ವಾಟ್ಸ್ಆ್ಯಪ್ ಕಾಲ್ ಮೂಲಕ ಹೆರಿಗೆ! ಹೆಣ್ಣು ಮಗುವಿಗೆ ಜನ್ಮವಿತ್ತ ತಾಯಿ
ವೈದ್ಯರ ಸಲಹೆ ಆಧರಿಸಿ ಪ್ರಕ್ರಿಯೆ
Team Udayavani, Feb 13, 2023, 7:30 AM IST
ಶ್ರೀನಗರ: “3 ಈಡಿಯಟ್ಸ್’ ಸಿನಿಮಾದಲ್ಲಿ ವಿಡಿಯೋಕಾಲ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸುವ ದೃಶ್ಯ ಯಾರಿಗೆ ನೆನಪಿಲ್ಲ ಹೇಳಿ? ಕ್ಲೈಮ್ಯಾಕ್ಸ್ನ ಆ ದೃಶ್ಯ, ಅಕ್ಷರಶಃ ಪ್ರೇಕ್ಷಕರ ಮನಸ್ಸು ಕದಲಿಸಿತ್ತು. ಈಗ ಅಂಥದ್ದೇ ಘಟನೆ ನಿಜವಾಗಿಯೂ ಘಟಿಸಿದ್ದು, ಜಮ್ಮು-ಕಾಶ್ಮೀರದ ಮಹಿಳೆಯೊಬ್ಬರು ವಾಟ್ಸ್ಆ್ಯಪ್ ಕಾಲ್ ಮೂಲಕ ವೈದ್ಯರ ಸಲಹೆ ಮೇರೆಗೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.
ಹೌದು, ಕೆರನ್ ಪ್ರಾಥಮಿಕ ಕೇಂದ್ರಕ್ಕೆ ಶುಕ್ರವಾರ ಆಗಮಿಸಿದ ಗರ್ಭಿಣಿಯೊಬ್ಬರಿಗೆ ತಡರಾತ್ರಿ ಹೆರಿಗೆ ನೋವು ಶುರುವಾಗಿದೆ. ಆದರೆ, ಸಾಮಾನ್ಯ ಹೆರಿಗೆ ಸಾಧ್ಯವಾಗದ ಕಾರಣ, ಆಕೆಯನ್ನು ಹೆರಿಗೆಗೆ ಸೂಕ್ತ ಸೌಲಭ್ಯವಿರುವ ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾಗಿತ್ತು. ಆದರೆ, ಪ್ರದೇಶದಲ್ಲಿ ನಿರಂತರ ಹಿಮಪಾತದಿಂದ ಗರ್ಭಿಣಿಯನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ.
ಈ ವೇಳೆ, ಕ್ರಾಲ್ಪೋರ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ, ಪರ್ವೈಜ್, ಪ್ರಾಥಮಿಕ ಕೇಂದ್ರದ ವೈದ್ಯರಾದ ಡಾ. ಅರ್ಷದ್ ಸೋಫಿ ಹಾಗೂ ವೈದ್ಯ ಸಿಬ್ಬಂದಿಗೆ ವಾಟ್ಸ್ಆ್ಯಪ್ ಕಾಲ್ ಮೂಲಕ ಹೆರಿಗೆ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ತಿಳಿಸಿದ್ದಾರೆ. ಅವರ ಸಲಹೆಯಂತೆ ವೈದ್ಯರು ಮಹಿಳೆಗೆ ಹೆರಿಗೆ ಮಾಡಿಸಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಪ್ರಸಕ್ತ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು