ಸಂಜಯ್ ಮಾಂಜ್ರೇಕರ್ ಮನವಿ ತಿರಸ್ಕರಿಸಿದ ಬಿಸಿಸಿಐ
Team Udayavani, Aug 6, 2020, 6:46 AM IST
ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೀಕ್ಷಕ ವಿವರಣೆಕಾರರ ಯಾದಿಯಲ್ಲಿ ಮತ್ತೆ ತನಗೆ ಸ್ಥಾನ ಕೊಡಿ ಎಂಬ ಸಂಜಯ್ ಮಾಂಜ್ರೇಕರ್ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.
ಮಾರ್ಚ್ನಲ್ಲಿ ಸಂಜಯ್ ಮಾಂಜ್ರೇಕರ್ ಹೆಸರನ್ನು ಬಿಸಿಸಿಐ ವೀಕ್ಷಕ ವಿವರಣೆಕಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಕೆಲವು ದಿನಗಳ ಹಿಂದೆ ಮಾಂಜ್ರೇಕರ್ ಮರು ಮನವಿ ಸಲ್ಲಿಸಿದ್ದರು.
ಇದೀಗ ಐಪಿಎಲ್ ವಿವರಣೆಕಾರರ ಅಂತಿಮ ಯಾದಿಯಲ್ಲೂ ಮಾಂಜ್ರೇಕರ್ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದ ಮತ್ತೆ ಕಮೆಂಟ್ರಿ ಟೀಮ್ನಲ್ಲಿ ಸ್ಥಾನ ಪಡೆಯುವ ಅವರ ಆಸೆಗೆ ಕಲ್ಲುಬಿದ್ದಿದೆ.
ಮೂಲಗಳ ಪ್ರಕಾರ, ಸಂಜಯ್ ಮಾಂಜ್ರೇಕರ್ ಭಾರತೀಯ ಕ್ರಿಕೆಟಿನ ಕೆಲವು ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಆ ಆಟಗಾರರು ಬಿಸಿಸಿಐಗೆ ದೂರು ಸಲ್ಲಿಸಿದ್ದು ಇಲ್ಲಿ ಪರಿಗಣನೆಗೆ ಬಂದಿದೆ ಎನ್ನಲಾಗಿದೆ.
ಅವರು ಒಮ್ಮೆ ವಿರಾಟ್ ಕೊಹ್ಲಿಯ ಟೆಸ್ಟ್ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. ಹಾಗೆಯೇ ರವೀಂದ್ರ ಜಡೇಜ ಅವರಿಗೆ ಅವಹೇಳನ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ