Karadka Society ವಂಚನೆ ಪ್ರಕರಣ: 48.5 ಲ.ರೂ. ಚಿನ್ನಾಭರಣ ಕ್ರೈಂಬ್ರಾಂಚ್‌ ವಶಕ್ಕೆ

Team Udayavani, May 25, 2024, 12:02 AM IST

Karadka Society ವಂಚನೆ ಪ್ರಕರಣ: 48.5 ಲ.ರೂ. ಚಿನ್ನಾಭರಣ ಕ್ರೈಂಬ್ರಾಂಚ್‌ ವಶಕ್ಕೆ

ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆàರ್‌ ಕೋ-ಆಪರೇಟಿವ್‌ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್‌ ಕಮಿಟಿ ಸದಸ್ಯ ರತೀಶನ್‌ ಲಪಟಾಯಿಸಿ ಕೇರಳ ಬ್ಯಾಂಕ್‌ನಲ್ಲಿ ಅಡವಿರಿಸಿದ 48.5 ಲಕ್ಷ ರೂ. ಚಿನ್ನವನ್ನು ಕ್ರೈಂ ಬ್ರಾಂಚ್‌ ವಶಪಡಿಸಿಕೊಂಡಿದೆ.

ಈ ವಂಚನೆಗೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಕರೆದೊಯ್ದು ಕೇರಳ ಬ್ಯಾಂಕ್‌ನ ಕಾಂಞಂಗಾಡ್‌ ಶಾಖೆಯಲ್ಲಿ ನಡೆಸಿದ ಮಾಹಿತಿ ಸಂಗ್ರಹ ವೇಳೆ ಅಡವಿರಿಸಿದ ಚಿನ್ನವನ್ನು ವಶಪಡಿಸಲಾಯಿತು.

ಸೊಸೈಟಿಯಿಂದ ಹಣ ಲಪಟಾಯಿಸಲು ಒತ್ತಾಸೆಗೈದ ಆರೋಪದಂತೆ ಪೊಲೀಸರು ಬಂಧಿಸಿದ ಪಳ್ಳಿಕೆರೆ ಪಂಚಾಯತ್‌ ಸದಸ್ಯ ಬೇಕಲ ಹದ್ದಾದ್‌ ನಗರದ ಕೆ.ಅಹಮ್ಮದ್‌ ಬಶೀರ್‌, ಪರಕ್ಲಾಯಿ ಏಳನೇ ಮೈಲಿನ ಎ. ಅಬ್ದುಲ್‌ ಗಫೂರ್‌, ಕಾಂಞಂಗಾಡ್‌ ನೆಲ್ಲಿಕ್ಕಾಡ್‌ನ‌ ಎ. ಅನಿಲ್‌ ಕುಮಾರ್‌ನನ್ನು ನ್ಯಾಯಾಲಯ ಕ್ರೈಂಬ್ರಾಂಚ್‌ ಕಸ್ಟಡಿಗೆ ಬಿಟ್ಟು ಕೊಟ್ಟಿದೆ. ಡಿವೈಎಸ್‌ಪಿ ಶಿಬು ಪಾಪಚ್ಚನ್‌ ನೇತೃತ್ವದಲ್ಲಿ ತನಿಖೆಗೊಳಪಡಿಸಿದ ಬಳಿಕ ಕೇರಳ ಬ್ಯಾಂಕ್‌ನ ಕಾಂಞಂಗಾಡ್‌ ಶಾಖೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲಿ ಅನಿಲ್‌ ಕುಮಾರ್‌ ಮತ್ತು ಅಬ್ದುಲ್‌ ಗಫೂರ್‌ ಹೆಸರಿನಲ್ಲಿ ಚಿನ್ನವನ್ನು ಅಡವಿರಿಸಲಾಗಿತ್ತು.

ಕೇರಳ ಬ್ಯಾಂಕ್‌ನ ಪೆರಿಯಾ ಶಾಖೆಯಲ್ಲಿ ಅಬ್ದುಲ್‌ ಗಫೂರ್‌ ಹೆಸರಿನಲ್ಲಿ ಅಡವಿರಿಸಿದ 17 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗುವುದು. ಕೆನರಾ ಬ್ಯಾಂಕ್‌ನ ಪಳ್ಳಿಕೆರೆ, ಪೆರಿಯ ಶಾಖೆಗಳಲ್ಲಿ ಅಹಮ್ಮದ್‌ ಬಶೀರ್‌ನ ಹೆಸರಿನಲ್ಲಿ 49 ಲಕ್ಷ ರೂ. ಮೌಲ್ಯದ ಚಿನ್ನ ಅಡವಿರಿಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಸಂಬಂಧಿಕನ ಹೆಸರಿನಲ್ಲೂ ಅಡಮಾನ 8 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನವನ್ನು ಆರೋಪಿ ಅನಿಲ್‌ ಕುಮಾರ್‌ನ ಸಂಬಂಧಿಕನ ಹೆಸರಲ್ಲೂ ಅಡವಿರಿಸಲಾಗಿದೆ. ಚಿನ್ನ ಅಡವಿರಿಸಿ ಲಭಿಸಿದ ಎಲ್ಲ ಮೊತ್ತವನ್ನು ರತೀಶನ್‌ ಪಡೆದುಕೊಂಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಆರೋಪಿ ರತೀಶನ್‌ ತಲೆಮರೆಸಿಕೊಂಡಿದ್ದಾನೆ. ಬ್ಯಾಂಕ್‌ನಲ್ಲಿ ಒಟ್ಟು 4.76 ಕೋಟಿ ರೂ. ವಂಚನೆ ನಡೆದಿರುವುದಾಗಿ ದೂರಲಾಗಿದೆ. ಸೂತ್ರಧಾರ ಕಣ್ಣೂರು ನಿವಾಸಿ ಜಬ್ಟಾರ್‌ ತಲೆಮರೆಸಿಕೊಂಡಿದ್ದಾನೆ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.