Washington ಓಪನ್ ಟೆನಿಸ್: ಕೊಕೊ ಗಾಫ್ ಚಾಂಪಿಯನ್
ಡ್ಯಾನ್ ಇವಾನ್ಸ್ ಗೆ ಪುರುಷರ ವಿಭಾಗದ ಪ್ರಶಸ್ತಿ
Team Udayavani, Aug 7, 2023, 11:53 PM IST
ವಾಷಿಂಗ್ಟನ್: ಒಂದು ತಿಂಗಳ ಹಿಂದಷ್ಟೇ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದ ಅಮೆರಿಕದ ಟೀನೇಜರ್ ಕೊಕೊ ಗಾಫ್ ತವರಿನ “ವಾಷಿಂಗ್ಟನ್ ಓಪನ್’ ಟೆನಿಸ್ ಪ್ರಶಸ್ತಿ ಗೆದ್ದು ಮತ್ತೆ ಯಶಸ್ಸಿನ ಮೆಟ್ಟಿಲು ಏರಿದ್ದಾರೆ.
ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯಾದ ಯುಎಸ್ ಓಪನ್ಗೆ ಹೊಸ ಹುರುಪಿನಿಂದ ಸಜ್ಜಾಗಿದ್ದಾರೆ. ಫೈನಲ್ ಪಂದ್ಯದಲ್ಲಿ 19 ವರ್ಷದ ಕೊಕೊ ಗಾಫ್ ಗ್ರೀಸ್ನ ಮರಿಯಾ ಸಕ್ಕರಿ ಅವರನ್ನು 6-2, 6-3 ನೇರ ಸೆಟ್ಗಳಲ್ಲಿ ಮಣಿಸಿದರು. ಇದು ಕೊಕೊ ಗಾಫ್ಗೆ ಒಲಿದ 4ನೇ ಡಬ್ಲ್ಯುಟಿಎ ಪ್ರಶಸ್ತಿ. 2009ರ ಬಳಿಕ ವಾಷಿಂಗ್ಟನ್ ಓಪನ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಸಾಧಕಿಯೂ ಹೌದು. ಅಂದು ಚಾಂಪಿಯನ್ ಆಗಿ ಮೂಡಿಬಂದವರು ಕ್ಯಾರೋಲಿನ್ ವೋಜ್ನಿಯಾಕಿ. ಇವಾನ್ಸ್ ಗೆ ಗೆಲುವು ಪುರುಷರ ವಿಭಾಗದ ಪ್ರಶಸ್ತಿ 33 ವರ್ಷದ ಬ್ರಿಟನ್ ಆಟಗಾರ ಡ್ಯಾನ್ ಇವಾನ್ಸ್ಗೆ ಒಲಿಯಿತು. ಅವರು 7-5, 6-3 ಅಂತರದಿಂದ ನೆದರ್ಲೆಂಡ್ಸ್ನ ಟ್ಯಾಲನ್ ಗ್ರೀಕ್ಸ್ ಪೂರ್ಗೆ ಸೋಲುಣಿಸಿದರು. ಇದು ಇವಾನ್ಸ್ ಗೆದ್ದ 2ನೇ ಎಟಿಪಿ ಪ್ರಶಸ್ತಿ. ಈ ಸಾಧನೆಯಿಂದ ಅವರು ವಿಶ್ವ ರ್ಯಾಂಕಿಂಗ್ನಲ್ಲಿ 30ರಿಂದ 21ನೇ ಸ್ಥಾನಕ್ಕೆ ನೆಗೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ