Football: ಆರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ “ವರ್ಷದ ಫುಟ್ಬಾಲಿಗ”
Team Udayavani, Jan 17, 2024, 12:13 AM IST
ಬ್ಯೂನಸ್ ಐರಿಸ್: ಆರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ 2023ನೇ ಸಾಲಿನ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಮ್ಯಾಂಚೆ ಸ್ಟರ್ ಸಿಟಿಯ ಆಟಗಾರ, ನಾರ್ವೆಯ ಸ್ಟ್ರೈಕರ್ ಇರ್ಲಿಂಗ್ ಹಾಲ್ಯಾಂಡ್ ಅವ ರನ್ನು ಮೆಸ್ಸಿ ಹಿಂದಿಕ್ಕಿದರು. ಫ್ರಾನ್ಸ್ನ ಕೈಲಿಯನ್ ಎಂಬಪೆ ಕೂಡ ಪ್ರಶಸ್ತಿ ರೇಸ್ನಲ್ಲಿದ್ದರು. ಆದರೆ ಪ್ರಶಸ್ತಿ ಸಮಾರಂಭಕ್ಕೆ ಮೆಸ್ಸಿ ಗೈರಾಗಿದ್ದರು.
ಸ್ಪೇನ್ನ 2023ರ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಐಟಾನಾ ಬೋನ್ಮಾಟಿ ವನಿತಾ ವಿಭಾಗದ ಪ್ರಶಸ್ತಿಗೆ ಭಾಜನರಾದರು. ಲಿಯೋನೆಲ್ ಮೆಸ್ಸಿ 2022ರ ಸಾಲಿ ನಲ್ಲೂ ಈ ಗೌರವಕ್ಕೆ ಪಾತ್ರರಾಗಿದ್ದರು.