Chhattisgarh: ಕಾಂಗ್ರೆಸ್ ಸಭೆ ನಡುವೆ ಸಿಎಂ ಬಘೇಲ್ ಕ್ಯಾಂಡಿಕ್ರಶ್!
Team Udayavani, Oct 11, 2023, 9:52 PM IST
ರಾಯ್ಪುರ: ಚುನಾವಣೆ ಹೊಸ್ತಿಲಿನಲ್ಲಿರುವ ಛತ್ತೀಸ್ಗಢದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಕಾಂಗ್ರೆಸ್ ಸಭೆಯಲ್ಲಿ ಸಿಎಂ ಭೂಪೇಶ್ ಬಘೇಲ್ ಕ್ಯಾಂಡಿಕ್ರಶ್ ಆಡಿದ್ದಾರೆ. ಇದು ಈಗ ಬಿಜೆಪಿಗರ ಅಸ್ತ್ರವಾಗಿದ್ದು ಚಿಂತೆಯೇ ಇಲ್ಲದ ಬಘೇಲ್ ಎಂದು ಟೀಕಿಸಿದ್ದಾರೆ. ಕ್ಯಾಂಡಿಕ್ರಶ್ ಆಡುತ್ತಿದ್ದ ಬಘೇಲ್ ಫೋಟೋವನ್ನು ಬಿಜೆಪಿಯ ಅಮಿತ್ ಮಾಳವೀಯ ಹಂಚಿಕೊಂಡು ” ಬಘೇಲ್ ಗೆ ತಿಳಿದಿದೆ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು. ಅದಕ್ಕಾಗಿ ಗೇಮ್ ಆಡುತ್ತಾ ರಿಲ್ಯಾಕ್ಸ್ ಆಗಿದ್ದಾರೆ’ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಘೇಲ್ “ನಾನು ದೇಸಿ ಆಟವಾಡಿದರೂ ಬಿಜೆಪಿಗರಿಗೆ ತಪ್ಪು, ಗಿಲ್ಲಿದಾಂಡು ಆಡಿದರೂ ತಪ್ಪು! ಈಗ ಸಭೆಯ ಮುಂಚೆ ಕ್ಯಾಂಡಿಕ್ರಶ್ ಆಡಿದ್ದ ಫೋಟೋ ತೆಗೆದುಕೊಂಡು ತೆಗಳುತ್ತಿದ್ದಾರೆ. ಕ್ಯಾಂಡಿಕ್ರಶ್ ನನ್ನ ಫೇವರಿಟ್.… ಈಗಾಗಲೇ ಅದರ ಬಹು ಲೆವೆಲ್ಗಳನ್ನೂ ದಾಟಿದ್ದೇನೆ’ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.