Italy ಹಡಗು ದುರಂತ: 41 ಸಾವು
Team Udayavani, Aug 9, 2023, 9:25 PM IST
ರೋಮ್: ಇಟಲಿಯ ಲ್ಯಾಂಟೆಡುಸಾ ದ್ವೀಪದ ಸಮೀಪ ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದ ಹಡಗು ದುರಂತದಲ್ಲಿ 41 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ದುರಂತದಲ್ಲಿ ಬದುಕುಳಿದ ನಾಲ್ವರು ವಲಸಿಗರು ಲ್ಯಾಂಟೆಡುಸಾ ದ್ವೀಪಕ್ಕೆ ಬಂದು ಸೇರಿದ್ದಾರೆ.
“ಟ್ಯುನೀಶಿಯಾದ ಸ್ಪ್ಯಾಕ್ಸ್ನಿಂದ ಹಡಗು ಇಟಲಿಗೆ ಹೊರಟಿತ್ತು. ಹಡಗಿನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ವಲಸಿಗರು ಇದ್ದರು. ಗುರುವಾರ ಬೆಳಗ್ಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಹಡಗು ಮುಳುಗಿತು. ಈ ವೇಳೆ ನಾಲ್ವರು ಹೊರತುಪಡಿಸಿ, ಉಳಿದ ಎಲ್ಲರೂ ಸಮುದ್ರ ಪಾಲಾದರು’ ಎಂದು ದುರಂತದಲ್ಲಿ ಪಾರಾದ ವಲಸಿಗರು ತಿಳಿಸಿದ್ದಾರೆ.