ಬೇಡಿಕೆ ಕುದುರಿಸಿಕೊಂಡ 500, 2 ಸಾವಿರ ನೋಟು; ಕೇಂದ್ರ ಸರಕಾರದಿಂದಲೇ ಈ ಬಗ್ಗೆ ಮಾಹಿತಿ
Team Udayavani, Dec 24, 2021, 7:30 AM IST
ಹೊಸದಿಲ್ಲಿ: ದೇಶದಲ್ಲಿ ನೋಟು ಅಮಾನ್ಯ ಮಾಡಿ ಐದು ವರ್ಷಗಳು ಪೂರ್ತಿಗೊಂಡರೂ, ಒಟ್ಟು ಕರೆನ್ಸಿ ನೋಟುಗಳ ಚಲಾವಣೆಯಲ್ಲಿ 500 ರೂ., 2 ಸಾವಿರ ರೂ. ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಲ್ಲಿ ಇವೆ. ಈ ಬಗ್ಗೆ ಕೇಂದ್ರ ಸರಕಾರವೇ ಇತ್ತೀಚೆಗೆ ಸಂಸತ್ಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.
ಈ ಎರಡೂ ಮುಖಬೆಲೆಯ ನೋಟುಗಳ ಬೇಡಿಕೆ ಪ್ರಮಾಣ ಶೇ.85.7ರಷ್ಟಾಗಿದೆ. ನೋಟು ಅಮಾನ್ಯಗೊಳಿಸುವುದಕ್ಕೆ ಮೊದಲು ಅಂದರೆ 2016ರಲ್ಲಿ ಹೆಚ್ಚು ಮೌಲ್ಯ ಇರುವ ನೋಟುಗಳ ಬೇಡಿಕೆ ಪ್ರಮಾಣ ಶೇ.86.4 ಆಗಿತ್ತು. ಇದರಿಂದಾಗಿ ಹೆಚ್ಚು ಮೌಲ್ಯದ ನೋಟುಗಳ ಚಲಾವಣೆ ಪ್ರಮಾಣ ಮತ್ತೆ ಹೆಚ್ಚಾದಂತಾಗಿದೆ.
ನೋಟು ಅಮಾನ್ಯದ ಸಂದರ್ಭದಲ್ಲಿ ಹಳೆಯ 500 ರೂ. ಮತ್ತು 1 ಸಾವಿರ ರೂ. ನೋಟುಗಳು ವಾಪಸ್ ಪಡೆದ ಬಳಿಕ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಸಂಖ್ಯೆ 2017ರ ಜನವರಿಯಲ್ಲಿ 7.8 ಲಕ್ಷ ಕೋಟಿ ರೂ.ಗೆ ತಗ್ಗಿತ್ತು.
ಇದನ್ನೂ ಓದಿ:ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ವಿಶ್ವದ ಅತಿ ದೊಡ್ಡ ಮೀನಿನ ರಕ್ಷಣೆ!
500 ರೂ. ನೋಟಿನ ಚಲಾವಣೆ ಪ್ರಮಾಣ 2019ರ ಮಾರ್ಚ್ನಲ್ಲಿ ಶೇ.19.8 ಇದ್ದದ್ದು ಈ ವರ್ಷದ ಮಾರ್ಚ್ನಲ್ಲಿ ಶೇ.31.1ಕ್ಕೆ ಏರಿಕೆಯಾಗಿದೆ.
ಆರ್ಬಿಐ ವರದಿಯ ಪ್ರಕಾರ ಕೊರೊನಾ ಸಂಬಂಧಿತ ಸಮಸ್ಯೆಯ ಪ್ರಭಾವದಿಂದಾಗಿ ನೋಟುಗಳ ಚಲಾವಣೆಯಲ್ಲಿ ಕೊಂಚ ಏರಿಕೆಯಾಗಿದೆ. ಅದಕ್ಕೆ ಪೂರಕವಾಗಿ ಡಿಜಿಟಲ್ ಪಾವತಿಯೂ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ