Pension: ಪಿಂಚಣಿ ವಿವರ ಸಲ್ಲಿಸಲು ಮೇ 31ರವರೆಗೆ ಗಡುವು ವಿಸ್ತರಣೆ
Team Udayavani, Jan 4, 2024, 9:42 PM IST
ನವದೆಹಲಿ: ಪಿಂಚಣಿದಾರರಿಗೆ ಮತ್ತು ಉದ್ಯೋಗದಾತರಿಗೆ ಸಂತಸದ ಸುದ್ದಿಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೀಡಿದೆ. ಕಂಪನಿಗಳ ಮಾಲಿಕರು ಪಿಂಚಣಿದಾರರ ವೇತನ ವಿವರವನ್ನು ಸಲ್ಲಿಸಲು ಈ ವರ್ಷ ಮೇ 31ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಇದರಿಂದ ಕಂಪನಿಗಳು ನಿರಾಳವಾಗಿ ವೇತನ ವಿವರವನ್ನು ಸಲ್ಲಿಸಬಹುದು. ಮಾತ್ರವಲ್ಲ ದೊಡ್ಡ ಪ್ರಮಾಣದಲ್ಲಿ ವೇತನವನ್ನು ಪಡೆಯುವ ವ್ಯಕ್ತಿಗಳ ವಿವರ ಸಲ್ಲಿಸಲು ಸುಲಭವಾಗಲಿದೆ.
ಪಿಂಚಣಿ ನೀಡುವ ಹೊಣೆ ಹೊತ್ತಿರುವ ಇಪಿಎಫ್ಒ (ಉದ್ಯೋಗಿಗಳ ಪಿಂಚಣಿ ಸಂಸ್ಥೆ) ವಿವರ ಸಲ್ಲಿಕೆಗೆ ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಿದೆ. ಇಪಿಎಫ್ಒ ವೆಬ್‌ನಲ್ಲಿ ಅರ್ಜಿ ಸಲ್ಲಿಸಿ, ಅಲ್ಲೇ ದೃಢೀಕರಿಸಿಕೊಳ್ಳಬಹುದು. ಈ ಸೌಲಭ್ಯ ಕಳೆದ ವರ್ಷ ಫೆ.26ರಂದೇ ಬಿಡುಗಡೆಯಾಗಿತ್ತು. ಮೇ 3ರವರೆಗೆ ಗಡುವು ನೀಡಲಾಗಿತ್ತು. ಹಲವು ಬಾರಿ ಈ ಗಡುವನ್ನು ವಿಸ್ತರಿಸಿರುವ ಇಪಿಎಫ್ಒ, ಈಗ ಇನ್ನೂ ಐದು ತಿಂಗಳು ವಿಸ್ತರಿಸಿದೆ. ಈಗಾಗಲೇ 3.6 ಲಕ್ಷ ಅರ್ಜಿಗಳು ಈಗಲೂ ದೃಢೀಕರಣಕ್ಕಾಗಿ ಕಾಯುತ್ತಿವೆ. ಆದ್ದರಿಂದಲೇ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ