Rome: ರೋಮ್ ಬೆಸಿಲಿಕಾದಲ್ಲೇ ನನ್ನನ್ನು ಮಣ್ಣು ಮಾಡಿ- ಪೋಪ್ ಫ್ರಾನ್ಸಿಸ್
Team Udayavani, Dec 13, 2023, 11:06 PM IST
ರೋಮ್: “ಸೇಂಟ್ ಮೇರಿ ಮೇಜರ್‌ನ ರೋಮ್ ಬೆಸಿಲಿಕಾದಲ್ಲೇ ನನ್ನನ್ನು ಮಣ್ಣು ಮಾಡಬೇಕು. ಇತರೆ ಪೋಪ್‌ಗ್ಳಂತೆ ವ್ಯಾಟಿಕನ್‌ನ ಸಂದರವಾದ ಗುಹೆಗಳಲ್ಲಿ ಅಲ್ಲ. ಇದರಿಂದಾಗಿ ನಾನು ನನ್ನ ನೆಚ್ಚಿನ ಐಕಾನ್ ಮಡೋನಾ ಬಳಿಯೇ ಇರಬಹುದು’ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅನಾರೋಗ್ಯದ ಹೊರತಾಗಿಯೂ ಪೋಪ್ ಸ್ಥಾನಕ್ಕೆ ಈ ವರ್ಷ ರಾಜೀನಾಮೆ ಸಲ್ಲಿಸಬೇಕೆಂದು ಎಂದೂ ಯೋಚನೆ ಮಾಡಿಲ್ಲ. ಮುಂದಿನ ವರ್ಷ ಬೆಲ್ಜಿಯಂಗೆ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಅಲ್ಲದೇ ಪಾಲಿನೇಷ್ಯಾ ಮತ್ತು ಅರ್ಜೆಂಟೀನಾಗೂ ಭೇಟಿ ನೀಡಲಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.
ಅನಾರೋಗ್ಯದಿಂದ ಪೋಪ್ ಫ್ರಾನ್ಸಿಸ್(87) ಚೇತರಿಸಿಕೊಂಡಿದ್ದಾರೆ. ಅನಾರೋಗ್ಯ ಕಾರಣಕ್ಕಾಗಿ ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗದಲ್ಲಿ ಅವರು ಭಾಗವಹಿಸಿರಲಿಲ್ಲ.