Pilot: ವಾಣಿಜ್ಯ ಪೈಲಟ್ ಪರವಾನಗಿ ಮಾನ್ಯತೆ 10 ವರ್ಷಕ್ಕೆ ಏರಿಕೆ
Team Udayavani, Oct 16, 2023, 7:54 PM IST
ನವದೆಹಲಿ: ವೈಮಾನಿಕ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ನಿಯಮಗಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು, ವಾಣಿಜ್ಯ ಪೈಲಟ್ ಪರವಾನಗಿಯ ಮಾನ್ಯತೆಯನ್ನು 10 ವರ್ಷಕ್ಕೆ ಏರಿಕೆ ಮಾಡಿದೆ. ಈ ಮೊದಲು, 5 ವರ್ಷಗಳ ಮಟ್ಟಿಗೆ ಮಾತ್ರ ಕಮರ್ಷಿಯಲ್ ಪೈಲಟ್ ಲೈಸೆನ್ಸ್(ಸಿಪಿಎಲ್)ಗಳ ಮಾನ್ಯತೆ ಇದ್ದು, ನಂತರ ಅದನ್ನು ನವೀಕರಣಗೊಳಿಸಬೇಕಿತ್ತು.
1937ರ ವಿಮಾನ ನಿಯಮಗಳಿಗೆ ತಿದ್ದುಪಡಿ ಮಾಡಿರುವ ಸರ್ಕಾರವು, ಏರ್ಲೈನ್ ಟ್ರಾನ್ಸ್ಪೊರ್ಟ್ ಪೈಲಟ್ ಲೈಸೆನ್ಸ್(ಎಟಿಪಿಎಲ್) ಹಾಗೂ ಸಿಪಿಎಲ್ಗಳ ಮಾನ್ಯತೆಯನ್ನು 10 ವರ್ಷಕ್ಕೆ ಹೆಚ್ಚಿಸಿದೆ. “ಈ ಬದಲಾವಣೆಯು ಪೈಲಟ್ಗಳು ಮತ್ತು ಡಿಜಿಸಿಎನಂತಹ ವಾಯುಯಾನ ಪ್ರಾಧಿಕಾರಗಳ ಮೇಲಿನ ಆಡಳಿತಾತ್ಮಕ ಹೊರೆ ಕಡಿಮೆ ಮಾಡಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.