Criminal Law: ಸಂಸದೀಯ ಸಮಿತಿಯಿಂದ ಕರಡು ವರದಿ ಅಂಗೀಕಾರ
Team Udayavani, Nov 6, 2023, 9:11 PM IST
ನವದೆಹಲಿ: ಈಗಿರುವ ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಸರ್ಕಾರ ಮಂಡಿಸಿರುವ ಮೂರು ಮಸೂದೆಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯು ಸೋಮವಾರ ಕರಡು ವರದಿಯನ್ನು ಅಂಗೀಕರಿದೆ.
ಕ್ರಿಮಿನಲ್ ಕಾನೂನುಗಳಿಗೆ ಹಿಂದಿ ಹೆಸರುಗಳನ್ನು ವಿರೋಧಿಸಿ ಪ್ರತಿಪಕ್ಷಗಳ ಕನಿಷ್ಠ 10 ಸದಸ್ಯರು ಪ್ರತಿರೋಧ ಟಿಪ್ಪಣಿ ಸಲ್ಲಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹಲವು ಸಲಹೆಗಳನ್ನು ನೀಡಿದರು. ಅಲ್ಲದೇ ಪ್ರತಿರೋಧ ಟಿಪ್ಪಣಿ ಸಲ್ಲಿಸಲು ಎರಡು ದಿನಗಳ ಕಾಲಾವಕಾಶದ ಬದಲಿಗೆ ಮೂರು ದಿನಗಳನ್ನು ನೀಡುವಂತೆ ಸಮಿತಿಗೆ ಕೋರಿದರು.
ಭಾರತೀಯ ದಂಡ ಸಂಹಿತಿ(ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಬದಲಿಗೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲು ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಸೂದೆ ಮಂಡಿಸಿದ್ದರು.