Flights: ದೇಶೀಯ ವಿಮಾನಗಳ ಟಿಕೆಟ್ ದರ ಹೆಚ್ಚಳ
Team Udayavani, Aug 11, 2023, 5:21 AM IST
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆಗಳ ಕಾರಣ ದೇಶದಲ್ಲಿ ಜನರು ಪ್ರವಾಸಗಳಿಗೆ ಪ್ಲಾನ್ ಮಾಡಿದ್ದು, ದೇಶೀಯ ವಿಮಾನಗಳಲ್ಲಿನ ಟಿಕೆಟ್ಗಳ ದರದಲ್ಲಿ ಭಾರೀ ಏರಿಕೆ ದಾಖಲಾಗಿದೆ. ಆಗಸ್ಟ್ 15ರಂದು ಮಂಗಳವಾರ ಆಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ರ ಶನಿವಾರದಿಂದಲೇ ಜನರು ಪ್ರವಾಸಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ಸೋಮವಾರದ ರಜೆ ಪಡೆಯುವುದರೊಂದಿಗೆ ಒಟ್ಟು 4 ದಿನಗಳ ಪ್ರವಾಸಕ್ಕೆ ಯೋಜಿಸಿರುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂಬೈ, ಗೋವಾ, ಆಗ್ರಾ, ಕೊಚ್ಚಿ, ಶಿರಡಿ, ಮಧುರೈ ಮತ್ತು ತಿರುಪತಿಗಳಿಗೆ ಹೋಗಲು ವಿಮಾನದರಗಳು ಗಣನೀಯವಾಗಿ ಏರಿಕೆಯಾಗಿವೆ. ಜೂನ್ ಹಾಗೂ ಜುಲೈನಲ್ಲಿ ಟಿಕೆಟ್ ಬುಕ್ ಮಾಡಿರುವವರಿಗಿಂತ ಈಗಿನ ಬೆಲೆ ಶೇ.20ರಿಂದ ಶೇ.25ರವರೆಗೆ ಏರಿಕೆಯಾಗಿದೆ.