ಐಪಿಎಲ್‌ ಫಸ್ಟ್‌ ಮ್ಯಾಚ್‌-2009: ಕೇಪ್‌ಟೌನ್‌ನಲ್ಲಿ ಮುಂಬೈ-ಚೆನ್ನೈ ಮೇಲಾಟ

Team Udayavani, Apr 27, 2022, 8:45 AM IST

thumb 4

ದೇಶದ ಮಹಾ ಚುನಾವಣೆಯ ಕಾರಣ 2009ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಎನ್ನುವುದು “ಸೌತ್‌ ಆಫ್ರಿಕನ್‌ ಪ್ರೀಮಿಯರ್‌ ಲೀಗ್‌’ ಆಗಿ ಮಾರ್ಪಟ್ಟಿತ್ತು!

ಐಪಿಎಲ್‌ಗೆ ಭದ್ರತೆ ಒದಗಿಸುವುದು ಅಸಾಧ್ಯವಾದ ಕಾರಣ ಹಾಗೂ ಕೆಲವೇ ದಿನಗಳ ಹಿಂದಷ್ಟೇ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ಬಸ್‌ ಮೇಲೆ ಭಯೋತ್ಪಾದಕ ದಾಳಿ ನಡೆದುದರಿಂದ ಈ ಕೂಟ ಭಾರತದಲ್ಲಿ ನಡೆಯುವ ಯಾವ ಸಾಧ್ಯತೆಯೂ ಇರಲಿಲ್ಲ. ಆದರೆ ಹೇಗಾದರೂ ಈ ಪಂದ್ಯಾವಳಿಯನ್ನು ಒಂದೇ ವರ್ಷಕ್ಕೆ ನಿಲ್ಲಿಸದೆ ಹೇಗಾದರೂ ಮಾಡಿ ನಡೆಸಲೇಬೇಕೆಂದು ಬಿಸಿಸಿಐ ಹಠತೊಟ್ಟ ಪರಿಣಾಮ ದ್ವಿತೀಯ ಐಪಿಎಲ್‌ ದಕ್ಷಿಣ ಆಫ್ರಿಕಾದತ್ತ ಮುಖ ಮಾಡಿತು. ಜತೆಗೆ ಯಶಸ್ವಿಯಾಗಿ ನಡೆಯಿತು.

ಕೂಟದ ಮಾದರಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಪಂದ್ಯವನ್ನು ಭಾರತೀಯ ಕಾಲಮಾನಕ್ಕೆ ಸರಿಯಾಗಿ ಆಯೋಜಿಸಿದ್ದೊಂದೇ ವಿಶೇಷ.

ಕೂಟದ ಉದ್ಘಾಟನ ಪಂದ್ಯ ಕೇಪ್‌ಟೌನ್‌ನಲ್ಲಿ ನಡೆಯಿತು. ಸಚಿನ್‌ ತೆಂಡುಲ್ಕರ್‌ ನೇತೃತ್ವದ ಮುಂಬೈ ಇಂಡಿಯನ್ಸ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಇಲ್ಲಿ ಎದುರಾದವು. ಮುಂಬೈ 19 ರನ್ನುಗಳಿಂದ ಗೆದ್ದು ಶುಭಾರಂಭ ಮಾಡಿತು.

ಸಚಿನ್‌ ಅಜೇಯ ಅರ್ಧ ಶತಕ
ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 7 ವಿಕೆಟಿಗೆ 165 ರನ್‌ ಪೇರಿಸಿದರೆ, ಚೆನ್ನೈ 7 ವಿಕೆಟ್‌ ನಷ್ಟಕ್ಕೆ 146 ರನ್‌ ಮಾಡಿ ಶರಣಾಯಿತು.

ಮುಂಬೈ ಸರದಿಯಲ್ಲಿ ನಾಯಕ ತೆಂಡುಲ್ಕರ್‌ ಅವರದೇ ಹೆಚ್ಚಿನ ಗಳಿಕೆ. ಸ್ಫೋಟಕ ಆಟಗಾರ ಸನತ್‌ ಜಯಸೂರ್ಯ ಜತೆ ಆರಂಭಿಕನಾಗಿ ಇಳಿದ ಅವರು 59 ರನ್‌ ಮಾಡಿ ಅಜೇಯರಾಗಿ ಉಳಿದರು (49 ಎಸೆತ, 7 ಬೌಂಡರಿ). ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಈ ಸಾಧನೆಗಾಗಿ ಸಚಿನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

ಕೇವಲ 14 ಎಸೆತಗಳಿಂದ 35 ರನ್‌ ಸಿಡಿಸಿದ ಅಭಿಷೇಕ್‌ ನಾಯರ್‌ ಮತ್ತೋರ್ವ ಪ್ರಮುಖ ಸ್ಕೋರರ್‌. ಮುಂಬೈ ಸರದಿಯ ಮೂರೂ ಸಿಕ್ಸರ್‌ ಇವರಿಂದ ಸಿಡಿಯಲ್ಪಟ್ಟಿತು. ಜಯಸೂರ್ಯ 26, ಶಿಖರ್‌ ಧವನ್‌ 22 ರನ್‌ ಮಾಡಿದರು.

ಚೆನ್ನೈ ಚೇಸಿಂಗ್‌ ವೈಫಲ್ಯ
ಚೆನ್ನೈ ದ್ವಿತೀಯ ಎಸೆತದಲ್ಲೇ ಪಾರ್ಥಿವ್‌ ಪಟೇಲ್‌ ಅವರನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಸುರೇಶ್‌ ರೈನಾ ಕೂಡ ನಿಲ್ಲಲಿಲ್ಲ. 18 ನ್ನಿಗೆ 2 ವಿಕೆಟ್‌ ಉರುಳಿದ ಬಳಿಕ ಹೇಡನ್‌ (44) ಮತ್ತು ಫ್ಲಿಂಟಾಫ್‌ (24) ಸೇರಿಕೊಂಡು 52 ರನ್‌ ಜತೆಯಾಟ ನಡೆಸಿ ಚೆನ್ನೈಗೆ ಮೇಲುಗೈ ಒದಗಿಸಿದರು.

ಆದರೆ 10 ಓವರ್‌ಗಳ ಬಳಿಕ ಮುಂಬೈ ಬೌಲಿಂಗ್‌ ಬಿಗಿಗೊಂಡಿತು. ಚೆನ್ನೈ ರನ್ನಿಗಾಗಿ ಪರದಾಡುವ ಜತೆಗೆ ವಿಕೆಟ್‌ ಉಳಿಸಿಕೊಳ್ಳುವಲ್ಲೂ ವಿಫಲವಾಯಿತು. ನಾಯಕ ಧೋನಿ ಕೊನೆಯ ಓವರ್‌ ತನಕ ನಿಂತು ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಸನತ್‌ ಜಯಸೂರ್ಯ ಸಿ ಹೇಡನ್‌ ಬಿ ತುಷಾರ 26
ಸಚಿನ್‌ ತೆಂಡುಲ್ಕರ್‌ ಔಟಾಗದೆ 59
ಶಿಖರ್‌ ಧವನ್‌ ಸಿ ಧೋನಿ ಬಿ ಗೋನಿ 22
ಜೆಪಿ ಡ್ಯುಮಿನಿ ಸಿ ಮತ್ತು ಬಿ ಗೋನಿ 9
ಡ್ವೇನ್‌ ಬ್ರಾವೊ ಸಿ ಹೇಡನ್‌ ಬಿ ಜೋಗಿಂದರ್‌ 5
ಅಭಿಷೇಕ್‌ ನಾಯರ್‌ ಸಿ ತುಷಾರ ಬಿ ಓರಮ್‌ 35
ಹರ್ಭಜನ್‌ ಸಿಂಗ್‌ ರನೌಟ್‌ 4
ಜಹೀರ್‌ ಖಾನ್‌ ಸಿ ಅಶ್ವಿ‌ನ್‌ ಬಿ ಫ್ಲಿಂಟಾಫ್‌ 2
ಪಿಣಾಲ್‌ ಶಾ ಔಟಾಗದೆ 0
ಇತರ 3
ಒಟ್ಟು (7 ವಿಕೆಟಿಗೆ) 165
ವಿಕೆಟ್‌ ಪತನ: 1-39, 2-82, 3-95, 4-102, 5-148, 6-157, 7-161.
ಬೌಲಿಂಗ್‌:
ಮನ್‌ಪ್ರೀತ್‌ ಗೋನಿ 4-0-32-2
ತಿಲನ್‌ ತುಷಾರ 4-0-32-1
ಆ್ಯಂಡ್ರೂÂ ಫ್ಲಿಂಟಾಫ್‌ 4-0-44-1
ಜೇಕಬ್‌ ಓರಮ್‌ 4-0-30-1
ಜೋಗಿಂದರ್‌ ಶರ್ಮ 4-0-25-1
ಚೆನ್ನೈ ಸೂಪರ್‌ ಕಿಂಗ್ಸ್‌
ಪಾರ್ಥಿವ್‌ ಪಟೇಲ್‌ ಸಿ ತೆಂಡುಲ್ಕರ್‌ ಬಿ ಮಾಲಿಂಗ 0
ಮ್ಯಾಥ್ಯೂ ಹೇಡನ್‌ ಸಿ ಜಹೀರ್‌ ಬಿ ಜಯಸೂರ್ಯ 44
ಸುರೇಶ್‌ ರೈನಾ ಸಿ ರಾಜೆ ಬಿ ಬ್ರಾವೊ 8
ಆ್ಯಂಡ್ರೂÂ ಫ್ಲಿಂಟಾಫ್‌ ಸಿ ಮತ್ತು ಬಿ ಹರ್ಭಜನ್‌ 24
ಎಂ.ಎಸ್‌. ಧೋನಿ ಬಿ ಮಾಲಿಂಗ 36
ಜೇಕಬ್‌ ಓರಮ್‌ ಸಿ ಶಾ ಬಿ ಜಯಸೂರ್ಯ 8
ಎಸ್‌. ಬದರೀನಾಥ್‌ ಸಿ ಬ್ರಾವೊ ಬಿ ಮಾಲಿಂಗ 0
ಜೋಗಿಂದರ್‌ ಶರ್ಮ ಔಟಾಗದೆ 16
ತಿಲನ್‌ ತುಷಾರ ಔಟಾಗದೆ 1
ಇತರ 9
ಒಟ್ಟು (7 ವಿಕೆಟಿಗೆ) 146
ವಿಕೆಟ್‌ ಪತನ: 1-0, 2-18, 3-70, 4-89, 5-101, 6-109, 7-144.
ಬೌಲಿಂಗ್‌:
ಲಸಿತ ಮಾಲಿಂಗ 4-0-15-3
ಜಹೀರ್‌ ಖಾನ್‌ 4-0-34-0
ಡ್ವೇನ್‌ ಬ್ರಾವೊ 4-0-27-1
ರೋಹನ್‌ ರಾಜೆ 1-0-15-0
ಹರ್ಭಜನ್‌ ಸಿಂಗ್‌ 3-0-15-1
ಸನತ್‌ ಜಯಸೂರ್ಯ 4-0-34-2
ಪಂದ್ಯಶ್ರೇಷ್ಠ: ಸಚಿನ್‌ ತೆಂಡುಲ್ಕರ್‌

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.