Udayavni Special

ಆರ್ಲಪದವು – ಕೇರಳ ಅಂತರ್‌ ರಾಜ್ಯ ರಸ್ತೆ ತೆರವು ಕಾರ್ಯಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ?

ಗಡಿಭಾಗದ ಜನರಿಗೆ ಆಗುವ ಅನ್ಯಾಯಕ್ಕೆ ಯಾರು ಹೊಣೆ

Team Udayavani, Sep 23, 2020, 6:17 PM IST

ಆರ್ಲಪದವು – ಕೇರಳ ಅಂತರ್‌ ರಾಜ್ಯ ರಸ್ತೆ ತೆರವು ಕಾರ್ಯಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ?

ಪಾಣಾಜೆ: ಕೋವಿಡ್‌ 19 ಬಂದ ಮೇಲೆ ಸರಕಾರ ಅಂತರ್‌ ರಾಜ್ಯ ರಸ್ತೆಗಳನ್ನು ಬಂದ್‌ ಮಾಡುವಂತೆ ಆದೇಶಿಸಿತ್ತು.ಆದೇಶದಂತೆ ಅಂತರ್‌ ರಾಜ್ಯವನ್ನು ಸಂಪರ್ಕಿಸುವ ರಸ್ತೆಗಳನ್ನು ಸ್ಥಳೀಯ ಪಂಚಾಯತ್‌ ಪೊಲೀಸ್‌,ಅರಣ್ಯ ಇಲಾಖೆಗಳ ಜಂಟಿ ನೇತೃತ್ವದಲ್ಲಿ ಬಂದ್‌ ಮಾಡಲಾಗಿತ್ತು.ಇದೀಗ ಅಂತರ್‌ ರಾಜ್ಯಗಳ ಸಂಚಾರಕ್ಕೆ ಮುಕ್ತ ಅವಕಾಶಗಳು ಸರಕಾರ ನೀಡಿದೆ.ಆದರೆ ಪಾಣಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆರ್ಲಪದವು-ಕಡಂದೇಲು-ಗಿಳಿಯಾಲು-ಜಾಂಬ್ರಿ ಮೂಲಕ ಕೇರಳ ಸಂಪರ್ಕಿಸುವ ರಸ್ತೆಯ ತೆರವು ಕಾರ್ಯಕ್ಕೆ ಮುಹೂರ್ತ ಫಿಕ್ಸ್‌ ಆಗಿಲ್ಲ.

ಕೋವಿಡ್‌ 19 ನ ಆರಂಭದಲ್ಲಿ ಜಿಲ್ಲಾಡಳಿತ ಮತ್ತು ಸರಕಾರದ ಆದೇಶದಂತೆ ಸ್ಥಳೀಯ ಪಂಚಾಯತ್‌ ಅಧ್ಯಕ್ಷ ನಾರಾಯಣ ಪೂಜಾರಿ ನೇತೃತ್ವದಲ್ಲಿ ಪೋಲೀಸರ ಮತ್ತು ಅರಣ್ಯ ಇಲಾಖೆಯ ಸಹಕಾರದಿಂದ ರಸ್ತೆಯನ್ನು ಬಂದ್‌ ಮಾಡಲಾಗಿತ್ತು.ಇದೀಗ ಅಧ್ಯಕ್ಷರ ಕಾರ್ಯವಧಿ ಮುಗಿದಿರುವುದರಿಂದ ರಸ್ತೆಯನ್ನು ತೆರವುಗೊಳಿಸುವುವವರಾರು? ಎಂಬ ಪ್ರಶ್ನೆ ಉದ್ಬವಿಸಿದೆ.

ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿದ್ದರೂ ಗಡಿನಾಡ ಜನರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುವ ರಸ್ತೆಯಾಗಿದೆ.ಆರ್ಲಪದವುವಿನಿಂದ ಕಡಂದೇಲು,ಗಿಳಿಯಾಲು ಮೂಲಕ ಐತಿಹಾಸಿಕ ಜಾಂಬ್ರಿ ಗುಹೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ.ಇಲ್ಲಿಂದ ಮುಂದೆ ಕೇರಳ ರಾಜ್ಯದ ಕಿನ್ನಿಂಗಾರು ಮೂಲಕ ಮುಳ್ಳೇರಿಯವನ್ನು ಸಂಪರ್ಕಿಸುವ ಹತ್ತಿರದ ಅಂತರ್‌ ರಾಜ್ಯ ರಸ್ತೆಯಾಗಿದೆ.

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.24 ರಿಂದ ಸಂಜೆಯೂ ನಡೆಯಲಿದೆ ಆಶ್ಲೇಷ ಸೇವೆ

ಜವಾಬ್ದಾರಿ ಮರೆತ ಸ್ಥಳೀಯಾಡಳಿತ ?
ಈ ರಸ್ತೆಯ ಎರಡು ಕಡೆ ರಸ್ತೆ ಅಡ್ಡವಾಗಿ ಸುಮಾರು 6ಅಡಿ ಆಳದ ಕಂದಕವನ್ನು ತೆಗೆದು ಅಂತರ್‌ ರಾಜ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.ಎರಡು ಕಡೆ ತೆಗೆದ ಕಂದಕಗಳು ಹಾಗೆಯೇ ಇದೆ.ಈ ರಸ್ತೆಯನ್ನು ಅವಲಂಬಿತವಾಗಿರುವ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಹಲವು ಜನರು ವಾಹನಗಳಲ್ಲಿ ಪ್ರಯಾಣಿಸಲಾಗದೆ ಪರದಾಡುತ್ತಿದ್ದಾರೆ.ಜಾಂಬ್ರಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಕಂದಕದ ವರೆಗೆ ಬಂದು ಮುಂದೆ ಚಲಿಸಲಾಗದೇ , ಪ್ರೇಕ್ಷಣೀಯ ಸ್ಥಳವನ್ನು ವೀಕ್ಷಿಸಲಾಗದೇ ಹಿಂದಿರುತ್ತಿದ್ದಾರೆ.ಕಂದಕ ತೆಗೆಯುವಾಗ ಇದ್ದ ಕರ್ತವ್ಯ ಪ್ರಜೆÒ,ಮುತುವರ್ಜಿ ಸ್ಥಳೀಯಾಡಳಿತ ಮತ್ತು ಇಲಾಖೆಗೆ ಯಾಕಿಲ್ಲ ? ಎಂದು ಜನರಾಡಿಕೊಳ್ಳುತ್ತಿದ್ದಾರೆ. ತೆರವು ಕಾರ್ಯ ನಡೆಯದೇ ಗಡಿಭಾಗದ ಜನರಿಗೆ ಅನ್ಯಾಯವಾಗಿದೆ.

ಪಾಣಾಜೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಫೋನ್‌ ಮೂಲಕ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಆಡಳಿತಾಧಿಕಾರಿ ಯಶಸ್‌ ಮಂಜುನಾಥ ರವರು ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಿ ಎರಡು ದಿನದಲ್ಲಿ ಮುಚ್ಚಿಸುವ ಭರವಸೆ ನೀಡಿದ್ದಾರೆ.

ಆರ್ಲಪದವು-ಕಡಂದೇಲು-ಗಿಳಿಯಾಲು-ಕೇರಳ ಸಂಪರ್ಕಿಸುವ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯವರ ಜೊತೆ ಮಾತನಾಡಿ ತೆರವು ಕಾರ್ಯಕ್ಕೆ ಕ್ರಮಕೈಗೊಳ್ಳಲಾಗುವುದು.
– ನವೀನ್‌ ಭಂಡಾರಿ,ತಾಲೂಕು ಕಾರ್ಯನಿರ್ವಹಣಾಧಿಕಾರಿ,ಪುತ್ತೂರು

ಕಳೆದ ಸುಮಾರು 6 ತಿಂಗಳಿನಿಂದ ರಸ್ತೆಯನ್ನು ಬಂದ್‌ ಮಾಡಲಾಗಿದೆ.ಅಂತರ್‌ ರಾಜ್ಯ ರಸ್ತೆ ಮುಕ್ತ ಅವಕಾಶ ನೀಡಿದರೂ ನಮಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ.ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನಹರಿಸಿ ತೆಗೆದ ಕಂದಕಗಳಿಗೆ ಮಣ್ಣು ಮುಚ್ಚಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ.
– ಜಿ.ಮಹಾಬಲೇಶ್ವರ ಭಟ್‌ ಗಿಳಿಯಾಲು,ಪಾಣಾಜೆ

ದಿನನಿತ್ಯದ ವಸ್ತುಗಳಿಗೆ ಆರ್ಲಪದವು ಪೇಟೆಯನ್ನು ಅವಲಂಬಿಸಿದ್ದಾನೆ.ಕರ್ನಾಟಕ ಪ್ರದೇಶದಲ್ಲಿ ಎರಡು ಕಡೆ ರಸ್ತೆಯನ್ನು ಬಂದ್‌ ಮಾಡಿರುವುದರಿಂದ ಆರ್ಲಪದವಿಗೆ ಬರಬೇಕಾದರೆ ಸುತ್ತಿ ಬಳಸಿ ಸಂಚಾರಿಸುತ್ತಿದ್ದಾನೆ.ಇದರಿಂದ ಸಮಯ ಮತ್ತು ಇಂಧನದ ಅಪ ವ್ಯಯವಾಗುತ್ತಿದೆ.ಕೂಡಲೇ ಮಣ್ಣು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು
– ಸಂತೋಷ್‌,ಕಿನ್ನಿಂಗಾರು,ನೆಟ್ಟಣಿಗೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

IPL-2

IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ ಸವಾರರು ಸ್ಥಳದಲ್ಲೇ ಸಾವು

IPLಹೈದರಾಬಾದ್‌ ಕಡಿವಾಣ; ಸಿಡಿಯದ ರಾಜಸ್ಥಾನ್‌ ಗೆಲುವಿಗೆ 155 ರ ಗುರಿ

ಹೈದರಾಬಾದ್‌ ಕಡಿವಾಣ; ಸಿಡಿಯದ ರಾಜಸ್ಥಾನ್‌; SRH ಗೆಲುವಿಗೆ 155ರ ಗುರಿ

Band-note

ಬಾಗಲಕೋಟೆ : ದಾಳಿ ವೇಳೆ ನಿಷೇಧಿತ ನೋಟು ನೋಡಿ ದಂಗಾದ ಎಸಿಬಿ ಅಧಿಕಾರಿಗಳು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳ: ಸಾರ್ವಜನಿಕರು ಜಾಗ್ರತೆ ಪಾಲಿಸಲು ಕರೆ

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳ: ಸಾರ್ವಜನಿಕರು ಜಾಗ್ರತೆ ಪಾಲಿಸಲು ಕರೆ

madikeri-tdy1

ಮಡಿಕೇರಿ ದಸರಾಕ್ಕೆ ಚಾಲನೆ

ತಲಕಾವೇರಿಯಲ್ಲಿ ತೀರ್ಥೋದ್ಭವ; ಸೀಮಿತ ಭಕ್ತರು

ತಲಕಾವೇರಿಯಲ್ಲಿ ತೀರ್ಥೋದ್ಭವ; ಸೀಮಿತ ಭಕ್ತರು

ಹುರಿಹಗ್ಗ ಉದ್ದಿಮೆ ವಲಯವನ್ನು ಮರಳಿ ಹಿಂದಿನ ವೈಭವದತ್ತ ಒಯ್ಯುವ ಯತ್ನ ಫಲಕಾಣುತ್ತಿದೆ

ಹುರಿಹಗ್ಗ ಉದ್ದಿಮೆ ವಲಯವನ್ನು ಮರಳಿ ಹಿಂದಿನ ವೈಭವದತ್ತ ಒಯ್ಯುವ ಯತ್ನ ಫಲಕಾಣುತ್ತಿದೆ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

IPL-2

IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ ಸವಾರರು ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.