TMC ರಾಜ್ಯಸಭಾ ಅಭ್ಯರ್ಥಿಯಾಗಿ ಪತ್ರಕರ್ತೆ ಸಾಗರಿಕಾ ಘೋಷ್ ಕಣಕ್ಕೆ
Team Udayavani, Feb 12, 2024, 12:11 AM IST
ಕೋಲ್ಕತಾ: ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರು ಟಿಎಂಸಿ ಅಭ್ಯರ್ಥಿಯಾಗಿ ಇದೇ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಹಲವು ಮುದ್ರಣ ಮಾಧ್ಯಮ, ಸುದ್ದಿವಾಹಿನಿಗಳಲ್ಲಿ ಅವರು ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ಜತೆಗೆ ಮಾಜಿ ಸಂಸದೆ ಸುಷ್ಮಿತಾ ದೇವ್, ಮೊಹಮ್ಮದ್ ನಯೀಮುದ್ದೀಕ್ ಹಕ್, ಮಮತಾ ಬಾಲಾ ಠಾಕೂರ್ ಅವರಿಗೂ ಟಿಕೆಟ್ ನೀಡ ಲಾಗಿದೆ. ರಾಜ್ಯಸಭೆಯ ಹಾಲಿ ಸಂಸದರಾಗಿರುವ ಅಭಿರ್ ರಂಜನ್ ಬಿಸ್ವಾಸ್, ಸುಭಾಶಿಶ್, ಡಾ| ಶಂತನು ಸೆನ್ಗೆ ಟಿಕೆಟ್ ನಿರಾಕರಿಸಲಾಗಿದೆ.