮುಕ್ತ ವಿವಿ ಜುಲೈ ಆವೃತ್ತಿಗೆ ಪ್ರವೇಶ ಪ್ರಕ್ರಿಯೆ


Team Udayavani, May 4, 2019, 3:05 AM IST

mukta

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2019ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಸಂಬಂಧ ಮುಂದಿನ ಒಂದು ವಾರದೊಳಗೆ ಪ್ರಕಟಣೆ ಹೊರಡಿಸಲಾಗುವುದು.

ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಜೊತೆಗೆ ಈ ವರ್ಷದಿಂದ ಒಂದು ವರ್ಷ ಅವಧಿಯ ಪಿ.ಜಿ.ಡಿಪ್ಲೊಮಾ, ಡಿಪ್ಲೊಮಾ ಹಾಗೂ ಆರು ತಿಂಗಳ ಅವಧಿಯ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭಿಸುತ್ತಿರುವುದಾಗಿ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಸ್ನಾತಕ ಪದವಿಗಳಾದ ಬಿ.ಎ, ಬಿಕಾಂ ಮತ್ತು ಬಿ.ಲಿಬ್‌ ಐಎಸ್ಸಿ. ಸ್ನಾತಕೋತ್ತರ ಪದವಿ ಕೋರ್ಸ್‌ಗಳಾದ ಎಂ.ಎ-ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ,

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ. ಎಂಕಾಂ, ಎಂಬಿಎ, ಎಂಎಸ್ಸಿಯಲ್ಲಿ ಜೀವ ರಸಾಯನ ಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನ ಶಾಸ್ತ್ರ, ಕ್ಲಿನಿಕಲ್‌ ನ್ಯೂಟ್ರಿಷನ್‌ ಆ್ಯಂಡ್‌ ಡಯಟಿಟಿಕ್ಸ್‌, ಪರಿಸರ ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತ ಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ, ಎಂಲಿಬ್‌ ಐಎಸ್ಸಿ ಇರಲಿದೆ.

ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳು: ಇಂಗ್ಲಿಷ್‌, ಕಮ್ಯೂನಿಕೇಟಿವ್‌ ಇಂಗ್ಲಿಷ್‌, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ಮಾನವ ಸಂಪನ್ಮೂಲ ನಿರ್ವಹಣೆ, ಫೈನಾನ್ಷಿಯಲ್‌ ಮ್ಯಾನೇಜ್‌ಮೆಂಟ್‌, ವ್ಯವಹಾರಿಕ ನಿರ್ವಹಣೆ, ಮಾರುಕಟ್ಟೆ ನಿರ್ವಹಣಾ ಶಾಸ್ತ್ರ, ಅಂಬೇಡ್ಕರ್‌ ಅಧ್ಯಯನ, ನ್ಯೂಟ್ರಿಷಿಯನ್‌ ಆ್ಯಂಡ್‌ ಡಯಬಿಟಿಕ್ಸ್‌, ಇನ್ಫಾಮೇಷನ್‌ ಸೈನ್ಸ್‌, ಕಂಪ್ಯೂಟರ್‌ ಅಪ್ಲೀಕೇಷನ್‌.

ಡಿಪ್ಲೊಮಾ ಕೋರ್ಸ್‌ಗಳು: ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್‌ ಆ್ಯಂಡ್‌ ಹೆಲ್ತ್‌ ಎಜುಕೇಷನ್‌,ಇನ್ಫಾಮೇಷನ್‌ ಸೈನ್ಸ್‌, ಕಂಪ್ಯೂಟರ್‌ ಅಪ್ಲೀಕೇಷನ್‌.

ಸರ್ಟಿಫಿಕೇಟ್‌ ಕೋರ್ಸ್‌ಗಳು: ಕನ್ನಡ, ಪಂಚಾಯತ್‌ ರಾಜ್‌ ವ್ಯವಸ್ಥೆ, ಆಹಾರ ಮತ್ತು ಪೌಷ್ಠಿಕತೆ.
ಆನ್‌ಲೈನ್‌ ಅರ್ಜಿ: ಈ ವರ್ಷ ಎಲ್ಲಾ ಕೋರ್ಸ್‌ಗಳಿಗೆ ಆನ್‌ಲೈನ್‌ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶಾತಿ ಪಡೆಯಲು ಆ.31 ಕೊನೆಯ ದಿನಾಂಕ. ವಿದ್ಯಾರ್ಥಿಗಳು ಪ್ರವೇಶಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ www.ksoumysore.karnatake.gov.in ನಿಂದ ಪಡೆಯಬಹುದಾಗಿದೆ.

ಪ್ರೊಸೆಸಿಂಗ್‌ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಅರ್ಜಿಯನ್ನು ಆನ್‌ಲೈನ್‌ ಮೂಲಕ ಭರ್ತಿ ಮಾಡಿದ ನಂತರ ಅದರ ಒಂದು ಪ್ರತಿಯನ್ನು ಪ್ರಿಂಟ್‌ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದಾದರೊಂದು ಪ್ರಾದೇಶಿಕ ಕೇಂದ್ರ ಅಥವಾ ಮುಕ್ತ ವಿವಿ ವಿಭಾಗಗಳ ಮುಖ್ಯಸ್ಥರಿಗೆ ಎರಡು ಸೆಟ್‌ ಪ್ರಿಂಟ್‌ ಅರ್ಜಿ ಜತೆಗೆ ಎರಡು ಸ್ಟಾಂಪ್‌ ಹಾಗೂ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳು,

ಮೂಲ ಅಂಕಪಟ್ಟಿಗಳು ಮತ್ತು ಅವುಗಳ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ಸಲ್ಲಿಸಿ, ಪರಿಶೀಲನೆಯ ನಂತರ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು, ಮುಕ್ತ ವಿವಿ ಪ್ರವೇಶಾತಿ ವಿಭಾಗದ ನಿರ್ದೇಶಕರು ನೀಡುವ ಬ್ಯಾಂಕ್‌ ಚಲನ್‌ ಮೂಲಕ ಶುಲ್ಕವನ್ನು ಪಾವತಿಸಿ ಅದರ ಒಂದು ಪ್ರತಿಯನ್ನು ಅದೇ ಪ್ರಾದೇಶಿಕ ಕಚೇರಿಯಲ್ಲಿ ಅಥವಾ ಮುಕ್ತ ವಿವಿ ಪ್ರವೇಶಾತಿ ವಿಭಾಗದಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ವಿವಿ ಕುಲಸಚಿವ ಪ್ರೊ.ರಮೇಶ್‌, ಡೀನ್‌ ಪ್ರೊ.ಜಗದೀಶ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಾದೇಶಿಕ ಕಚೇರಿಯಲ್ಲೇ ಸಿದ್ಧಪಾಠ ಲಭ್ಯ: ಪ್ರವೇಶಾತಿ ಪಡೆದ ದಿನವೇ ಗುರುತಿನ ಪತ್ರ ಮತ್ತು ಸಿದ್ಧಪಾಠಗಳನ್ನು ಮುಕ್ತ ವಿವಿಯ ಸಿದ್ಧಪಾಠ ವಿಭಾಗದ ಅಧಿಕಾರಿಗಳು ಅಥವಾ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಂದ ಪಡೆಯಬಹುದಾಗಿದ್ದು, ಪ್ರವೇಶಾತಿ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಮೈಸೂರಿಗೆ ಬರುವ ಅಗತ್ಯವಿಲ್ಲ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

2014-15ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಶುಲ್ಕವನ್ನೇ ಈಗಲೂ ಮುಂದುವರಿಸಿದ್ದು, ಎಸ್ಸಿ, ಎಸ್ಟಿ ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕುರಿತ ಡಿಪ್ಲೋಮ ಆರಂಭಿಸಲಾಗುವುದು. ಬಿಎಸ್‌ಡಬ್ಲೂ, ಎಂಎಸ್‌ಡಬ್ಲೂ, ಬಿಬಿಎ ಕೋರ್ಸ್‌ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕ ನಂತರ ಈ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಹೇಳಿದರು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.