Bachelor party; ಕಾಮಿಡಿ ಅಡ್ಡದಲ್ಲಿ ದಿಗಂತ್- ಯೋಗಿ- ಅಚ್ಯುತ್ ಕುಮಾರ್


Team Udayavani, Jan 24, 2024, 11:55 AM IST

bachelor party movie releasing on Jan 26

ನಟರಾದ ದಿಗಂತ್‌, ಲೂಸ್‌ಮಾದ ಯೋಗಿ, ಅಚ್ಯುತಕುಮಾರ್‌ ಎಲ್ಲರೂ ಪಕ್ಕಾ ಫ್ಯಾಮಿಲಿಮನ್‌ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ವಾರ ಈ ಮೂವರು ಕೂಡ “ಬ್ಯಾಚುಲರ್‌ ಪಾರ್ಟಿ’ ಮಾಡುವ ಮೂಡ್‌ನ‌ಲ್ಲಿದ್ದಾರೆ! ಅದಕ್ಕೆ ಕಾರಣ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ.

ಹೌದು, ನಟರಾದ ದಿಗಂತ್‌, ಲೂಸ್‌ಮಾದ ಯೋಗಿ, ಅಚ್ಯುತಕುಮಾರ್‌ ಮುಖ್ಯಭೂಮಿಕೆ ಯಲ್ಲಿ ಅಭಿನಯಿಸಿರುವ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಇದೇ ಜ. 26ಕ್ಕೆ ತೆರೆ ಕಾಣುತ್ತಿದೆ. ಈಗಾ ಗಲೇ ಬಿಡುಗಡೆಯಾಗಿರುವ ಸಿನಿಮಾದ ಫ‌ಸ್ಟ್‌ ಲುಕ್‌, ಟೈಟಲ್‌ ಪೋಸ್ಟರ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಎಲ್ಲವೂ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಹಜವಾಗಿಯೇ ಸ್ಯಾಂಡಲ್‌ ವುಡ್‌ನ‌ಲ್ಲಿ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಮೇಲೆ ಒಂದಷ್ಟು ನಿರೀಕ್ಷೆ ಮನೆ ಮಾಡಿದೆ.

ಅಂದಹಾಗೆ, ಸಿನಿಮಾದ ಟೈಟಲ್ಲೇ ಹೇಳುವಂತೆ, “ಬ್ಯಾಚುಲರ್‌ ಪಾರ್ಟಿ’ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರದ ಸಿನಿಮಾ. “ಸಪ್ತಸಾಗರ ದಾಚೆ ಎಲ್ಲೋ’ ಸಿನಿಮಾದ ನಂತರ ನಟ ಕಂ ನಿರ್ಮಾ ಪಕ ರಕ್ಷಿತ್‌ ಶೆಟ್ಟಿ ಅವರ “ಪರಂವಾ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ಮೂಡಿಬಂದಿರುವ “ಬ್ಯಾಚುಲರ್‌ ಪಾರ್ಟಿ’ ವರ್ಷಾರಂಭದಲ್ಲಿಯೇ ಸ್ಯಾಂಡಲ್‌ ವುಡ್‌ನ‌ಲ್ಲಿ ಕಾಮಿಡಿ ಕಮಾಲ್‌ ಮಾಡೋದು ಪಕ್ಕಾ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.

“ಕಿರಿಕ್‌ ಪಾರ್ಟಿ’ ಸಿನಿಮಾದ ಬರಹಗಾರ ಅಭಿಜಿತ್‌ ಮಹೇಶ್‌ ಈ ಸಿನಿ ಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಈಗಾಗಲೇ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಅಭಿಜಿತ್‌ ಮೊದಲ ಬಾರಿಗೆ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ.

“ಬ್ಯಾಚುಲರ್‌ ಪಾರ್ಟಿ’ ಸಿನಿಮಾಕ್ಕೆ ಅರವಿಂದ್‌ ಛಾಯಾಗ್ರಹಣವಿದೆ. ಅಭಿಜಿತ್‌ ಮಹೇಶ್‌ ಹಾಗೂ ವೀರೇಶ್‌ ಶಿವಮೂರ್ತಿ ಸಾಹಿತ್ಯವಿರುವ ಸಿನಿಮಾದ ಹಾಡುಗಳಿಗೆ ಅರ್ಜುನ್‌ ರಾಮು ಸಂಗೀತ ಸಂಯೋಜಿಸಿದ್ದಾರೆ. ಥೈಲ್ಯಾಂಡ್‌, ಬ್ಯಾಂಕಾಕ್‌, ಬೆಂಗಳೂರು ಸುತ್ತಮುತ್ತ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಇನ್ನು ತಮ್ಮ “ಬ್ಯಾಚುಲರ್‌ ಪಾರ್ಟಿ’ ಬಗ್ಗೆ ನಟರಾದ ದಿಗಂತ್‌, ಲೂಸ್‌ಮಾದ ಯೋಗಿ, ಅಚ್ಯುತಕುಮಾರ್‌ ಎಲ್ಲರಿಗೂ ಕೊಂಚ ನಿರೀಕ್ಷೆ ಹೆಚ್ಚಾಗಿಯೇ ಇದೆ. ಅದಕ್ಕೆ ಕಾರಣ ಸಿನಿಮಾದ ಸಬೆjಕ್ಟ್ ಎಂಬುದು ಎಲ್ಲರ ಒಕ್ಕೊರಲ ಮಾತು. ಸಿನಿಮಾದ ಶೂಟಿಂಗ್‌ ಮಾಡುವಾಗಲೇ ನಾವು ಸಿನಿಮಾದ ಡೈಲಾಗ್ಸ್‌, ದೃಶ್ಯಗಳನ್ನು ಕೇಳಿ ಸಾಕಷ್ಟು ನಕ್ಕಿರುವುದಿದೆ. ಅದೇ ನಗು ಥಿಯೇಟರ್‌ ನಲ್ಲಿ ಪ್ರೇಕ್ಷಕರ ಮುಖದಲ್ಲೂ ಮೂಡಲಿದೆ ಎಂಬ ವಿಶ್ವಾಸದ ಮಾತು ಚಿತ್ರತಂಡದ್ದು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.