TMC ಸಂಸದೆ ಸ್ಥಾನಕ್ಕೆ ನಟಿ ಮಿಮಿ ಚಕ್ರವರ್ತಿ ರಾಜೀನಾಮೆ
Team Udayavani, Feb 15, 2024, 9:17 PM IST
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬಂಗಾಳಿ ನಟಿ ಮಿಮಿ ಚಕ್ರವರ್ತಿ ಅವರು ಗುರುವಾರ ದಿಢೀರನೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಅವರಿನ್ನೂ ಒಪ್ಪಿಗೆ ಸೂಚಿಸಿಲ್ಲ. ಈ ಸಂಬಂಧಿಸಿದಂತೆ ತಾವೇ ಎಲ್ಲವನ್ನೂ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ರಾಜೀನಾಮೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿ, “ನೀವು ರಾಜಕೀಯದಲ್ಲಿದ್ದರೆ ನೀವು ಕೆಲಸ ಮಾಡಿದರೂ, ಮಾಡದಿದ್ದರೂ ನಿಮ್ಮನ್ನು ಟೀಕಿಸುತ್ತಲೇ ಇರುತ್ತಾರೆ. ನನ್ನಂಥವಳಿಗೆ ರಾಜಕೀಯ ಸೂಕ್ತವಲ್ಲ, ನಾನು ನಟಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ನನಗೆ ಬೇರೆ ಜವಾಬ್ದಾರಿಗಳೂ ಇವೆ’ ಎಂದು ಮಿಮಿ ಹೇಳಿದ್ದಾರೆ. ಸ್ಥಳೀಯಾಡಳಿತದ ಬಗ್ಗೆಯೂ ಅವರಿಗೆ ಅಸಮಾಧಾನವಿದ್ದು, ಕೆಲವರಿಂದ ಆಗಿರುವ ಅವಮಾನಗಳಿಂದ ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಸಂಸದೆ ಹೇಳಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್