ಕೋಲ್ಕತಾ: ಆಟೋ ರಿಕ್ಷಾದಲ್ಲಿದ್ದ 19 ಕಚ್ಚಾ ಬಾಂಬ್ ವಶ
Team Udayavani, Apr 23, 2022, 7:07 PM IST
ಕೋಲ್ಕತಾ: ಹರಿದೇವ್ಪುರ ಪ್ರದೇಶದ ಮಕ್ಕಳ ಆಶ್ರಮವೊಂದರ ಬಳಿ ಆಟೋ ರಿಕ್ಷಾವೊಂದರಲ್ಲಿ 19 ಕಚ್ಚಾ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಫೋಟಕಗಳು ಭಯೋತ್ಪಾದನೆಯ ಸಂಚಿನ ಭಾಗವೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರನ್ನು ಪ್ರೇರೇಪಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸುಳಿವಿನ ಮೇರೆಗೆ,ಪೊಲೀಸರು ಶುಕ್ರವಾರ ರಾತ್ರಿ ದಾಳಿ ನಡೆಸಿದರು ಮತ್ತು ಹರಿದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ 41 ಪಲ್ಲಿ ಪ್ರದೇಶದ ಮಕ್ಕಳ ಆಶ್ರಮದ ಸಮೀಪವಿರುವ ಮೈದಾನದಲ್ಲಿ ಮೂರು ತೊರೆದು ಹೋದ ಆಟೋ-ರಿಕ್ಷಾಗಳನ್ನು ಪತ್ತೆ ಮಾಡಿದರು ಎಂದು ಅವರು ಹೇಳಿದರು.
“ಚಕ್ರಬೇರಿಯಾ-ಬಿಜೋಯ್ಗಢ್ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ 19 ಕಚ್ಚಾ ಬಾಂಬ್ಗಳು, ಒಂದು ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಎರಡು ಕಾಟ್ರಿಡ್ಜ್ಗಳು ಪತ್ತೆಯಾಗಿವೆ. ನಾವು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
“ಬಾಂಬ್ಗಳು ಭಯೋತ್ಪಾದನೆಯ ಸಂಚಿನ ಭಾಗವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಆಟೋ-ರಿಕ್ಷಾದ ಮಾಲಿಕರನ್ನು ಪತ್ತೆಹಚ್ಚಲು ಶೋಧವನ್ನು ಪ್ರಾರಂಭಿಸಲಾಗಿದೆ” ಎಂದು ಅವರು ಹೇಳಿದರು, ಇದುವರೆಗೆ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ.