ಪೋಲೆಂಡ್‌ ಪ್ಯಾಕೇಜ್‌ ಘೋಷಣೆ


Team Udayavani, Apr 29, 2020, 3:35 PM IST

ಪೋಲೆಂಡ್‌ ಪ್ಯಾಕೇಜ್‌ ಘೋಷಣೆ

ಮಣಿಪಾಲ: ಕೋವಿಡ್‌-19 ಸೋಂಕು ತಡೆಯಲು ಘೋಷಿಸಲಾಗಿರುವ ಲಾಕ್‌ಡೌನ್‌ ಪರಿಣಾಮವಾಗಿ ಹಳಿ ತಪ್ಪುತ್ತಿರುವ ಆರ್ಥಿಕತೆಯನ್ನು ಸರಿ ದಿಸೆಗೆ ತರಲು ಪೋಲೆಂಡ್‌ ಸರಕಾರ 212 ಬಿಲಿಯನ್‌ (ಪೋಲಿಶ್‌ ರೂಪಾಯಿ) ಮೊತ್ತದ ಆರ್ಥಿಕ ನೆರವನ್ನು ಪ್ರಕಟಿಸಿದೆ.

ಆರೋಗ್ಯ ಸರಂಕ್ಷಣೆಯ ಜತೆ ದೇಶದ ಆರ್ಥಿಕ ಸುಧಾರಣೆಯೂ ಪ್ರಮುಖವಾಗಿದ್ದು, ದೇಶದ ಆರ್ಥಿಕತೆಯನ್ನು ರಕ್ಷಿಸಲು ಪೋಲಿಷ್‌ ಈ ಬಿಕ್ಕಟ್ಟು ನಿರ್ವಹಣೆ ಪರಿಹಾರ ನಿಧಿಯನ್ನು ನೀಡಲಾಗುತ್ತಿದೆ ಎಂದು ಸರಕಾರ ಘೋಷಿಸಿದೆ.

212 ಬಿಲಿಯನ್‌ ಮೊತ್ತದ ಈ ಪ್ಯಾಕೇಜ್‌ನ ಮೂಲಕ ಪೋಲಿಷ್‌ ಆರ್ಥಿಕತೆ, ವ್ಯವಹಾರಗಳು ಮತ್ತು ಉದ್ಯಮದಾರರಿಗೆ ಆಗಿರುವ ನಷ್ಟವನ್ನು ಭರಿಸಲು ಆರ್ಥಿಕ ನೆರವು ಒದಗಿಸಲಾಗುವುದು. ಪ್ರಮುಖವಾಗಿ ದೇಶದಲ್ಲಿ ಉದ್ಯೋಗ ಕಡಿತವಾಗದಂತೆ ಜಾಗ್ರತೆ ವಹಿಸಿದ್ದು, ಪ್ರಸ್ತುತ ಮತ್ತು ಮುಂಬರುವ ತಿಂಗಳುಗಳಲ್ಲೂ ಉದ್ಯೋಗಿಗಳ ಕೆಲಸಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲಾಗಿದೆ ಎಂದಿದೆ.

ವ್ಯವಹಾರಸ್ಥರಿಗೆ ಸಣ್ಣ ಮಟ್ಟದ ಸಾಲ ಯೋಜನೆ ಮತ್ತು ಖಾಸಗಿ ಸೇರಿದಂತೆ ಇತರೆ ಲೋನ್‌ ಮೊತ್ತವನ್ನು ಪಾವತಿಸಲು ಅಸಾಧ್ಯ ವಾಗುವವರಿಗೆ ವಿನಾಯಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕಂತುಗಳ ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಹಣಕಾಸು ನೀತಿ ಮಂಡಳಿ, ತನ್ನ ನಿಗದಿತ ದರದ ಅರ್ಧದಷ್ಟು ಬಡ್ಡಿದರವನ್ನು ಇಳಿಸಿದೆ. ಆ ಮೂಲಕ ನ್ಯಾಷನಲ್‌ ಬ್ಯಾಂಕ್‌ ಆಫ್‌ ಪೋಲೆಂಡ್‌ನ‌ ಅಧಿಕೃತ ನಗದು ದರವನ್ನೇ ಪಾಲಿಸಿದಂತಾಗಿದೆ.

ಆರೋಗ್ಯ ಸೇವೆಯನ್ನು ಮತ್ತಷ್ಟು ಸದೃಢಗೊಳಿಸಲು ಆರೋಗ್ಯ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಗಮನಾರ್ಹ ಮೊತ್ತವನ್ನು ನೀಡುವುದಾಗಿ ಸರಕಾರ ತಿಳಿಸಿದೆ.

ಪ್ರಧಾನಿ ಮತೊಶ್‌ ಮೊರಾವಿಯಸ್ಕಿ, ಬಿಕ್ಕಟ್ಟು ನಿರ್ವಹಣಾ ಪ್ಯಾಕೇಜ್‌ ಅನ್ನು ಸುರಕ್ಷಾ ಕಾರ್ಯಕ್ರಮ ಎಂದು ಕರೆದಿದ್ದಾರೆ. ಇದರೊಂದಿಗೆ ಐದು ಪ್ರಮುಖ ವಿಷಯಗಳಿಗೆ ಒತ್ತು ನೀಡಿದ್ದು, ನೌಕರರ ಸುರಕ್ಷತೆ, ಕಂಪನಿಗಳಿಗೆ ಹಣಕಾಸು ನೆರವು, ಆರೋಗ್ಯ ಸೇವೆಗಳ ಬೆಂಬಲ, ಆರ್ಥಿಕ ಭದ್ರತೆಯ ಖಾತ್ರಿ, ಮೂಲಸೌಕರ್ಯ, ಡಿಜಿಟಲೀಕರಣ ಹಾಗೂ ತಂತ್ರಜ್ಞಾನದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಭದ್ರಗೊಳಿಸುವುದಾಗಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.