AirAsia: ಮಸಾಜ್ ಮಾಡಿಸಿಕೊಳ್ಳುತ್ತಾ ವರ್ಚುವಲ್ ಸಭೆಯಲ್ಲಿ ಸಿಇಒ ಭಾಗಿ !
Team Udayavani, Oct 17, 2023, 10:38 PM IST
ನವದೆಹಲಿ: ವೈಮಾನಿಕ ಸಂಸ್ಥೆ ಏರ್ಏಷ್ಯಾದ ಸಿಇಒ ಟೋನಿ ಫರ್ನಾಡಿಸ್ ಮಸಾಜ್ ಮಾಡಿಸಿಕೊಳ್ಳುತ್ತಾ ವರ್ಚುವಲ್ ಮೂಲಕ ಕಂಪನಿಯ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅದನ್ನು ಲಿಂಕ್ಡ್ ಇನ್ನಲ್ಲಿ ಹಂಚಿಕೊಂಡದ್ದಕ್ಕೆ ಟೀಕೆ ವ್ಯಕ್ತವಾಗಿದೆ.
“ಈ ವಾರ ತುಂಬ ಒತ್ತಡದಿಂದ ಕೆಲಸ ಮಾಡುವಂತಾಯಿತು. ಒತ್ತಡ ನಿವಾರಣೆ ನಿಟ್ಟಿನಲ್ಲಿ ಮಸಾಜ್ ಮಾಡಿಸಿಕೊಳ್ಳುವಂತೆ ವೆರಾನಿಟಾ ಯೋಸೆಫಿನ್ ಸಲಹೆ ನೀಡಿದರು. ಇಂಡೋನೇಷ್ಯಾ ಮತ್ತು ಏರ್ಏಷ್ಯಾ ಎರಡೂ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಶರ್ಟ್ ಧರಿಸದೆ ಕಂಪನಿ ಸಭೆಯಲ್ಲಿ ಪಾಲ್ಗೊಂಡಿರುವುದು ಅನುಚಿತ ಎಂದು ಜಾಲತಾಣಿಗರು ಟೀಕಿಸಿದ್ದಾರೆ.